ಚೀನದಲ್ಲೀಗ ಬ್ಯುಬೋನಿಕ್ ಪ್ಲೇಗ್
ಚೀನದ ಉತ್ತರ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದ ಹೊಸ ರೋಗ
Team Udayavani, Jul 7, 2020, 2:40 PM IST
ಸಾಂದರ್ಭಿಕ ಚಿತ್ರ
ಬೀಜಿಂಗ್: ಡ್ರ್ಯಾಗನ್ ದೇಶದಲ್ಲಿ ಕೋವಿಡ್ ವೈರಸ್ ಅನಂತರ ಮತ್ತೂಂದು ಆತಂಕಕಾರಿ ಪ್ಲೇಗ್ ಕಾಣಿಸಿಕೊಂಡಿದ್ದು, ಇದು ಕೂಡ ಸಾಂಕ್ರಾಮಿಕ ರೋಗ ಎಂದು ಅಲ್ಲಿನ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದನ್ನು ಬ್ಯುಬೋನಿಕ್ ಪ್ಲೇಗ್ ಎಂದು ಕರೆಯಲಾಗುತ್ತಿದ್ದು, ಚೀನದ ಉತ್ತರ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.
ಮಂಗೋಲಿಯಾದಲ್ಲಿ ಬ್ಯುಬೋನಿಕ್ ಹಾವಳಿ
ಹಿಂದಿನ ವರ್ಷ ಚೀನದ ಉತ್ತರ ಭಾಗದಲ್ಲಿರುವ ಆ ದೇಶದ ಸ್ವಾಯುತ್ತ ಪ್ರದೇಶವಾದ ಒಳ ಮಂಗೋಲಿಯಾದಲ್ಲಿ ಹಾಗೂ ಚೀನದ ರಾಜಧಾನಿ ಬೀಜಿಂಗ್‌ನಲ್ಲಿ ತಲಾ ಒಬ್ಬೊಬ್ಬರಿಗೆ ಈ ಬಬೋನಿಕ್ ಪ್ಲೇಗ್ ಕಾಣಿಸಿಕೊಂಡಿದ್ದು, ಸದ್ಯ ಬಯನ್ನೂರ್ ಮುನಿಸಿಪಲ್ ಹೆಲ್ತ… ಕಮಿಷನ್ ಈ ಕುರಿತು ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಿದೆ. ಚೀನದ ಆಡಳಿತ ವಿಭಾಗವಾದ ಉರಾದ್ ಮಿಡಲ್ ಬೆನ್ನಾರ್‌ಎಂಬಲ್ಲಿರುವ ಆಸ್ಪತ್ರೆಯಲ್ಲಿ ಈ ಪ್ಲೇಗ್ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಾದರೆ ತಿಳಿಸಿ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣ ಹೊಂದಿದ್ದು, ಯಾವುದಾದರೂ ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಾದರೆ ಕೂಡಲೇ ಸರಕಾರಕ್ಕೆ ವರದಿ ಮಾಡಬೇಕು. ಜತೆಗೆ ಜತೆಗೆ 2020ರ ಅಂತ್ಯದವರೆಗೆ ಮುಂಜಾಗ್ರತೆ ವಹಿಸಬೇಕೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
24 ಗಂಟೆಯಲ್ಲಿ ಸಾವನ್ನಪ್ಪುವ ಸಾಧ್ಯತೆ
ಬಬೋನಿಕ್ ಪ್ಲೇಗ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಚೀನದಲ್ಲಿ ಕಾಣಿಸುವ ಮುಂಗುಸಿಯಂತಹ ಪ್ರಾಣಿಗಳ ಮೈಮೇಲಿನ ಉಣ್ಣೆಯಲ್ಲಿ ಉತ್ಪಾದನೆಯಾಗುವ ಚಿಗಟಗಳ ಮೂಲಕ ಹರಡುತ್ತದೆ. ಈ ಪ್ಲೇಗ್ ಹರಡಿದ ವ್ಯಕ್ತಿ ಯಾವುದೇ ಚಿಕಿತ್ಸೆ ಪಡೆಯದಿದ್ದರೆ ಕೇವಲ 24 ಗಂಟೆಯಲ್ಲಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಲಕ್ಷಣಗಳು
ಕಳೆದ ವರ್ಷವಷ್ಟೇ ಪ್ರಾಣಿಯ ಮಾಂಸ ಸೇವಿಸಿ ಇಬ್ಬರು ಮೃತಪಟ್ಟಿದ್ದು, ಬೋನಿಕ್ ಪ್ಲೇಗ್‌ನ ಲಕ್ಷಣಗಳು ಬ್ಯುಬೋನಿಕ್ ಪ್ಲೇಗ್ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ವಿಶೇಷವಾಗಿ ಆಯಾಸ, ದುಗ್ಧರಸ ಗ್ರಂಥಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಈ ಬ್ಯಾಕ್ಟೀರಿಯಾ ಹರಡಿದೆ. ಮೊದಲಿಗೆ ದುಗ್ಧರಸ ಗ್ರಂಥಿಗಳ ಮೇಲೆ ಈ ಬ್ಯಾಕ್ಟೀರಿಯಾ ಪರಿಣಾಮ ಬೀರುತ್ತದೆ. ಈ ವೇಳೆ, ಚಿಕಿತ್ಸೆ ನೀಡದಿದ್ದರೆ ದೇಹದ ಇತರ ಭಾಗಗಳಿಗೆ ಬ್ಯಾಕ್ಟೀರಿಯಾ ಹರಡಲಿದ್ದು, ಸಾವು ಸಂಭವಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.