ಸಾವಿನ ಸಂಖ್ಯೆಯ ಲೆಕ್ಕ ತಪ್ಪಿಸಿತೇ ಬ್ರಿಟನ್?
ನರ್ಸಿಂಗ್ ಹೋಮ್‌ಗಳು, ಮನೆಗಳಲ್ಲಿ ಸಂಭವಿಸಿದ ಸಾವುಗಳ ಎಣಿಕೆ ಇಲ್ಲ
Team Udayavani, Apr 16, 2020, 3:33 PM IST
ಅಹಮದಾಬಾದ್: ಕರ್ತವ್ಯ ನಿರತ ಪೊಲೀಸ್ ಸಿಬಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು.
ಲಂಡನ್: ಬ್ರಿಟನ್‌ನಲ್ಲಿ ಸಾವಿನ ಪ್ರಮಾಣ ಸರಕಾರ ಹೇಳಿರುವುದಕ್ಕಿಂತಲೂ ಹೆಚ್ಚಿದೆಯೇ? ಹೌದು ಎನ್ನುತ್ತಿದೆ ನ್ಯೂಯಾರ್ಕ್ ಟೈಮ್ಸ್‌ನ ಒಂದು ವರದಿ. ಬ್ರಿಟನ್ ಸರಕಾರ ಕೋವಿಡ್-19 ವೈರಸ್ ಮಾನವರು ಮತ್ತು ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮವನ್ನು ಕಡಿಮೆ ಅಂದಾಜಿಸಿದೆ. ಭವಿಷ್ಯದಲ್ಲಿ ಇದು ಬ್ರಿಟನ್‌ಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಈ ವರದಿ ಎಚ್ಚರಿಸಿದೆ.
ಸರಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಇಷ್ಟರ ತನಕ 12,107 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ನರ್ಸಿಂಗ್ ಹೋಮ್‌ಗಳು ಮತ್ತು ಮನೆಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕ ಇದರಲ್ಲಿ ಸೇರಿಲ್ಲ. ಈ ಸಾವುಗಳನ್ನೂ ಸೇರಿಸಿಕೊಂಡರೆ ಸರಕಾರ ಹೇಳಿರುವುದಕ್ಕಿಂತ ಕನಿಷ್ಠವೆಂದರೂ ಶೇ. 10 ಹೆಚ್ಚು ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ.
ಇಷ್ಟು ಮಾತ್ರವಲ್ಲದೆ ಆರ್ಥಿಕತೆಯ ಮೇಲಾಗಿರುವ ಪರಿಣಾಮವನ್ನೂ ಬ್ರಿಟನ್ ಗಂಭೀರವಾಗಿ ಪರಿಗಣಿಸಿಲ್ಲ. ವಿತ್ತೀಯ ವ್ಯವಸ್ಥೆಯ ಮೇಲೆ ಕಣ್ಗಾವಲು ಇಡುವ ಬಜೆಟ್ ರೆಸ್ಪಾನ್ಸಿಬಿಲಿಟಿ ಹೇಳುವ ಪ್ರಕಾರ ದ್ವಿತೀಯ ತ್ತೈಮಾಸಿಕದಲ್ಲಿ ಬ್ರಿಟನ್ ಆರ್ಥಿಕತೆ ಶೇ. 35ರಷ್ಟು ಕುಸಿತ ಕಾಣಲಿದೆ. ಇಷ್ಟು ಮಾತ್ರವಲ್ಲ, ಸುಮಾರು 20 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದು ಸರಕಾರ ಹೇಳಿರುವ ಲೆಕ್ಕಕ್ಕಿಂತ ಎಷ್ಟೋ ಪಾಲು ಹೆಚ್ಚು.
ಈ ಅಂಕಿಅಂಶದ ಆಧಾರದಲ್ಲಿ ಹೇಳುವುದಾದರೆ ಬ್ರಿಟನ್‌ನ ಸ್ಥಿತಿ ಹೊರ ಜಗತ್ತು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಕಳವಳಕಾರಿಯಾಗಿದೆ. ಈಗಾಗಲೇ ಟೆಸ್ಟಿಂಗ್ ಕಿಟ್, ರಕ್ಷಣಾ ಪೋಷಾಕು, ವೆಂಟಿಲೇಟರ್ ಇತ್ಯಾದಿಗಳ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ ಬ್ರಿಟನ್ ಸರಕಾರ ವಾಸ್ತವ ಸ್ಥಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರಧಾನಿ ಬೋರಿಸ್ ಜಾನ್ಸನ್ ಕೋವಿಡ್ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದನ್ನೇ ಸರಕಾರ ಈಗ ಸಂಭ್ರಮಿಸುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಹೇಗೆ ಕೋವಿಡ್-19 ಪ್ರಸರಣವನ್ನು ಮತ್ತು ಆರ್ಥಿಕತೆಯ ಮೇಲೆ ಅದರ ದುಷ್ಪರಿಣಾಮವನ್ನು ತಡೆದಿದ್ದೇವೆ ನೋಡಿ ಎಂದು ಹೇಳಿಕೊಳ್ಳುತ್ತಿದೆ.
ವಿತ್ತ ಸಚಿವ ರಿಷಿ ಸುನಕ್ ಅವರಿಗೆ ವಾಸ್ತವ ಸ್ಥಿತಿಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿದೆ. ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಪ್ರಾಮಾಣಿಕವಾಗಿ ಜನರಿಗೆ ತಿಳಿಸಬೇಕು. ದೇಶ ಈಗ ಸಂಕಷ್ಟದಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳು ಬರಲಿವೆ ಎಂದಿದ್ದಾರೆ ಸುನಕ್.
ಅಮೆರಿಕ ಹಾಗೂ ಇತರ ಕೆಲವು ದೇಶಗಳಂತೆ ಬ್ರಿಟನ್‌ನಲ್ಲೂ ನರ್ಸಿಂಗ್ ಹೋಮ್‌ಗಳು ಸೋಂಕಿನ ಹಾಟ್‌ಸ್ಪಾಟ್ ಆಗಿವೆ. ಎರಡು ಪ್ರಮುಖ ಖಾಸಗಿ ನರ್ಸಿಂಗ್ ಹೋಮ್ ನಿರ್ವಾಹಕರು ಇತ್ತೀಚೆಗಿನ ಕೆಲವು ದಿನಗಳಲ್ಲಿ 521 ಮಂದಿ ಅಸುನೀಗಿರುವುದಾಗಿ ಹೇಳಿಕೊಂಡಿವೆ. ಆದರೆ ಈ ಸಾವುಗಳಿನ್ನೂ ಬ್ರಿಟನ್‌ನ ಅಧಿಕೃತ ಅಂಕಿಅಂಶಗಳಿಗೆ ಸೇರ್ಪಡೆಯಾಗಿಲ್ಲ.
ಸಾರ್ವಜನಿಕ ಆರೋಗ್ಯ ಇಲಾಖೆ ನಿತ್ಯ ಪ್ರಕಟಿಸುವ ಸಾವಿನ ಸಂಖ್ಯೆಯೇ ಈಗ ಬ್ರಿಟನ್‌ನಲ್ಲಿ ಕೋವಿಡ್‌ನ ಪರಿಣಾಮವನ್ನು ಲೆಕ್ಕಹಾಕುವ ಮಾಪಕ. ಆದರೆ ಈ ಅಂಕಿಅಂಶದಲ್ಲಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕವನ್ನು ಮಾತ್ರ ಹೇಳಲಾಗುತ್ತದೆ. ಸರಕಾರ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ತನ್ನ ವರ್ಚಸ್ಸು ವೃದ್ಧಿಗೆ ಗಮನ ಕೊಟ್ಟಿದೆಯೇ ಎಂಬ ಅನುಮಾನ ಈಗ ಕಾಡುತ್ತಿದೆ.
ಸಮರ್ಪಕ ವ್ಯವಸ್ಥೆಯಿಲ್ಲ
ನರ್ಸಿಂಗ್ ಹೋಮ್‌ಗಳಲ್ಲಿ ಸಂಭವಿಸುವ ಸಾವಿನ ಲೆಕ್ಕವನ್ನು ಸೇರಿಸಿಕೊಳ್ಳಲು ತಯಾರಿದ್ದೇವೆ. ಆದರೆ ಆಸ್ಪತ್ರೆಗಳಂತೆ ನರ್ಸಿಂಗ್ ಹೋಮ್‌ಗಳ ಸಾವಿನ ಲೆಕ್ಕವನ್ನು ಪ್ರಕಟಿಸುವ ಕೇಂದ್ರೀಕೃತ ವ್ಯವಸ್ಥೆಯಿಲ್ಲ ಎನ್ನುತ್ತಾರೆ ಬ್ರಿಟನ್ ಅಧಿಕಾರಿಗಳು.
2000 ನರ್ಸಿಂಗ್ ಹೋಮ್‌ಗಳಲ್ಲಿ ಕೋವಿಡ್
ಬ್ರಿಟನ್‌ನ ವೈದ್ಯಕೀಯ ಅಧಿಕಾರಿಯೊಬ್ಬರು ಹೇಳುವಂತೆ, ಶೇ. 13 ನರ್ಸಿಂಗ್ ಹೋಮ್‌ಗಳಲ್ಲಿ ಅಂದರೆ 2000ಕ್ಕೂ ಹೆಚ್ಚು ನರ್ಸಿಂಗ್ ಹೋಮ್‌ಗಳಲ್ಲಿ ಕೋವಿಡ್ ವೈರಸ್ ಸೋಂಕಿತರು ಇದ್ದಾರೆ. ಈ ನರ್ಸಿಂಗ್ ಹೋಮ್‌ಗಳ ಸಿಬಂದಿ ಮಾಸ್ಕ್, ಗ್ಲೌಸ್ ಮತ್ತಿತರ ಸುರಕ್ಷಾ ಸಾಧನಗಳ ಕೊರತೆಯಿರುವ ಕುರಿತು ದೂರಿಕೊಂಡಿದ್ದಾರೆ. ನರ್ಸಿಂಗ್ ಹೋಮ್‌ಗಳನ್ನು ಖಾಸಗಿಯವರು ಮತ್ತು ಸಮಾಜ ಸೇವಾ ಸಂಘಗಳು ನಡೆಸುವುದರಿಂದ ಸರಕಾರಕ್ಕೆ ಇವುಗಳಲ್ಲಿ ಸಂಭವಿಸುವ ಸಾವಿನ ಸಮರ್ಪಕ ವರದಿಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ.
ಒಂದು ಪುಟ್ಟ ಲೆಕ್ಕ
ವರ್ಷದ ಆರಂಭದಿಂದ ತೊಡಗಿ ಎ.3ರ ತನಕ ಇಂಗ್ಲಂಡ್ ಮತ್ತು ವೇಲ್ಸ್‌ನ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕ್ರಮವಾಗಿ 217 ಮತ್ತು 136 ಮಂದಿ ಅಸುನೀಗಿದ್ದಾರೆ. ಕೋವಿಡ್‌ನಿಂದ ಶೇ. 90 ಸಾವುಗಳು ಸಂಭವಿಸಿರುವುದು ಆಸ್ಪತ್ರೆಗಳಲ್ಲಿ. ಉಳಿದ ಶೇ. 10 ಸಾವುಗಳು ನರ್ಸಿಂಗ್ ಹೋಮ್‌ಗಳು ಅಥವಾ ಮನೆಗಳಲ್ಲಿ ಸಂಭವಿಸಿವೆ. ಈ ಅಂಕಿಅಂಶದಲ್ಲಿ ಸ್ಕಾಟ್‌ಲ್ಯಾಂಡ್ ಮತ್ತು ನಾರ್ದರ್ನ್ ಐಲ್ಯಾಂಡ್‌ನ ಸಾವುಗಳು ಸೇರಿಲ್ಲ.
ಪರೀಕ್ಷೆ ಸೌಲಭ್ಯದ ಕೊರತೆ
ಬ್ರಿಟನ್‌ನಲ್ಲಿ ಪರೀಕ್ಷಾ ಸೌಲಭ್ಯಗಳ ತೀವ್ರ ಕೊರತೆಯಿದೆ. ಹೀಗಾಗಿ ಯಾವ ರೋಗದಿಂದ ಸತ್ತಿದ್ದಾರೆ ಎಂಬ ಖಚಿತ ಲೆಕ್ಕ ಸಿಗುತ್ತಿಲ್ಲ. ನಿತ್ಯ 1 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸರಕಾರ ಹೇಳಿದ್ದರೂ ಇಷ್ಟರ ತನಕ ಸಾಧ್ಯವಾಗಿರುವುದು ಸರಾಸರಿ 14,500 ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.