ಕೋವಿಡ್ ಸುಳ್ಳು ಸುದ್ದಿಗಳು: ಹೊಸ ಸಂವಹನ ನಿಯಮ ಜಾರಿಯಾಗಿಲ್ಲ
Team Udayavani, Apr 9, 2020, 1:44 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ.
ಹೊಸ ಸಂವಹನ ನಿಯಮ ಜಾರಿಯಾಗಿಲ್ಲ
ಭಾರತದಲ್ಲಿ ಹೊಸ ಸಂವಹನ ನಿಯಮಗಳು ಜಾರಿಗೆ ಬಂದಿವೆ. ಎಲ್ಲಾ ಕರೆಗಳನ್ನು ದಾಖಲಿಸಲಾಗಿದೆ, ಎಲ್ಲಾ ಫೋನ್ ಕರೆ ರೆಕಾರ್ಡಿಂಗ್ ಗಳನ್ನೂ ಉಳಿಸಲಾಗಿದೆ, ವಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ… ಎಂಬಂಥ ಇಷ್ಟುದ್ದದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.
ಜತೆಗೆ, ರಾಜಕೀಯ ಹಾಗೂ ಧಾರ್ಮಿಕ ಅಂಶಗಳನ್ನು ಹೊಂದಿರುವ ಎಲ್ಲ ಸಂದೇಶಗಳನ್ನೂ ಟ್ರ್ಯಾಕ್ ಮಾಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಈ ಸಂದೇಶದಲ್ಲಿ ರವಾನಿಸಲಾಗಿದೆ.
ಆದರೆ, ಭಾರತ ಸರಕಾರ ಅಂಥ ಯಾವುದೇ ಸಂವಹನ ನಿಯಮ ಜಾರಿ ಮಾಡಿಲ್ಲ ಎಂದು ಸ್ವತಃ ಪ್ರಸ್ ಇನ್ ಫಾರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಯಾರೋ ಇಂಥದ್ದೊಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹರಿಬಿಟ್ಟಿದ್ದು, ಸೋಮವಾರದಿಂದೀಚೆಗೆ ಎಲ್ಲರ ವಾಟ್ಸ್ ಆ್ಯಪ್ ಗಳಿಗೂ ಈ ಸಂದೇಶ ಬರಲಾರಂಭಿಸಿದೆ.
ವಾಟ್ಸ್‌ಆ್ಯಪ್ ಅಡ್ಮಿನ್ ವಿರುದ್ಧ ಕ್ರಮ ಸುಳ್ಳು
ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲ ವಾಟ್ಸ್‌ಆ್ಯಪ್ ಅಡ್ಮಿನ್‌ಗಳೂ 2 ದಿನಗಳ ಕಾಲ ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸಬೇಕು. ಕೋವಿಡ್ ಕುರಿತಾದ ಜೋಕುಗಳು ಹರಿದಾಡುತ್ತಿರುವ ಕಾರಣ ಅಡ್ಮಿನ್ ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೊಂದು ನಿಮ್ಮ ಮೊಬೈಲ್ ಗೂ ಬಂದಿರಬಹುದು.
ಅಲ್ಲದೆ, ಇಂದು ರಾತ್ರಿಯಿಂದಲೇ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಾಗಲಿದ್ದು, ಯಾರು ಕೂಡ ಕೋವಿಡ್ ಗೆ ಸಂಬಂಧಿಸಿದ ಸಂದೇಶಗಳನ್ನು ಫಾರ್ವರ್ಡ್ ಮಾಡುವಂತಿಲ್ಲ ಎಂಬ ಮಾಹಿತಿಯೂ ಇದ್ದು, ಈ ಸಂದೇಶ ನಂಬಿ ನೀವೂ ಅನೇಕ ಗ್ರೂಪ್ ಗಳಿಗೆ ಇದನ್ನು ಫಾರ್ವರ್ಡ್ ಮಾಡಿರಬಹುದು. ಆದರೆ ಇದೊಂದು ಸುಳ್ಳು ಸುದ್ದಿ.
ಅಡ್ಮಿನ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಲ್ಲೂ ಹೇಳಿಲ್ಲ. ಮಾ.24ರಂದು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣಕಾಸು ನೆರವು ಕುರಿತು ಸರಕಾರ ಪ್ರಸ್ತಾಪಿಸಿತ್ತೇ ವಿನಾ, ಅದಕ್ಕೂ ವಾಟ್ಸ್ ಆ್ಯಪ್ ಸಂದೇಶಗಳಿಗೂ ಸಂಬಂಧವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.