ಕೋವಿಡ್ 19 & Lockdownನಿಂದ ಮಾನಸಿಕ ಒತ್ತಡ ಮತ್ತು ಹೆಚ್ಚಳ ಸಾಧ್ಯತೆ: ವೈಜ್ಞಾನಿಕ ವಿಶ್ಲೇಷಣೆ
ಮಾರುಕಟ್ಟೆಗಳನ್ನು ಮುಚ್ಚಲ್ಪಟ್ಟಿದ್ದರಿಂದ ಕೆಲವರು ಒಂಟಿಯಾಗಿ ತಮ್ಮ ಮನೆಗಳಲ್ಲಿ, ಹಾಸ್ಟೆಲ್ ಗಳಲ್ಲಿ, ರೂಮ್ ನಲ್ಲಿ ಕಳೆಯುವಂತಾಗಿದೆ.
Team Udayavani, May 1, 2020, 4:30 PM IST
Representative Image
ಮಣಿಪಾಲ:ಕೋವಿಡ್ 19 ವೈರಸ್ ಎಲ್ಲಾ ಜನಸಾಮಾನ್ಯರನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆ ಬರೀ ಭಾರತ ದೇಶಕ್ಕೆ ಅಥವಾ ನಮ್ಮ ರಾಜ್ಯ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಒಂದು ದೊಡ್ಡ ಆರೋಗ್ಯದ ಸಮಸ್ಯೆ ಪ್ರಪಂಚದಾದ್ಯಂತ ಕಾಡುತ್ತಿರುವ ಬಿಡಿಸಲಾಗದ ಕ್ಲಿಷ್ಟವಾದ ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ. ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ಈ ವೈರಾಣು ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪಟ್ಟಣದ, ಹುಬೈನಲ್ಲಿ ಕಂಡು ಬಂದಿದ್ದು ನಂತರದ ದಿನಗಳಲ್ಲಿ ಇದರ ಅಬ್ಬರ ಕಾಲ ಕ್ರಮೇಣ ರಾಜ್ಯ, ದೇಶಗಳನ್ನು ಮೀರಿ ಪ್ರಪಂಚವನ್ನೇ ವ್ಯಾಪಿಸಿಕೊಂಡು ಬಿಟ್ಟಿರುವ ಮಹಾಮಾರಿ ಎಂದರೆ ತಪ್ಪಾಗಲಾರದು.
ಈ ರೋಗದ ಲಕ್ಷಣಗಳಾದ ಒಣಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಹಾಗೂ ನಿತ್ರಾಣಗಳಿಂದ ಕೂಡಿದ್ದು ಈ ವೈರಸ್ ಗೆ ತುತ್ತಾಗಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದವರಿಗೆಲ್ಲಾ ಸರಾಸರಿ ಶೇಕಡ 15% ರಷ್ಟು ಅವರಿಗೂ ವ್ಯಾಪಿಸಿಕೊಳ್ಳುವ ಶಕ್ತಿಯನ್ನು ಒಳಗೊಂಡಿದೆ. ಇದನ್ನು ತಿಳಿದವರು ಘಠಡಿಟಜ ಘಚಿಡಿ (ಎರಡನೇ ವಿಶ್ವಯುದ್ಧ ನಂತರದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರುಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು ಎಂದಿದ್ದಾರೆ.)
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಶೇಖಡ 30% ರಾಷ್ಟ್ರಗಳು ಕೋವಿಡ್ 19 ಎದುರಿಸಲು ಅಥವಾ ಹಿಮ್ಮೆಟಿಸಲು ಸಿದ್ಧವಾಗಿಲ್ಲ. ಈಗ ತಿಳಿದಿರುವ ಮಟ್ಟಿಗೆ ಇದಕ್ಕೆ ಸರಿಯಾದ ಯಾವುದೇ ಚಿಕಿತ್ಸೆ ಪೂತರ್ಿ ಪ್ರಮಾಣದಲ್ಲಿ ಮಾನವರ ಮೇಲೆ ಪ್ರಯೋಗ ಮಾಡಲು ಸಿದ್ಧವಿಲ್ಲ. ಅದರೆ ಸದ್ಯಕ್ಕೆ ತಿಳಿದಿರುವುದೇನೆಂದರೆ ಸಾಮಾಜಿಕ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ದೂರವಿರಬಹುದು. ಹಾಗಾಗಿ ಭಾರತ ದೇಶಗಳಂತ ಹೆಚ್ಚಿನ ಜನಸಂದಣಿಯಿಂದ ಕಿಕ್ಕಿರಿರುವ ದೇಶಗಳಲ್ಲಿ ಇಂತಹ ಸಮಸ್ಯೆ ಅತೀವವಾಗಿ, ಅತೀ ವೇಗದಲ್ಲಿ ಆವರಿಸಿರುವ ಮೂಲಕ ಸಾವುಗಳನ್ನು ಹೆಚ್ಚಿಸುವ ಮಾರಕ ರೋಗ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ನಮ್ಮ ಭಾರತದ ಮುಂದಿರುವ ದೊಡ್ಡ ಪ್ರಶ್ನೆಯನ್ನು ಎದುರಿಸಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು National Lockdown ಜಾರಿಗೆ ತಂದಿದ್ದಾರೆ. ಈ ಇಡೀ ದೇಶವನ್ನು ಈ ರೀತಿಯಾಗಿ ಲಾಕ್ ಡೌನ್ ಗೆ ಒಳಪಡಿಸಿ ಜನರನ್ನು ಸಾವಿನ ಅಂಚಿನಿಂದ ರಕ್ಷಿಸಲು ಹರ ಸಾಹಸ ಮಾಡುತ್ತಿದ್ದಾರೆ.
ಈ ಸಮಸ್ಯೆಯನ್ನು ದೂರ ಮಾಡಲು ವಿಜ್ಞಾನಿಗಳು, ನುರಿತ ಡಾಕ್ಟರ್, ಕ್ಲಿನಿಕಲ್ ಸೈಕಾಲಾಜಿಸ್ಟ್, ಸಮಾಜ ಕಾರ್ಯಕರ್ತರು, ನರ್ಸ್ ಗಳು ಹಾಗೂ ಪೋಲೀಸ್, ರಾಜಕಾರಣಿಗಳೂ ಹಾಗೂ ಮಾಧ್ಯಮದವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಒಂದು ಸಂದರ್ಭದಲ್ಲಿ ನಮಗೆ ತಿಳಿಯದಿರುವ ಅದೆಷ್ಟೋ ಸಮಸ್ಯೆಗಳು ಕೂಡ ಇದರ ಹಿಂದೆಯಿದೆ.
ಅದೇನೆಂದರೆ ಈ ಲಾಕ್ ಡೌನ್ ಗೆ ಯಾರೂ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಿದ್ಧರಾಗಿಲ್ಲದೇ ಇದ್ದದ್ದು. ಇದಕ್ಕೆ ಕಾರಣ ರಾತ್ರೋರಾತ್ರಿ ತೆಗೆದುಕೊಳ್ಳಬೇಕಾದಂತಹ ನಿರ್ಧಾರ “National Lockdown”. ಈ ವಿಚಾರವಾಗಿ ಎಲ್ಲಾ ರೀತಿಯ ಸಂಪರ್ಕ ಸೇವೆಗೆ ಕಡಿವಾಣ ಹಾಕಿ ಯಾರು ಅವರ ಮನೆ ಬಿಟ್ಟು ಹೊರ ಹೋಗದ ಹಾಗೆ, ಮನೋರಂಜನೆಯ ಮೂಲಗಳಾದ ಪಿವಿಆರ್ ಸಿನಿಮಾ ಮಾಲ್ ಗಳನ್ನು, ಕ್ಲಬ್ ಗಳನ್ನು ಹಾಗೂ ಬಾರ್ ಗಳನ್ನು, ಶೈಕ್ಷಣಿಕ ಸಂಘ ಸಂಸ್ಥೆಗಳನ್ನು ಕೂಡ ಮುಚ್ಚ ಬೇಕಾಗಿ ಬಂದದ್ದು.
2 –
ಎಲ್ಲರಿಗೂ ಗೊತ್ತಿರುವಂತೆ ಮನುಷ್ಯ ಸಂಘಜೀವಿ. ಈ ಎಲ್ಲಾ ಅಂಗಡಿ, ಮಾರುಕಟ್ಟೆಗಳನ್ನು ಮುಚ್ಚಲ್ಪಟ್ಟಿದ್ದರಿಂದ ಕೆಲವರು ಒಂಟಿಯಾಗಿ ತಮ್ಮ ಮನೆಗಳಲ್ಲಿ, ಹಾಸ್ಟೆಲ್ ಗಳಲ್ಲಿ, ರೂಮ್ ನಲ್ಲಿ ಕಳೆಯುವಂತಾಗಿದೆ. ಇವರೆಲ್ಲಾ ತಮ್ಮ ತಂದೆ-ತಾಯಿ, ಕುಟುಂಬದವರಿಂದ ದೂರವಾಗಿ ಕಂಗೆಟ್ಟಿದ್ದಾರೆ. ಹಾಗೇ ದಿನಗೂಲಿ ಕೆಲಸಗಾರರು ಮುಂದಿನ ಜೀವನ ಹೇಗೋ ಏನೋ ತಿಳಿಯದಾಗಿದ್ದಾರೆ. ಪ್ರೆವೈಟ್ ಕಂಪನಿಯಲ್ಲಿ ನೌಕರಿ ಮಾಡುವವರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಮುಂಬರುವ ದಿನಗಳಲ್ಲಿ ಕೆಲಸ ದೊರಕುತ್ತದೆಯೋ ಇಲ್ಲವೋ ಎಂದೂ ಹೌಹಾರಿದ್ದಾರೆ. ಮತ್ತೊಂದಷ್ಟು ಜನ ಸರಿಯಾದ ಸಮಯಕ್ಕೆ ವೈದ್ಯರಲ್ಲಿ ಹೋಗಲಾರದೆ, ದೈನಂದಿಕವಾಗಿ ಕುಡಿಯುವವರು, ಹಠತ್ತಾನೆ ಮಧ್ಯ ಸೇವನೆ ನಿಲ್ಲಿಸಿರುವುದರಿಂದ ಕೆಲವೊಂದಿಷ್ಟು Withdrawal Symptoms ನಿಂದ ಬಳಲುತ್ತಿದ್ದಾರೆ.
ಹೀಗೆ ಕೆಲವರನ್ನು ಒಂಟಿತನ ಕಾಡುತ್ತಿದೆ. ಮತ್ತೊಬ್ಬರನ್ನು Unemployment (ನಿರುದ್ಯೋಗ), ಮಗದೊಬ್ಬರಿಗೆ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಗಳು. ಈ ಲಾಕ್ ಡೌನ್ ನಿಂದ ದಿನ ಪೂರ್ತಿ ಮನೆಯಲ್ಲಿ ಕಳೆಯುವ ಕೆಲವು ದಂಪತಿಗಳಲ್ಲಿ ಕಲಹ ಹಾಗೂ ಕೆಲವೊಂದಿಷ್ಟು ಹೆಣ್ಣು ಮಕ್ಕಳು ದೈಹಿಕ ಹಾಗೂ ಮಾನಸಿಕ ದೌರ್ಜನ್ಯಕ್ಕೆ ಪರಿತಪಿಸುತ್ತಿದ್ದಾರೆ.
ಈ ಲಾಕ್ ಡೌನ್ ನಿಂದ ಮುಂಬರುವ ದಿನಗಳಲ್ಲಿ ಜನರು ಖಿನ್ನತೆಗೆ, ಒತ್ತಡಕ್ಕೆ ಒಳಗಾಗುವುದಲ್ಲದೇ ಮಾನಸಿಕವಾಗಿ ಕೂಡ ಕುಗ್ಗಬಹುದು. ನಿರುದ್ಯೋಗಗಳಿಂದ ಬಹಳಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಜೀವನಕ್ಕೆ ಅಂತ್ಯಹೇಳಬಹುದು. ಇನ್ನೂ ಈ ಮಾರಕ ರೋಗಕ್ಕೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳು ಕೊನೆಗಳಿಗೆಯಲ್ಲಿ ಭೇಟಿಯಾಗಲು ಆಗದೇ, ಯಾವುದೇ ಶಾಸ್ತ್ರೋಕ್ತವಾಗಿ ಕಾರ್ಯಗಳನ್ನು ಮಾಡಲಾಗದೇ ಅವರನ್ನು Guilt (ಅಪರಾಧಿ ಮನೋಭಾವ) ಅಸಹಾಯಕತೆಗೆ ಒಳಗಾಗಿಸುತ್ತದೆ. ಈ ಕೊನೆ ಕ್ಷಣಗಳಲ್ಲಿ ತಮ್ಮವರಿಗೆ ಸರಿಯಾದ ಆರೈಕೆ ಮಾಡಲಾಗದೆ ತಾವು ಸರಿಯಾಗಿ ಚಿಕಿತ್ಸೆ ಸೂಕ್ತ ಸಮಯದಲ್ಲಿ ಕೊಡಿಸಿದ್ದೇವೋ ಇಲ್ಲವೋ ಎನ್ನುವ ಪ್ರಶ್ನೆಗಳು ಅವರನ್ನು ಕಾಡುವುದಲ್ಲದೇ, ಮುಂದೆ ಇವರನ್ನು Post Traumatic Stress Disorder (ಆಘಾತದ ನಂತರದ ಒತ್ತಡದಿಂದಾಗುವ ಅಸ್ವಸ್ವತೆ), Depression (ಖಿನ್ನತೆ) Stress (ಒತ್ತಡ) Suicide (ಆತ್ಮಹತ್ಯೆ) ಇವುಗಳಿಗೆ ದೂಡುವಲ್ಲಿ ಕಾರಣವಾಗುವ ಸಾಧ್ಯತೆಗಳು ಹಲವಾರು. ಹಾಗಾಗಿ ಮುಂಬರುವ ಮಾನಸಿಕ ಸಮಸ್ಯೆಗಳನ್ನು ಎದುರಿಸಲು ನಾವೆಲ್ಲಾ ಮಾನಸಿಕವಾಗಿ ಸದೃಢರಾಗಬೇಕಾಗಿದೆ. ಈ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಶ್ರಮಿಸುವ ಅಗತ್ಯವಿದೆ.
ಡಾ|| ಶ್ವೇತ ಟಿ.ಎಸ್. ಸಹಾಯಕ ಪ್ರಾಧ್ಯಾಪಕರು
ಕ್ಲಿನಿಕಲ್ ಸೈಕಾಲಜಿ ವಿಭಾಗ
ಕೆ.ಎಂ.ಸಿ. ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.