ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ವಿತರಿಸಲು ಚೀನ ಅನುಮೋದನೆ
Team Udayavani, Aug 25, 2020, 3:53 AM IST
ಥಾಣೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸಿಬಂದಿ ಮಾಸ್ಕ್ ಧರಿಸಿ ಗಣೇಶನಿಗೆ ಆರತಿ ಬೆಳಗುತ್ತಿರುವುದು.
ಬೀಜಿಂಗ್: ಲಸಿಕೆಯ ಕ್ರೆಡಿಟ್ ಪಡೆದುಕೊಳ್ಳಲು ಹಲವು ದೇಶಗಳು ಪೈಪೋಟಿಯಲ್ಲಿ ನಿರತವಾಗಿದೆ. ಇದೀಗ ಅನುಮೋದನೆಗೆ ಮುಂಚಿತವಾಗಿ ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ಬಳಕೆಯನ್ನು ಚೀನ ಈಗಾಗಲೇ ಅನುಮೋದಿಸಿದೆ. ಈ ಲಸಿಕೆಯನ್ನು ಚೀನದ ಕಂಪನಿಯೊಂದು ಸಿದ್ಧಪಡಿಸಿದೆ. ಚೀನದ ಅಧಿಕಾರಿಯೊಬ್ಬರ ಪ್ರಕಾರ, ಲಸಿಕೆ ಬಳಕೆಯನ್ನು ಲಸಿಕೆ ನಿರ್ವಹಣಾ ಕಾಯ್ದೆಯಡಿ ಅನುಮೋದಿಸಲಾಗಿದೆ. ಈ ಕಾನೂನಿನ ಅನ್ವಯ ಲಸಿಕೆಯನ್ನು ಅನುಮೋದಿಸುವ ಮೊದಲು ಅಪಾಯದ ವಲಯದಲ್ಲಿರು ವವರಿಗೆ ನೀಡಬ ಹುದು.
ಮಾಧ್ಯಮ ವರದಿಗಳ ಪ್ರಕಾರ ಜುಲೈನಿಂದ ಚೀನದಲ್ಲಿ ಜನರಿಗೆ ಲಸಿಕೆ ನೀಡಲಾಗಿದೆ. ಒಂದು ತಿಂಗಳ ಹಿಂದೆ, ಜುಲೈ 22ರಂದು, ಕೋವಿಡ್ -19 ಲಸಿಕೆಯನ್ನು ತುರ್ತು ಬಳಕೆಗಾಗಿ ಅಧಿಕೃತವಾಗಿ ಚೀನ ಪ್ರಾರಂಭಿಸಿತ್ತು. ಬಳಿಕದ ದಿನಗಳಲಿ ಪ್ರಯೋಗಗಳು ಮುಂದುವರೆದವು. ಲಸಿಕೆಯ ಮೊದಲ ಪ್ರಮಾಣವನ್ನು ನೀಡಿದ ಕೆಲವು ಜನರಲ್ಲಿ ಸೌಮ್ಯವಾದ ಸ್ಪಂದನೆ ವ್ಯಕ್ತವಾಗಿದೆ ಎನ್ನಲಾಗಿದೆ. ಯಾರಿಗೂ ಜ್ವರ ಇರಲಿಲ್ಲ.
ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ಯೋಜನೆಯನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಬರುವ ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಯಲು ಯೋಜಿಸುತ್ತೇವೆ. ಲಸಿಕೆ ಲಭ್ಯತೆಯ ವ್ಯಾಪ್ತಿಯನ್ನು ಮುಂಬರುವ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದರು. ಲಸಿಕೆ ಪ್ರಮಾಣವನ್ನು ಅನೇಕ ಕ್ಷೇತ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಚೀನ ತನ್ನ ಅಂಕಿಅಂಶಗಳನ್ನು ಬಿಡುಗಡೆ ಮಾಡದೇ ಇರುವ ಕಾರಣ ಎಷ್ಟು ಜನರಿಗೆ ಡೋಸ್ ನೀಡಲಾಯಿತು? ಇದರ ನಿಖರ ಮಾಹಿತಿ ದೊರೆಯುವುದು ಕಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.