ಇವರ ಸೇವೆ ಮರೆಯಲು ಸಾಧ್ಯವೇ?
Team Udayavani, Apr 6, 2020, 2:05 PM IST
ಮಣಿಪಾಲ: ಕೋವಿಡ್- 19 ವಿರುದ್ಧ ಹೋರಾಡಲು ವಿಶ್ವದ ಪ್ರತಿಯೋರ್ವ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಶ್ರಮಿಸುತ್ತಿದ್ದಾನೆ. ಆ ಪೈಕಿ ಸಿಂಹ ಪಾಲು ಯಾರದು ಎಂಬ ಪ್ರಶ್ನೆ ಮೂಡಿದರೇ ವೈದ್ಯಕೀಯ ಕ್ಷೇತ್ರ ಎಂಬ ಉದ್ಗಾರ ಕೇಳಿ ಬರುತ್ತದೆ. ಇದೀಗ ಈ ಮಾತಿಗೆ ಮತ್ತಷ್ಟು ಪುಷ್ಟಿ ಎಂಬುವಂತೆ ಇವರ ಸೇವೆಯನ್ನು ತಿಳಿಯಬೇಕು. ತುಂಬು ಗರ್ಭಿಣಿಯಾಗಿರುವ ನರ್ಸ್ ಒಬ್ಬರು 250 ಕಿ.ಮೀ ಪ್ರಯಾಣಿಸಿ ಕೋವಿಡ್- 19 ಸೋಂಕು ಪೀಡಿತರ ಸೇವೆ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ತಮಿಳುನಾಡಿನ ತಿರುಚ್ಚಿಯ ಎಸ್.ವಿನೋದಿನಿ ಎಂಬ ನರ್ಸ್ ಕೋವಿಡ್- 19 ಸೋಂಕಿತರ ಶುಶ್ರೂಷೆಯಲ್ಲಿ ಕಾರ್ಯ ನಿರತರಾಗಿದ್ದು, ನಿತ್ಯವೂ ತಿರುಚ್ಚಿಯಿಂದ ರಾಮನಾಥಪುರಂಗೆ 250 ಕಿ.ಮೀ ಪ್ರಯಾಣಿಸಿ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕರಿಸುತ್ತಿದ್ದಾರೆ.
ಈ ಮುನ್ನ ತಿರುಚ್ಚಿಯ ಖಾಸಗಿ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಈಕೆಗೆ ರಾಮನಾಥ ಪುರಂನ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ(ಜೆಡಿ)ರಿಂದ ಇಲ್ಲಿನ ಪ್ರಾಥಮಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ಬಂದಿತು. ಕೋವಿಡ್-19 ತೀವ್ರತೆ ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದಕ್ಕೆ ಯಾವುದೇ ಮಾರುತ್ತರ ನೀಡದೇ ವಿನೋದಿನಿ ಎ. 1 ರಿಂದಲೇ ವಿನೋದಿನಿ ಕರ್ತವ್ಯಕ್ಕೆ ಹಾಜರಾಗಿ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ. ಸಣ್ಣ ಸಣ್ಣ ನೆವಕ್ಕೂ ಕೆಲಸದಿಂದ ತಪ್ಪಿಸಿಕೊಂಡು ಆರಾಮಾಗಿ ಇರಲು ಪ್ರಯತ್ನಿಸುವವರೇ ಹೆಚ್ಚಿರುವ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗುವ ಹಾಗೆ ವರ್ತಿಸಿದ ದಾದಿಯ ಕುರಿತು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
MUST WATCH
ಹೊಸ ಸೇರ್ಪಡೆ
3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ
Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಆದೇಶ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.