ಕೋವಿಡ್ 19: ದೆಹಲಿಯಲ್ಲಿ 30 ಹಾಟ್ ಸ್ಪಾಟ್, ಸೋಂಕು ಪೀಡಿತರ ಸಂಖ್ಯೆ 900ಕ್ಕೆ ಏರಿಕೆ
ದೆಹಲಿಯ ದಿಲ್ ಶಾದ್ ಗಾರ್ಡನ್ ಇದೀಗ "ಕೋವಿಡ್ ಮುಕ್ತ" ಪ್ರದೇಶವಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
Team Udayavani, Apr 11, 2020, 12:15 PM IST
Representative Image
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಸೋಂಕಿಗೆ ಮತ್ತೆ ಇಬ್ಬರು ಬಲಿಯಾಗಿದ್ದು, ಶುಕ್ರವಾರ ಒಂದೇ ದಿನ 183 ಕೋವಿಡ್ 19 ವೈರಸ್ ಸೋಂಕಿತರ ಪ್ರಕರಣ ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ ದಿಲ್ಲಿಯಲ್ಲಿ ಒಟ್ಟು ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 903ಕ್ಕೆ ಏರಿದಂತಾಗಿದೆ. 14 ಜನರು ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಅಂಕಿಅಂಶದ ಪ್ರಕಾರ, ದೆಹಲಿಯಲ್ಲಿ ಕೋವಿಡ್ 19ರ ಸುಮಾರು 30 ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಸೋಂಕು ಹರಡದಂತೆ ತಡೆಗಟ್ಟಲು ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಿಲ್ಲಿಯ ನಬಿ ಕರೀಂ, ಝಾಕೀರ್ ನಗರ್ ಮತ್ತು ಚಾಂದಿನಿ ಮಹಲ್ ನೂತನ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಕೈಗೊಂಡ “ಸೀಲ್ಡ್ ಪ್ರೋಟೊಕಾಲ್ ನಿಂದಾಗಿ ಪೂರ್ವ ದೆಹಲಿಯ ದಿಲ್ ಶಾದ್ ಗಾರ್ಡನ್ ಇದೀಗ “ಕೋವಿಡ್ ಮುಕ್ತ” ಪ್ರದೇಶವಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ದಿಲ್ ಶಾದ್ ಗಾರ್ಡನ್ ಪ್ರದೇಶದಿಂದ ಕೋವಿಡ್ 19ನ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಹೇಳಿದರು. ಸೀಲ್ಡ್ ಪ್ರಕ್ರಿಯೆಯಲ್ಲಿ, ಸೀಲಿಂಗ್, ಹೋಮ್ ಕ್ವಾರಂಟೈನ್, ಐಸೋಲೇಶನ್, ಪತ್ತೆಹಚ್ಚುವಿಕೆ, ಅಗತ್ಯ ವಸ್ತುಗಳ ಪೂರೈಕೆ, ಸ್ಥಳೀಯ ಶುಚಿತ್ವ ಹಾಗೂ ಡೋರ್ ಟು ಡೋರ್ ತಪಾಸಣೆ ಸೇರಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.