ದೇಶೀಯ ಲಸಿಕೆ ಬಳಕೆಗೆ ಚೀನ ಸಮ್ಮತಿ
ಸೀಮಿತ ಅವಧಿಯಲ್ಲಿ ಸೋಂಕಿಗೆ ತುತ್ತಾಗಿರುವ ಜನರು ಬಳಕೆ ಮಾಡಲು ಅನುಮತಿ ನೀಡಲಾಗಿದೆ.
Team Udayavani, Aug 29, 2020, 9:51 AM IST
ಬೀಜಿಂಗ್: ದೇಶೀಯವಾಗಿ ಸಂಶೋಧಿಸುತ್ತಿರುವ ಕೆಲವು ಕೊರೊನಾ ಲಸಿಕೆಗಳನ್ನು ತುರ್ತು ಬಳಕೆ ಘೋಷಣೆಯಡಿ ನಾಗರಿಕರಿಗೆ ನೀಡಲು ಚೀನ ಮುಂದಾಗಿದೆ. ಕೆಲವು ಆಯ್ದ ದೇಶೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗಳ ತುರ್ತು ಬಳಕೆಯನ್ನು ಚೀನ ಅಧಿಕೃತಗೊಳಿಸಿದೆ ಎಂದು ಚೀನದ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನದ ಲಸಿಕೆ ನಿರ್ವಹಣಾ ಕಾನೂನನ್ನು ಆಧರಿಸಿದ ತುರ್ತು ಬಳಕೆಯ ಘೋಷಣೆಯಡಿ, ಸೀಮಿತ ಅವಧಿಯಲ್ಲಿ ಸೋಂಕಿಗೆ ತುತ್ತಾಗಿರುವ ಜನರು ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ತುರ್ತು ಬಳಕೆಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆಯೆ ಮತ್ತು ಮೇಲ್ವಿಚಾರಣೆ ಡೆಸಲಾಗುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿ ಕೂಡ ರಚಿಸಲಾಗಿದ್ದು, ಪರಿಹಾರ ಯೋಜನೆಯೂ ಸೇರಿದಂತೆ ಹಲವಾರು ಪ್ಯಾಕೇಜ್‌ಗಳನ್ನು ಒಳಗೊಂಡ ತುರ್ತು ಬಳಕೆ ಘೋಷಣೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚೀನದ ಕೊರೊನಾ ವೈರಸ್ ಅಭಿವೃದ್ಧಿ ಕಾರ್ಯಪಡೆ ಮುಖ್ಯಸ್ಥ ಜೆನ್ ಜಾಂಗ್ವಿ, ತುರ್ತು ಬಳಕೆ ಆದೇಶದನ್ವಯ ಕೇವಲ ಸೀಮಿತ ಸೋಂಕಿತರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಜುಲೈ 22ರಂದೇ ಚೀನ ಕೊರೊನಾ ಲಸಿಕೆಗಳ ಬಳಕೆಯನ್ನು ಅಧಿಕೃತಗೊಳಿಸಿದೆ. ಆದರೆ ಈ ಎಲ್ಲ ಲಸಿಕೆಗಳು ಸಂಶೋಧನಾ ಹಂತದಲ್ಲಿದ್ದು, ಅವುಗಳಲ್ಲಿ ಕೆಲವು ಆಯ್ದ ಲಸಿಕೆಗಳನ್ನು ಮಾತ್ರ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆ ನಿರ್ವಹಣೆಯ ಚೀನದ ಕಾನೂನಿನ ಪ್ರಕಾರ, ತೀವ್ರವಾದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಸಂಭವಿಸಿದಾಗ, ವೈದ್ಯಕೀಯ ಮತ್ತು ಸಾಂಕ್ರಾಮಿಕ ತಡೆಗಟ್ಟುವ ಸಿಬಂದಿ, ಯೋಧರು ಹಾಗೂ ಸ್ಥಿರ ನಗರ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ಇತರ ಜನರನ್ನು ರಕ್ಷಿಸಲು ಕ್ಲಿನಿಕಲ್ ಪ್ರಯೋಗಗಳಲ್ಲಿನ ಲಸಿಕೆಗಳನ್ನು ಸೀಮಿತ ವ್ಯಾಪ್ತಿಯಲ್ಲಿ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.