ಕೋವಿಡ್ ಗೆ ಔಷಧವಾಗುವುದೇ ಅಶ್ವಗಂಧ? ; ವೈರಸ್‌ನ ಎಂಪ್ರೊ ಕಿಣ್ವ ಸೋಲಿಸುವಲ್ಲಿ ಯಶಸ್ವಿ
ದಿಲ್ಲಿ ಐಐಟಿ, ಜಪಾನ್ ಸಂಸ್ಥೆಯ ತಜ್ಞರ ಅಭಿಮತ
Team Udayavani, May 20, 2020, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತದ ಸಾಂಪ್ರದಾಯಿಕ ಔಷಧ ಪರಂಪರೆಯಲ್ಲಿ ಅಶ್ವಗಂಧ ಅಗ್ರಗಣ್ಯವಾಗಿದೆ. ಅದು ಕೋವಿಡ್ ವೈರಾಣುಗಳ ನಿರ್ಮೂಲನೆಗೂ ಸಂಜೀವಿನಿಯಾಗುವ ದಿನಗಳು ದೂರವಿಲ್ಲ!
ಹೌದು, ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ) ಮತ್ತು ಕೆಫೀಕ್ ಆ್ಯಸಿಡ್ ಫೆನೆಥೈಲ್ ಈಸ್ಟರ್‌ನಲ್ಲಿನ (ಕೇಪ್) ಸಂಯುಕ್ತ ಘಟಕಗಳು ಕೋವಿಡ್ ವೈರಾಣುಗಳ ಸಶಕ್ತ ಪ್ರತಿರೋಧಕಗಳನ್ನು ಉತ್ಪಾದಿಸುತ್ತವೆ ಎಂಬುದು ಸಾಬೀತಾಗಿದೆ.
ದಿಲ್ಲಿ ಐಐಟಿಯ ಡೈಲ್ಯಾಬ್ ಮತ್ತು ಜಪಾನಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಎಐಎಸ್‌ಟಿ) ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಪತ್ತೆಯಾಗಿದೆ.
ಕೋವಿಡ್ ವೈರಾಣುಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಮಾಡುವುದು ಅವುಗಳಲ್ಲಿ ಇರುವ ಎಂಪ್ರೊ ಕಿಣ್ವಗಳು. ಅಶ್ವಗಂಧದಲ್ಲಿರುವ ಘಟಕಗಳು ಎಂಪ್ರೊ ಕಿಣ್ವಗಳ ಆಕ್ರಮಣವನ್ನು ತಡೆಯಲು ಸಮರ್ಥವಾಗಿವೆ ಎಂದು ಡೈಲ್ಯಾಬ್‌ನ ಸಂಯೋಜಕ ಪ್ರೊ| ಡಿ. ಸುಂದರ್ ಹೇಳಿದ್ದಾರೆ.
ಆ್ಯಂಟಿ ವೈರಲ್
ಆಯುರ್ವೇದದಲ್ಲಿ ಅಶ್ವಗಂಧವು ಆ್ಯಂಟಿ ವೈರಲ್ ಔಷಧವಾಗಿ ಬಳಕೆಯಲ್ಲಿದೆ. ಇದನ್ನು ಗಮನಿಸಿದರೆ ಪ್ರಾಥಮಿಕ ಹಂತದಲ್ಲಿ ಅಶ್ವಗಂಧವು ಕೋವಿಡ್ ಗೆ ಪರಿಣಾಮಕಾರಿ ಔಷಧ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಇನ್ನೂ ಈ ಬಗ್ಗೆ ಆಳ ಅಧ್ಯಯನಗಳು ಆಗಬೇಕಿವೆ ಎನ್ನುತ್ತಾರೆ ಸುಂದರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.