ಸಾಯುವುದಾದರೆ ಸಾಯುವೆ, ದೇವರಿದ್ದಾನೆ !
Team Udayavani, Apr 23, 2020, 1:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಇದು ಆಸ್ಪತ್ರೆಗಳಲ್ಲಿ ಶವಗಳನ್ನು ಅಂತಿಮಯಾತ್ರೆಗೆ ಸಿದ್ಧಗೊಳಿಸುವವನ ಕಥೆ. ಕೋವಿಡ್ 19 ವೈರಸ್ ಇಡೀ ಜಗತ್ತನೇ ಶವಾಗಾರವನ್ನಾಗಿಸಿರುವ ಈ ಸಂದರ್ಭ ಇಂಡೋನೇಷ್ಯಾದ ಈ ವ್ಯಕ್ತಿಯ ಕರ್ತವ್ಯದ ಮೇಲಿನ ಬದ್ಧತೆಯ ಪರಿಚಯ ಇದು.
ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದ ರಾಜಿಮನ್ ಸೋರ್ಮಿನ್ ತನ್ನ ಕರ್ತವ್ಯದಿಂದ ನಿವೃತ್ತರಾಗಿದ್ದರು. ಸುಮಾರು 12 ವರ್ಷಗಳ ಕಾಲ ಇಂಡೋನೇಷ್ಯಾದ ಮೇಡನ್‌ನ ಆ್ಯಡಂ ಮಲಿಕ್ ಪಬ್ಲಿಕ್ ಆಸ್ಪತ್ರೆಯಲ್ಲಿ ಮಾರ್ಟಿಶಿಯನ್ (ಮೃತಪಟ್ಟವರನ್ನು ಶವಾಗಾರಕ್ಕೆ ಸಾಗಿಸುವ ವೇಳೆ ದೇಹವನ್ನು ಬಟ್ಟೆಯಲ್ಲಿ ಸುತ್ತಿ, ಸಂಸ್ಕಾರಕ್ಕೆ ಸಿದ್ಧಗೊಳಿಸಿಸುವವರು) ಆಗಿ ಕೆಲಸದಲ್ಲಿದ್ದರು. ಇವರು ಶವಗಳನ್ನು ಸ್ನಾನ ಮಾಡಿಸಿ, ಬಟ್ಟೆ ತೊಡಿಸುತ್ತಿದ್ದವರು. ಇದೀಗ ನಿವೃತ್ತ ಜೀವನದಲ್ಲಿ ಆರಾಮಾಗಿರೋಣ ಎಂದರೆ ಕೋವಿಡ್ 19 ವೈರಸ್ ಬಿಡ್ತಿಲ್ಲ.
ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಅವರ ನಿದ್ದೆಗೆಡಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನನ್ನನ್ನು ಮತ್ತೆ ಕರ್ತವ್ಯಕ್ಕೆ ಕರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ‘ಕರೆದರೆ ನಾನು ವಾಪಾಸು ಹೋಗುತ್ತೇನೆ, ಅವರಿಗೆ ಸಹಾಯ ಮಾಡುತ್ತೇನೆ. ಈ ವೇಳೆ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರೆ ಸಾಯಲಿ, ದೇವರಿದ್ದಾನೆ. ನಾನ್ಯಾಕೆ ಭಯ ಪಡಲಿ’ ಎಂದು ಹೇಳಿದ್ದಾರೆ.
ಇಂಡೋನೇಷ್ಯಾ ಜಗತ್ತಿನಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕಿತರಿರುವ ರಾಷ್ಟ್ರಗಳಲ್ಲಿ ಒಂದು. ಮಾರ್ಚ್ 2 ರಿಂದ 170 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. 1,790 ಜನರು ಸೋಂಕಿತರಾಗಿದ್ದಾರೆ. ಸರಕಾರ ಕೋವಿಡ್ 19 ವೈರಸ್ ಸಂಪರ್ಕಕ್ಕೆ ಜನರು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನ ಪಡುತ್ತಿದ್ದು, ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಪಿಪಿಇ ಸಾಧನಗಳನ್ನು ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.