ಉತ್ಪ್ರೇಕ್ಷೆಯ ಮೂಲಕ ಜನರಲ್ಲಿ ಕೋವಿಡ್ 19ನ ಭಯ ಮೂಡಿಸಲಾಗಿದೆ: ಎಲನ್ ಮಸ್ಕ್
Team Udayavani, Oct 1, 2020, 8:00 PM IST
ಮಣಿಪಾಲ: ಕೋವಿಡ್ -19ರ ಕಾರಣದಿಂದಾಗಿ ಇಡೀ ವಿಶ್ವ ಆರ್ಥಿಕತೆಯು ಆರ್ಥಿಕ ಹಿಂಜರಿತದ ಹಾದಿಯಲ್ಲಿದೆ. ಲಸಿಕೆಯನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ. ಈ ಪರಿಸ್ಥಿತಿಯಲ್ಲಿ ಅಮೆರಿಕದ ಖ್ಯಾತ ಉದ್ಯಮಿ ಎಲನ್ ಮಸ್ಕ್ ಅವರು ಮತ್ತು ಮಕ್ಕಳು ಲಸಿಕೆ ಬಳಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೋವಿಡ್ ವೈರಸ್ ಅನ್ನು ಉತ್ಪ್ರೇಕ್ಷೆಯಿಂದ ಪರಿಚಯಿಸಲಾಗಿದೆ ಅಷ್ಟೇ. ಯಾರೂ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪಾಡ್‌ಕಾಸ್ಟ್‌ನಲ್ಲಿ, ಸ್ಪೇಸ್ ಎಕ್ಸ್, ಟೆಸ್ಲಾ ಮತ್ತು ನ್ಯೂರಾಲಿಂಕ್ ಸಂಸ್ಥಾಪಕ ಮಸ್ಕ್ ಅವರು ತಮ್ಮ ಕುಟುಂಬಕ್ಕೆ ವೈರಸ್‌ನಿಂದ ಅಪಾಯವಿಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ವೈರಸ್ ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಸ್ಕ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ.
ಈ ಮೊದಲು ಯುಎಸ್ ಸೇರಿದಂತೆ ವಿಶ್ವದಾದ್ಯಂತ ವಿಧಿಸಲಾದ ಲಾಕ್‌ಡೌನ್ ಬಗ್ಗೆ ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು. ವೈರಸ್ ಅನ್ನು ಉತ್ಪ್ರೇಕ್ಷೆಯಿಂದ ಪರಿಚಯಿಸಲಾಗಿದೆ ಎಂದಿದ್ದಾರೆ. “ಇದರಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ’ ಎಂಬ ಪ್ರಶ್ನೆಗೆ ಉತ್ತರಿಸುವ ಅವರು ವ್ಯಕ್ತಿ ಜನಿಸಿದ ಮೇಲೆ ಸಾಯಲೇಬೇಕು ಎಂಬ ಉತ್ತರ ನೀಡಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ತನ್ನ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಸ್ಪೇಸ್‌ಎಕ್ಸ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮಸ್ಕ್ ಹೇಳಿಕೊಂಡಿದ್ದಾನೆ. ಸಾಂಕ್ರಾಮಿಕದಲ್ಲಿ ಸ್ಪೇಸ್‌ಎಕ್ಸ್ ನಾಸಾ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಲಾಕ್‌ಡೌನ್ ಹೇರುವ ಮೂಲಕ ಎಲ್ಲರನ್ನೂ ಮನೆಯಲ್ಲಿ ಕೂಡಿಡುವುದು ಒಳ್ಳೆಯದಲ್ಲ. ಈ ಕುರಿತಂತೆ ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಎಲನ್ ಮಸ್ಕ್ ಹೇಳಿದ್ದಾರೆ.
Why forced isolation is bad https://t.co/c2XCcRSx1C
— Elon Musk (@elonmusk) April 30, 2020
ಆಕ್ಸ್‌ಫರ್ಡ್ ಲಸಿಕೆ ರೆಡಿ
ಆಕ್ಸ್‌ಫರ್ಡ್‌ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಶೀಘ್ರದಲ್ಲೇ ಪರಿಶೀಲನೆಗೆ ಸಿದ್ಧವಾಗಲಿದೆ. ಯುರೋಪಿಯನ್ ನಿಯಂತ್ರಕರು ಈ ಲಸಿಕೆಯ ವೇಗವರ್ಧಿತ ವಿಮರ್ಶೆಯನ್ನು ಒಂದು ಅಥವಾ ಎರಡು ವಾರಗಳಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ. ಬ್ಲೂಮರ್ಗ್ ವರದಿಯ ಪ್ರಕಾರ ಕೋವಿಶೀಲ್ಡ್ ಯುರೋಪಿನಲ್ಲಿ ಅನುಮೋದನೆ ಪಡೆದ ಮೊದಲ ಲಸಿಕೆಯಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಲಸಿಕೆ ಬರುವುದಿಲ್ಲ
ಮುಂದಿನ ವರ್ಷಕ್ಕಿಂತ ಮೊದಲು ಅದರ ಲಸಿಕೆ ಬರುವುದಿಲ್ಲ ಎಂದು ಅಮೆರಿಕದ ಕಂಪನಿ ಮೊಡೆರ್ನಾ ಹೇಳಿದೆ. 2021ರ ಫೆಬ್ರವರಿ-ಮಾರ್ಚ್ ಅನಂತರವೇ ಲಸಿಕೆಗೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಯುಎಸ್ ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.