ಮೊಮ್ಮಗಳನ್ನು ನೋಡಲು 6 ಕಿ.ಮೀ ನಡೆದ ಅಜ್ಜ
Team Udayavani, Apr 10, 2020, 12:42 PM IST
ಜೀಲ್ಯಾಂಡ್: ಮೊಮ್ಮಕ್ಕಳ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ಹಿರಿಯ ಜೀವಗಳನ್ನು ತಮ್ಮ ಮೊಮ್ಮಕ್ಕಳಿಂದ ಈ ಕೋವಿಡ್-19 ದೂರ ಮಾಡಿದೆ. ಹಾಗೇ ಅನೇಕ ಮೊಮ್ಮಕ್ಕಳೂ ಸಹ ರಜಾ ದಿನಗಳಲ್ಲಿ ತಮ್ಮ ಬಾಲ್ಯವನ್ನು ಅಜ್ಜ, ಅಜ್ಜಿಯರ ಜತೆಗೆ ಕಳೆಯಬೇಕೆಂದು ಇಚ್ಚಿಸುತ್ತಾರೆ. ಅದಕ್ಕೂ ಇದು ಸಂಚಕಾರ ತಂದಿದೆ.
ಬದುಕಿನ ಮುಸ್ಸಂಜೆಯಲ್ಲಿರುವ ಹಿರಿಯ ಜೀವಿಗಳಿಗೆ ಲವಲವಿಕೆಯನ್ನು ತುಂಬುವ ಮೊಮ್ಮಕ್ಕಳನ್ನು ನೋಡದಿದ್ದರೆ ಆಗದು. ಅದಕ್ಕೇ ಇಲ್ಲೊಬ್ಬ ಅಜ್ಜ ತನ್ನ ಮೊಮ್ಮಕ್ಕಳನ್ನು ನೋಡಲೆಂದು ಆರು ಕಿ.ಮೀ ನಡೆದು ಹೋಗಿದ್ದಾನೆ. ಇದೀಗ ಬಹಳ ದೊಡ್ಡ ಸುದ್ದಿಯಾಗಿದೆ.
ಹುಟ್ಟಿದಾಗ ನೋಡಲು ಸಾಧ್ಯವಾಗಲಿಲ್ಲ
ಮಗನಿಗೆ ಅಪ್ಪ ಆದೇ ಅನ್ನುವ ಖುಷಿ ಒಂದೆಡೆ ಇದ್ದರೆ, ಮೊಮ್ಮಗಳು ಹುಟ್ಟಿದ ಸಂಭ್ರಮವನ್ನು ಆಚರಿಸಲು ಅಜ್ಜ-ಅಜ್ಜ ಜತೆಯಲ್ಲಿ ಇಲ್ಲ ಅನ್ನುವ ಹತಾಶೆ. ಕಾರಣ ಕೋವಿಡ್-19ನ ಭೀತಿ ಹಾಗೂ ಲಾಕ್‌ಡೌನ್ ನಿರ್ಬಂಧ. ಹೀಗಾಗಿ ಆಗಾಗ ತನ್ನ ಮಗನ ಮನೆಗೆ ಬಂದು ಮೊಮ್ಮಗಳನ್ನು ನೋಡಿ ಮುದ್ದಾಡಿ ಹೋಗುತ್ತಿದ್ದ ಅಜ್ಜನಿಗೆ ನವಜಾತ ಶಿಶುವನ್ನು ಭೇಟಿ ಮಾಡಲು ಆಗಲೇ ಇಲ್ಲ.
ಸುಮ್ಮನೆ ಕುಳಿತುಕೊಳ್ಳದ ಅಜ್ಜ
ಒಂದು ದಿನ ತನ್ನ ಮೊಮ್ಮಗಳನ್ನು ನೋಡಬೇಕೆಂದು ನಿರ್ಧರಿಸಿದ ಅಜ್ಜ ಯಾರ ಮಾತನ್ನೂ ಕೇಳಲೇ ಇಲ್ಲ. ನೇರವಾಗಿ ಆರು ಕಿ.ಮೀ ನಡೆದೇ ತನ್ನ ಮಗನ ಮನೆಗೆ ಬಂದೇ ಬಿಟ್ಟ. ಮಗನೂ ಖುಷಿಯಿಂದ ಸ್ವಾಗತಿಸಿದ. ಆದರೆ, ಸೋಂಕಿನ ಭೀತಿಯಿಮದ ಮನೆಯ ಒಳಗೆ ಬಂದು ಮೊಮ್ಮಗಳನ್ನು ಮುಟ್ಟಲು ಆಗಲಿಲ್ಲ. ಕಿಟಕಿಯಿಂದಲೇ ಖುಷಿಪಟ್ಟ ಅಜ್ಜ.
ಸಾಮಾಜಿಕ ಜಾಲತಾಣದಲ್ಲೂ ವೈರಲ್
ಈ ಭಾವನಾತ್ಮಕ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗುವಿನ ತಂದೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಹಲವರು ಮುದ್ದಾದ ಫೋಟೋ ಎಂದಿದ್ದಾರೆ. ಕೋವಿಡ್-19 ಎಷ್ಟೋ ಜೀವವನ್ನು ತೆಗೆದಿದ್ದರೂ, ಈ ಅಜ್ಜ ಮೊಮ್ಮಕ್ಕಳ ನಡುವಿನ ಪ್ರೀತಿಯನ್ನು ಕಿತ್ತುಕೊಳ್ಳಲು ಮನಸ್ಸು ಮಾಡಲಿಲ್ಲ, ಅದೇ ಸಾಕೆಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.