ಕೋವಿಡ್ ಸೋಂಕಿನ ಚೇತರಿಕೆ ಪ್ರಮಾಣ ಶೇ.81.25
ಸುರಕ್ಷತೆ, ರೋಗತಡೆ ಮತ್ತು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯನ್ವಯ ಲಸಿಕೆ
Team Udayavani, Sep 23, 2020, 10:26 AM IST
ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಸತತ ಐದನೇ ದಿನವೂ ಹೆಚ್ಚಾಗಿದೆ. ಶೇಕಡಾವರು ಹೇಳುವುದಿದ್ದರೆ ಅದರ ಪ್ರಮಾಣ 81.25 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 89,746 ಮಂದಿ ಚೇತರಿಸಿಕೊಳ್ಳುವ ಮೂಲಕ ಒಟ್ಟು ಗುಣಮುಖರ ಸಂಖ್ಯೆ 45,87,613 ಆಗಿದೆ. ಮತ್ತೂಂದೆಡೆ ದೇಶದಲ್ಲಿ ಸೋಂಕಿತರ ಸಂಖ್ಯೆಗೆ ಹೊಸತಾಗಿ 90,020 ಸೇರ್ಪಡೆ ಯಾಗಿದ್ದರೆ, 1,085 ಮಂದಿ ಸಾವಿಗೀಡಾಗಿದ್ದಾರೆ. ದೇಶ ದಲ್ಲಿ ಸೋಂಕಿನಿಂದಾಗಿ ಅಸುನೀಗಿದವರ ಒಟ್ಟು ಸಂಖ್ಯೆ90 ಸಾವಿರ ದಾಟಿದೆ.
ಶೇ.100 ಖಾತರಿ ಸಾಧ್ಯವಿಲ್ಲ:ಉಸಿರಾಟದ ತೊಂದರೆ ಶೇ.100ರಷ್ಟು ಪರಿಹಾರ ನೀಡಲು ಯಾವುದೇ ಲಸಿಕೆಯಿಂದ ಸಾಧ್ಯವಿಲ್ಲ. ಶೇ.50 ರಿಂದ ಶೇ.100ರಷ್ಟು ಖಾತರಿ ಇರುವ ಲಸಿಕೆಯನ್ನು ಕೊರೊನಾ ಸೋಂಕಿತರಿಗೆ ನೀಡಬಹುದು ಎಂದು ಐಸಿಎಂಆರ್ ನಿರ್ದೇಶಕ ಡಾ.ಬಲರಾಮ ಭಾರ್ಗವ ತಿಳಿಸಿದ್ದಾರೆ. ಸುರಕ್ಷತೆ, ರೋಗತಡೆ ಮತ್ತು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯನ್ವಯ ಲಸಿಕೆಗೆ ಅನುಮೋದನೆ ನೀಡಬೇಕಾಗುತ್ತದೆ ಎಂದರು.
ಇದೇ ವೇಳೆ ಹೈದರಾಬಾದ್‌ನ ಭಾರತ್ ಬಯೋ ಟೆಕ್ ವಾಷಿಂಗ್ಟನ್ ವಿವಿಯ ವೈದ್ಯಕೀಯ ವಿಭಾಗದ ಜತೆಗೆ ಲಸಿಕೆ ಸಂಶೋಧನೆ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ
ಹಾಕಿದೆ. ಅಮೆರಿಕ, ಜಪಾನ್ ಮತ್ತು ಐರೋಪ್ಯ ಒಕ್ಕೂಟ ಹೊರತುಪಡಿಸಿ ಉಳಿದೆಡೆ ಅದನ್ನು ಭಾರತ್ ಬಯೋಟೆಕ್ ಪೂರೈಸಲಿದೆ.
ಸೌದಿಗೆ ಹಾರಲ್ಲ ವಿಮಾನ
ಭಾರತದಿಂದ ಸೌದಿ ಅರೇಬಿಯಾಕ್ಕೆ ಯಾವುದೇ ವಿಮಾನಗಳು ಹಾರಾಟ ನಡೆಸುವು ದಿಲ್ಲ.ಕೊರೊನಾ ಹಿನ್ನೆಲೆಯಲ್ಲಿ ಈ ಸೌದಿ ಅರೇಬಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (ಜಿಎಸಿಎ) ಈ ಆದೇಶ ಹೊರಡಿಸಿದೆ.
ಭಾರತದ ಜತೆಗೆ ಬ್ರೆಜಿಲ್, ಅರ್ಜೆಂಟೀನಾಕ್ಕೆ ಕೂಡ ವಿಮಾನ ಸಂಚಾರ ನಡೆಸದೇ ಇರಲು ನಿರ್ಧರಿಸಿದೆ.ಕಳೆದ ಶನಿವಾರ ದುಬೈನಿಂದ ವಿಮಾನಯಾನ ರದ್ದುಗೊಳಿಸಲಾಗಿತ್ತು. ಸೌದಿ ಅರೇಬಿಯಾ ದಲ್ಲಿ ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.