ಚಾ.ನಗರ: ಕೋವಿಡ್ ಪ್ರಯೋಗಾಲಯ ಪುನರಾರಂಭ ; ಬುಧವಾರ 22 ಪ್ರಕರಣ ದೃಢ
ಉದಯವಾಣಿ ಡಿಜಿಟಲ್ ವರದಿಗೆ ಎಚ್ಚೆತ್ತ ಜಿಲ್ಲಾಡಳಿತ – ಸೀಲ್ ಡೌನ್ ಆಗಿದ್ದ ಕೋವಿಡ್ ಪ್ರಯೋಗಾಲಯ ಪುನರಾರಂಭ
Team Udayavani, Jul 1, 2020, 7:51 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಲಭ್ಯವಾದ ಕೋವಿಡ್ ಪರೀಕ್ಷಾ ಫಲಿತಾಂಶದಲ್ಲಿ 22 ಜನರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವಾಹನ ಚಾಲಕ ಸೇರಿದಂತೆ, ನಗರದಲ್ಲಿ 4, ತಾಲೂಕಿನಲ್ಲಿ 2 ಗುಂಡ್ಲುಪೇಟೆಯಲ್ಲಿ 16 ಪ್ರಕರಣಗಳು ದೃಢಪಟ್ಟಿವೆ.
ಗುಂಡ್ಲುಪೇಟೆ ತಾಲೂಕಿನ ಬರಗಿ ಹಾಗೂ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದವರಿಗೆ ಸೋಂಕು ತಗುಲಿದ್ದು ಹಳ್ಳಿಗಳಿಗೂ ಸೋಂಕು ಹರಡುತ್ತಿದೆ.
ಕೋವಿಡ್ ಲ್ಯಾಬ್ ಸೀಲ್‌ಡೌನ್ ಆಗಿದ್ದ ಕಾರಣ ಕಳೆದ ಮೂರು ದಿನಗಳಿಂದ ಫಲಿತಾಂಶ ಲಭ್ಯವಾಗಿರಲಿಲ್ಲ. ಬೆಂಗಳೂರಿಗೆ ಕಳುಹಿಸಲಾಗಿದ್ದ 904 ಮಾದರಿಗಳ ಫಲಿತಾಂಶ ಬುಧವಾರ ಬಂದಿದ್ದು, ಇದರಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 54 ಮಂದಿಗೆ ಸೋಂಕು ತಗುಲಿದ್ದು ಓರ್ವ ಗುಣಮುಖನಾಗಿದ್ದಾನೆ. 53 ಸಕ್ರಿಯ ಪ್ರಕರಣಗಳಿವೆ. ಇವರೆಲ್ಲರೂ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 3ನೇ ದಿನವೂ ದೊರಕದ ಫಲಿತಾಂಶ
ಗುಂಡ್ಲುಪೇಟೆಯಲ್ಲಿ ಪತ್ತೆಯಾಗಿರುವ 16 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಮಹದೇವಪ್ರಸಾದ್ ನಗರದವು. ಮೂರು ಪ್ರಕರಣಗಳು ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದವರದು. ಅಲ್ಲದೇ ಕನಕದಾಸನಗರ, ನಾಯಕರ ಬೀದಿ, ಕೆಎಸ್‌ಎನ್ ಲೇಔಟ್‌ನಲ್ಲೂ ಪ್ರಕರಣಗಳು ಕಾಣಿಸಿಕೊಂಡಿವೆ.
ಎಸ್ಪಿ ವಾಹನ ಚಾಲಕನಿಗೆ ಸೋಂಕು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವಾಹನ ಚಾಲಕನಿಗೂ ಸೋಂಕು ದೃಢಪಟ್ಟಿದೆ. ಇದಲ್ಲದೇ ನಗರದ ಸೆಸ್‌ಕ್ ಕಚೇರಿಯ ಲೆಕ್ಕಾಧಿಕಾರಿ ಹಾಗೂ ಕ್ಯಾಶಿಯರ್‌ಗೆ, 45 ವರ್ಷದ ಓರ್ವ ಮಹಿಳೆಗೆ, ತಾಲೂಕಿನ ನಾಗವಳ್ಳಿಯ 34 ವರ್ಷದ ಮಹಿಳೆ ಹಾಗೂ 57 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ಕೋವಿಡ್ ಪ್ರಯೋಗಾಲಯ ಕಾರ್ಯಾರಂಭ: ಲ್ಯಾಬ್ ಟೆಕ್ನಿಷಿಯನ್‌ಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಮೂರು-ನಾಲ್ಕು ದಿನಗಳಿಂದ ಮುಚ್ಚಲಾಗಿದ್ದ ನಗರದ ಕೋವಿಡ್ ಪ್ರಯೋಗಾಲಯ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ.
ಕೋವಿಡ್ ಪ್ರಯೋಗಾಲಯ ಸೀಲ್‌ಡೌನ್ ಆಗಿದ್ದರಿಂದ ಕೋವಿಡ್ ಪರೀಕ್ಷೆಗೆ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಸತತ ಮೂರನೇ ದಿನವೂ ಫಲಿತಾಂಶ ಲಭ್ಯವಾಗದೇ ಜನರು ಆತಂಕಿತರಾಗಿದ್ದರು. ಪರೀಕ್ಷೆ ಮಾಡಿಸಿಕೊಂಡವರಲ್ಲಿ ಸೋಂಕಿತರಿದ್ದರೆ ಅವರು ಎಲ್ಲೆಡೆ ಓಡಾಡಿದರೆ ಸೋಂಕು ಹರಡುವುದಿಲ್ಲವೇ? ಎಂದು ಆತಂಕ ವ್ಯಕ್ತಪಡಿಸಿ ಉದಯವಾಣಿ.ಕಾಮ್ ಮಂಗಳವಾರ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.