ಮೇ 4ರ ನಂತರ ವಿಮಾನ ಪ್ರಯಾಣ ಟಿಕೆಟ್ ಬುಕ್ಕಿಂಗ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಡಿಜಿಸಿಎ
ಕೋವಿಡ್ 19 ಹಿನ್ನೆಲೆಯಲ್ಲಿ ಈಗಾಗಲೇ ದೇಶೀಯ ಪ್ರಯಾಣಿಕರ ವಿಮಾನಯಾನ ರದ್ದುಪಡಿಸಲಾಗಿದೆ
Team Udayavani, Apr 19, 2020, 9:15 PM IST
ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಮುಂದುವರಿಸಿರುವ ಲಾಕ್ ಡೌನ್ ಮೇ 3ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಮೇ 4ರಿಂದ ವಿಮಾನ ಯಾನದ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಡಿಜಿಸಿಎ(ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ತಿಳಿಸಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಈಗಾಗಲೇ ದೇಶೀಯ ಪ್ರಯಾಣಿಕರ ವಿಮಾನಯಾನ ರದ್ದುಪಡಿಸಲಾಗಿದೆ ಎಂದು ತಿಳಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ಹಿಂದಿನ ಪ್ರಕಟಣೆ ಉಲ್ಲೇಖಿಸಿ, ಮೇ 4ರಿಂದ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳುವ ಬಗ್ಗೆ ಯಾವುದೇ ನಿರ್ದೇಶನ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪರಿಸ್ಥಿತಿಯನ್ನು ಅವಲೋಕಿಸಿ, ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರದ ನಂತರವೇ ಟಿಕೆಟ್ ಬುಕ್ಕಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಮಾನಯಾನ ಪುನರಾರಂಭಿಸುವ ಬಗ್ಗೆ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಮಾರ್ಚ್ 25ರಿಂದ ಲಾಕ್ ಡೌನ್ ಆರಂಭವಾದ ನಂತರ ಪ್ರಯಾಣಿಕರ ವಿಮಾನಯಾನ ರದ್ದುಪಡಿಸಲಾಗಿತ್ತು. ಏರ್ ಕಾರ್ಗೋ(ಸರಕು ಸಾಗಣೆ) ವಿಮಾನಗಳಿಗೆ ವಿನಾಯ್ತಿ ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.