ಅಂತೂ ಬಯಲಾಗುತ್ತಿವೆ ಚೀನದ ಪ್ರಮಾದಗಳು
ಮೊದಲೇ ಎಚ್ಚರಿಸಿದ್ದರೆ ಜಗತ್ತು ಸಂಕಷ್ಟದಿಂದ ಪಾರು
Team Udayavani, Apr 16, 2020, 3:54 PM IST
ವುಹಾನ್: ಕೋವಿಡ್ ವಿರುದ್ಧ ಹೋರಾಡಲು ಹೊರಗಿನಿಂದ ಬಂದ ಆರೋಗ್ಯ ಕಾರ್ಯಕರ್ತರನ್ನು ಭಾವಪೂರ್ಣವಾಗಿ ಬೀಳ್ಕೊಡಲಾಯಿತು.
ಬೀಜಿಂಗ್: ಕೋವಿಡ್-19 ಕುರಿತಾದ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿ ನೀಡಿದ್ದೇವೆ ಎಂದು ಚೀನ ಎಷ್ಟೇ ಹೇಳಿದರೂ ಆರಂಭದ ದಿನಗಳಲ್ಲಿ ಅದು ಮಾಡಿದ ಪ್ರಮಾದಗಳು ಈಗ ಒಂದೊಂದಾಗಿ ಬಯಲಾಗುತ್ತಿವೆ.
ಕೋವಿಡ್-19 ಜಾಗತಿಕ ಪಿಡುಗು ಆಗುವ ವಿಚಾರವನ್ನು ಚೀನ ಆರು ದಿನ ಸಾರ್ವಜನಿಕರಿಂದ ರಹಸ್ಯವಾಗಿಟ್ಟಿತ್ತು. ವೈರಸ್ ಹರಡುವಲ್ಲಿ ಈ ಆರು ದಿನಗಳೇ ನಿರ್ಣಾಯಕ ವಾಗಿದ್ದವು. ಒಂದು ವೇಳೆ ಚೀನ ಸರಕಾರ ಮೊದಲೇ ಎಚ್ಚರಿಸಿದ್ದರೆ ಜಗತ್ತು ಇಷ್ಟು ಸಂಕಷ್ಟಗಳನ್ನು ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ ಎಂದು ದ ಅಸೋಸಿಯೇಟೆಡ್ ಪ್ರಸ್ ವರದಿ ಮಾಡಿದೆ.
ಚೀನದ ಉನ್ನತ ಅಧಿಕಾರಿಗಳಿಗೆ ಕೋವಿಡ್ ಜಾಗತಿಕ ಪಿಡುಗು ಆಗುವ ಸುಳಿವು ಸಿಕ್ಕಿತ್ತು. ಆದರೆ ಚೀನ ಸರಕಾರ ವಿಶ್ವಸಂಸ್ಥೆಗೆ ಈ ವಿಚಾರವನ್ನು ತಿಳಿಸದಂತೆ ಅವರನ್ನು ನಿರ್ಬಂಧಿಸಿತ್ತು. ಕೋವಿಡ್-19 ಹರಡುತ್ತಿರುವ ವಿಚಾರ ಗೊತ್ತಿದ್ದೂ ವುಹಾನ್‌ನಲ್ಲಿ ದೊಡ್ಡ ಮಟ್ಟದ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಚೀನಿ ಹೊಸ ವರ್ಷಾಚರಣೆಗಾಗಿ ಜಗತ್ತಿನ ವಿವಿಧೆಡೆಗಳಿಂದ ಜನರು ಬರಲಾರಂಭಿಸಿದ್ದರು.
ಏಳನೇ ದಿನ ಅಂದರೆ ಜ. 20ರಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೋವಿಡ್-19 ವಿರುದ್ಧ ಎಚ್ಚರಿಕೆ ಜಾರಿಗೊಳಿಸಿದರು. ಆದರೆ ಅಷ್ಟರಲ್ಲಿ ಬಹಳ ತಡವಾಗಿತ್ತು. ಒಂದು ವೇಳೆ ಈ ಕೆಲಸವನ್ನು ಮೊದಲೇ ಮಾಡಿದ್ದರೆ ಕೋವಿಡ್ ವುಹಾನ್‌ಗಷ್ಟೇ ಸೀಮಿತವಾಗುತ್ತಿತ್ತು.
ಜಿನ್‌ಪಿಂಗ್ ಎಚ್ಚರಿಕೆ ಜಾರಿಗೊಳಿಸುವಷ್ಟರಲ್ಲಿ 3000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದರು. ಜ.14ರಿಂದ 20 ತನಕ ಚೀನ ಕೋವಿಡ್ ಮಾಹಿತಿಯನ್ನು ರಹಸ್ಯವಾಗಿಟ್ಟದ್ದು ಮಹಾ ಪ್ರಮಾದವೇ ಆಗಿತ್ತು. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೋವಿಡ್ ಪಿಡುಗಿಗೆ ಚೀನವನ್ನು ದೂಷಿಸುತ್ತಿರುವುದರಲ್ಲಿ ತಥ್ಯವಿದೆ ಎಂದು ವರದಿ ಹೇಳಿದೆ.
ಚೀನ ಸಾಕಷ್ಟು ಮುಂಚಿತವಾಗಿ ವೈರಸ್ ಪ್ರಸರಣವನ್ನು ತಡೆಯಲು ಕ್ರಮ ಕೈಗೊಂಡಿದ್ದರೆ ಇರುವ ವೈದ್ಯಕೀಯ ಸೌಲಭ್ಯವೇ ಸಾಕಾಗುತ್ತಿತ್ತು. ವುಹಾನ್‌ನ ವೈದ್ಯಕೀಯ ಸೌಲಭ್ಯಗಳಿಂದಲೇ ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತು ಎನ್ನುತ್ತಾರೆ ಕ್ಯಾಲಿಫೋರ್ನಿಯ ವಿವಿಯ ವೈರಾಣು ತಜ್ಞ ಝುವೊ ಫೆಂಗ್ ಝಂಗ್.
ಜನರು ಗಾಬರಿಯಾಗುವುದನ್ನು ತಡೆಯಲು ಚೀನ ಸರಕಾರ ಮಾಹಿತಿ ಬಹಿರಂಗಪಡಿಸಲು ತಡ ಮಾಡಿರಬಹುದು. ಆದರೆ ಇದಕ್ಕಾಗಿ ಇಡೀ ಜಗತ್ತು ಬೆಲೆ ತೆರಬೇಕಾಗಿ ಬಂದಿದೆ. ಜ.5ರಿಂದ 17ರ ನಡುವೆ ವುಹಾನ್ ಮಾತ್ರವಲ್ಲದೆ ಚೀನದ ಇತರೆಡೆಗಳಲ್ಲೂ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಿದ್ದರು. ಆದರೆ ಚೀನ ಸರಕಾರ ಸಾಮಾನ್ಯವಾದ ವೈರಲ್ ಜ್ವರವೆಂದೇ ಭಾವಿಸಿತ್ತು.
ಮಾಧ್ಯಮಗಳ ಮೇಲಿನ ಉಡದ ಹಿಡಿತ, ಮಾಹಿತಿ ಹಂಚುವಿಕೆಗೆ ಇರುವ ನಿರ್ಬಂಧಗಳು, ಅಧಿಕಾರಶಾಹಿಯ ಅಡಚಣೆಗಳು, ಕೆಟ್ಟ ಸುದ್ದಿಯನ್ನು ಹಂಚಲು ಇರುವ ಅಂಜಿಕೆ ಇತ್ಯಾದಿ ಕಾರಣಗಳಿಂದ ಚೀನ ಮೊದಲೇ ಎಚ್ಚರಿಕೆ ನೀಡಲು ವಿಫಲವಾಗಿರುವ ಸಾಧ್ಯತೆಗಳಿವೆ. “ಕೋವಿಡ್ ವದಂತಿ’ಗಳನ್ನು ಹರಡಿದ್ದಕ್ಕೆ 9 ವೈದ್ಯರನ್ನು ಜೈಲಿಗಟ್ಟಿದ ಸುದ್ದಿ ಜ.2ರಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾದ ಬಳಿಕವಂತೂ ವೈದ್ಯಕೀಯ ಸಮುದಾಯ ಭೀತಿಯಿಂದ ನಡುಗಿತು.
ಜ.13ರಂದು ಚೀನದ ಹೊರಗಿನ ಮೊದಲ ಪ್ರಕರಣ ಥಾಯ್ಲೆಂಡ್‌ನಿಂದ ವರದಿಯಾಯಿತು. ಆ ಬಳಿಕವೇ ಚೀನ ಸರಕಾರಕ್ಕೆ ಪರಿಸ್ಥಿತಿ ಕೈ ಮೀರಿದೆ ಎಂದು ಅರಿವಾದದ್ದು. ಅನಂತರವೇ ಚೀನ ದೇಶಾದ್ಯಂತ ಟೆಸ್ಟ್ ಕಿಟ್‌ಗಳನ್ನು ವಿತರಿಸಲು ತೊಡಗಿದ್ದಲ್ಲದೇ, ಆರೋಗ್ಯಾಧಿಕಾರಿಗಳಿಗೆ ಶಂಕಿತರನ್ನು ಪರೀಕ್ಷಿಸಲು ಆದೇಶಿಸಿತು. ವೈರಸ್ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕ್ಸಿ ಜಿನ್‌ಪಿಂಗ್ ಬಹಿರಂಗ ಹೇಳಿಕೆ ನೀಡಿದ್ದೇ ಜ.20ರಂದು. ಒಂದು ವೇಳೆ ಒಂದು ವಾರದ ಮೊದಲೇ ಜನರಿಗೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಪ್ರಯಾಣ ನಿರ್ಬಂಧ ಇತ್ಯಾದಿ ಮುನ್ನೆಚ್ಚರಿಕೆಗಳನ್ನು ನೀಡಿದ್ದರೆ ಚೀನವೂ ಕೋವಿಡ್‌ನ ದೊಡ್ಡ ಹೊಡೆತದಿಂದ ಪಾರಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.