ಕೋವಿಡ್ 19 ಎಫೆಕ್ಟ್: ಮಕ್ಕಳ ಬರುವಿಕೆಯ ನಿರೀಕ್ಷೆಯಲ್ಲಿ ಥಾಯ್ ಪೋಷಕರು
Team Udayavani, Apr 1, 2020, 1:15 PM IST
ಸಾಂದರ್ಭಿಕ ಚಿತ್ರ
ಬ್ಯಾಂಕಾಂಕ್: ಕೋವಿಡ್ 19 ಸೋಂಕಿಗೆ ವ್ಯಾಪಾಕವಾಗಿ ತುತ್ತಾಗಿರುವ ಅಮೆರಿಕದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ವಿದ್ಯಾಭ್ಯಾಸದ ಕಾರಣಕ್ಕೆ ವಿದೇಶದಲ್ಲಿ ನೆಲೆಸಿರುವವರನ್ನ ಕರೆ ತರಲು ಹಲವು ದೇಶಗಳು ಮುಂದಾಗುತ್ತಿವೆ. ಈಗ ಥಾಯ್ ನ ಸರದಿ.
ಥಾಯ್‌ನ ಪೋಷಕರು ತಮ್ಮ ಮಕ್ಕಳ ವಾಪಸಾಗುವಿಕೆಯನ್ನೇ ನಿರೀಕ್ಷಿಸುತ್ತಿದ್ದಾರೆ. ಬ್ಲೆ„ಥ್‌ವುಡ್ ಪಟ್ಟಣದಲ್ಲಿ Global Intercultural Exchange ಯೋಜನೆಯಡಿ ಕೆಲವು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಇಂಟರ್‌ಕಲ್ಚರಲ್ ಎಕ್ಸ್‌ಚೇಂಜ್‌ನಲ್ಲಿ ಓದುತ್ತಿರುವ ತನ್ನ ಮಗನ ಎದುರು ನೋಡುತ್ತಿರುವ ಪುದಿತ್ ಅಸ್ಸನಮನಿ, ಯಾವುದೇ ಕ್ಷಣದಲ್ಲಿ ಬರಬಹುದೆಂಬ ನಿರೀಕ್ಷೆ ನಮ್ಮದು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಅಮೆರಿಕದ ಇತರ ನಗರಗಳಿಗೆ ಹೋಲಿಸಿದರೆ ತನ್ನ ಮಗ ಉಳಿದುಕೊಂಡ ನಗರದಲ್ಲಿ ಸೋಂಕಿನ ಪ್ರಮಾಣವು ಕಡಿಮೆ. ಆದರೆ ಯುಎಸ್ ಪೂರ್ಣ ಲಾಕ್‌ಡೌನ್‌ಗೆ ಹೋದರೆ ಮಗನನ್ನು ವಾಪಸು ಕರೆ ತರುವುದು ಕಷ್ಟ. ಮನೆಗೆ ಬರಲು ಮಗನೂ ತುಂಬಾ ಆತುರದಲ್ಲಿದ್ದಾನೆ ಎಂದು ಅಸ್ಸನಮನಿ ಹೇಳಿದ್ದಾರೆ. ಹ್ಯಾಂಡ್ ಸ್ಯಾನಿಟೈಸರ್‌ಮತ್ತು ಫೇಸ್ ಮಾಸ್ಕ್ಗಳು ಬೇಡಿಕೆಯಷ್ಟು ದೊರೆಯುತ್ತಿಲ್ಲ. ಆದರೂ ಕಷ್ಟ ಪಟ್ಟುಕೊಂಡು ಕೊಂಡ ವರನ್ನು ಸಂದೇಹದಿಂದ ನೋಡಲಾಗುತ್ತಿದೆ ಎನ್ನುವ ಅವರು, ಅವನಿಗೆ ಆರೋಗ್ಯ ವಿಮೆ ಇದೆ ಎನ್ನುತ್ತಾರೆ ಅವರು.
ಮತ್ತೂಬ್ಬ ವಿದ್ಯಾರ್ಥಿಯ ತಂದೆ ಪನೋರ್ಜಿತ್, ತನ್ನ ಮಗ ಮಾರ್ಚ್ 28 ರಂದು ಮನೆಗೆ ಬಂದಿದ್ದಾನೆ. ಅದೃಷ್ಟವಶಾತ್, ಫ್ಲೈಟ್ ಹತ್ತುವ ಮೊದಲು ಅವರು ಫಿಟ್-ಟು-ಫ್ಲೈಟ್ ಪ್ರಮಾಣಪತ್ರ ಮತ್ತು ದೂತಾವಾಸ ಕಚೇರಿಯಿಂದ ಪತ್ರವನ್ನು ಪಡೆದಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.