ಜಾಗತಿಕ ಆರ್ಥಿಕತೆ ಅಪಾಯಕ್ಕೆ: ಹಿಂದೆಂದಿಗಿಂತಲೂ ಹೆಚ್ಚಿನ ನಿರುದ್ಯೋಗ ಸಮಸ್ಯೆ
ಕಂಪೆನಿಗಳಿಗೆ ಉಂಟಾಗುತ್ತಿರುವ ಆರ್ಥಿಕ ನಷ್ಟದ ಕಾರಣ ಉದ್ಯೋಗ ನಷ್ಟದ ಭೀತಿ ಎದುರಾಗಿದೆ.
Team Udayavani, Apr 23, 2020, 12:14 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಹೊಡೆತಕ್ಕೆ ಹೊಟೇಲ್, ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರ ಸಂಪೂರ್ಣ ತತ್ತರಿಸಿಹೋಗಿದ್ದು, ಕಂಪೆನಿಗಳ ಮೇಲೆ ಆರ್ಥಿಕ ಸಂಕಷ್ಟದ ತೂಗುಗತ್ತಿ ನೇತಾಡುತ್ತಿದೆ.
ಮಣಿಪಾಲ: ಕೋವಿಡ್-19 ಜಾಗತಿಕ ಆರ್ಥಿಕತೆಯನ್ನೇ ಅಪಾಯಕ್ಕೆ ತಳ್ಳಿದೆ. ದಿನದಿಂದ ದಿನಕ್ಕೆ ಉದ್ಯೋಗ ನಷ್ಟ ಹೆಚ್ಚುತ್ತಲೇ ಇದೆ. ಮುಖ್ಯವಾಗಿ ವಿಮಾನಯಾನ, ಸಾರಿಗೆ, ಹೊಟೇಲ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನೇರ ಹೊಡೆತಕ್ಕೆ ಸಿಕ್ಕಿದ್ದು, ಕಂಪನಿಗಳ ಮೇಲೆ ಆರ್ಥಿಕ ನಷ್ಟದ ತೂಗುಗತ್ತಿ ನೇತಾಡುತ್ತಿದೆ.
ಸೋಂಕಿನ ಅಬ್ಬರ ಇಳಿಯುವ ಹೊತ್ತಿಗೆ ನಿರುದ್ಯೋಗಿಗಳ ಸಂಖ್ಯೆ ಹಿಂದೆಂದಿಗಿಂತಲೂ ಅತೀ ಹೆಚ್ಚು ಇರಲಿದೆ ಎಂಬುದಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಂದಾಜಿಸಿದ್ದು, ಎರಡನೆಯ ಮಹಾ ಯುದ್ಧದ ಅನಂತರ ವಿಶ್ವಕ್ಕೆ ಎದುರಾದ ಅತ್ಯಂತ ಭೀಕರ ಜಾಗತಿಕ ಬಿಕ್ಕಟ್ಟಿದು ಎಂದು ಹೇಳಿದೆ.
2 ಶತಕೋಟಿ ಉದ್ಯೋಗ ನಷ್ಟ
ವಿಶ್ವಾದ್ಯಂತ ಅನೌಪಚಾರಿಕ ವಲಯದಲ್ಲಿನ ಎರಡು ಶತಕೋಟಿ ಉದ್ಯೋಗ ಕಡಿತವಾಗಲಿದ್ದು, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ದೇಶಗಳ ಹೆಚ್ಚಿನ ಉದ್ಯೋಗಸ್ಥರು ನಷ್ಟ ಅನುಭವಿಸಲಿದ್ದಾರೆ ಎಂದಿದೆ ವರದಿ. ಈಗಾಗಲೇ ಹತ್ತು ಲಕ್ಷ ಅನೌಪಚಾರಿಕ ಕಾರ್ಮಿಕರ ಮೇಲೆ ಕೋವಿಡ್-19 ಪರಿಣಾಮ ಬೀರಿದೆ ಎಂದು ಐಎಲ್‌ಒ ಎಚ್ಚರಿಕೆ ನೀಡಿದೆ.
ಇತರೆ ದೇಶಗಳಂತೆ ನಮ್ಮ ದೇಶವೂ ಕೋವಿಡ್-19ಗೆ ಸಿಲುಕಿದ್ದು, ಅನೌಪಚಾರಿಕ ಆರ್ಥಿಕ ವಲಯದ ಸುಮಾರು 40 ಕೋಟಿ ಉದ್ಯೋಗ ನಷ್ಟವಾಗಲಿದೆ ಎಂದು ಸಂಸ್ಥೆ ಅಂದಾಜಿಸಿದೆ. 19.5 ಕೋಟಿ ಪೂರ್ಣಾವಧಿ ಪಾಳಿಯ ಉದ್ಯೋಗಸ್ಥರು ಕೆಲಸ ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ.
ನಿರುದ್ಯೋಗಸ್ಥರ ಪ್ರಮಾಣ ಏರಿಕೆ
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ, ನೈಜೀರಿಯಾ ಮತ್ತು ಬ್ರೆಜಿಲ್‌ನ ದೇಶಗಳಲ್ಲಿ ಅನೌಪಚಾರಿಕ ವಲಯದ ಕಾರ್ಮಿಕರ ಸಂಖ್ಯೆ ಹೇರಳವಾಗಿದೆ. ಒಂದು ಅಂದಾಜಿನ ಪ್ರಕಾರ, ಸದ್ಯ 50 ಲಕ್ಷದಷ್ಟು ಇರುವ ನಿರುದ್ಯೋಗದ ಪ್ರಮಾಣ 2.5 ಕೋಟಿಯಷ್ಟು ಏರಿಕೆಯಾದೀತು ಎನ್ನಲಾಗಿದೆ.
ಅರಬ್ ರಾಜ್ಯಗಳಲ್ಲಿ ಶೇ 8.15 (50 ಲಕ್ಷಕ್ಕೆ ಸಮ) ಯುರೋಪ್ ಶೇ. 7.8 (1.2 ಕೋಟಿ) ಮತ್ತು ಏಷ್ಯಾ ಮತ್ತು ಪೆಸಿಫಿಕ್ ಭಾಗಗಳಲ್ಲಿ ಶೇ.7.2ರಷ್ಟು (12.5 ಕೋಟಿ) ಪೂರ್ಣಾವಧಿಯ ಕೆಲಸಗಾರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು, ವಸತಿ ಮತ್ತು ಆಹಾರ ಸೇವೆಗಳು, ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತು ಆಡಳಿತಾತ್ಮಕ ಚಟುವಟಿಕೆ ಕ್ಷೇತ್ರಗಳು ಹೆಚ್ಚಿನ ಆರ್ಥಿಕ ನಷ್ಟವನ್ನು ಎದುರಿಸಲಿವೆ ಎಂದು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.