ಕೋವಿಡ್ 19 ದೃಢ: ಫ್ರೆಂಚ್ ಕ್ಲಬ್ನ ವೈದ್ಯ ಆತ್ಮಹತ್ಯೆ
Team Udayavani, Apr 7, 2020, 5:08 AM IST
ಪ್ಯಾರಿಸ್: ದೀರ್ಘ ಕಾಲದಿಂದ ಫ್ರೆಂಚ್ ಲೀಗ್ 1 ಕ್ಲಬ್ ರೈಮ್ಸ್ನ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಬೆರ್ನಾರ್ಡ್ ಗೊನ್ಸಾಲೆಸ್ ಅವರು ಕೋವಿಡ್ 19 ವೈರಸ್ ತಗಲಿರುವುದು ದೃಢಪಟ್ಟ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಮಗೆ ಅತೀವ ಆಘಾತವಾಗಿದೆ. ಬೆರ್ನಾರ್ಡ್ ಗೊನ್ಸಾಲೆಸ್ ಅವರನ್ನು ರೈಮ್ಸ್ ಕ್ಲಬ್ ಕಳೆದುಕೊಂಡಿದೆ. ಅವರ ಅಗಲುವಿಕೆಯಿಂದ ಕ್ಲಬ್ಗ ಅಪಾರ ನಷ್ಟವಾಗಿದೆ ಎಂದು ಕ್ಲಬ್ ತಿಳಿಸಿದೆ.
60 ವರ್ಷದ ಬೆರ್ನಾರ್ಡ್ ಕಳೆದ 20 ವರ್ಷಗಳಿಂದ ಕ್ಲಬ್ ಪರ ಸೇವೆ ಸಲ್ಲಿಸಿದ್ದರು.ಆತ್ಮಹತ್ಯೆಗೈಯುವ ಮೊದಲು ಡಾ| ಬೆರ್ನಾರ್ಡ್ ಬರೆದ ಪತ್ರವೊಂದು ಸಿಕ್ಕಿದೆ. ಅದರಲ್ಲಿ ಕೋವಿಡ್ 19 ವೈರಸ್ ಸಂಬಂಧ ನಡೆದ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೀಗಾತಿ ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಬರೆದಿತ್ತು. ಪತ್ರ ಸಿಕ್ಕಿರುವುದನ್ನು ವೈದ್ಯಕೀಯ ಮೂಲವೊಂದು ದೃಢಪಡಿಸಿದೆ.
ರೈಮ್ಸ್ ಮತ್ತು ಫುಟ್ಬಾಲ್ ಕುಟುಂಬ ಅವರನ್ನು ಕಳೆದುಕೊಂಡು ದುಃಖೀಸುತ್ತಿದೆ ಎಂದು ರೈಮ್ಸ್ ಕ್ಲಬ್ನ ಅಧ್ಯಕ್ಷ ಜೀನ್-ಪೀರ್ ಕೈಲೋಟ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.