ಕೋವಿಡ್‌ ಸಂಕಷ್ಟ: 2022ರ ವರೆಗೂ ಸಾಮಾಜಿಕ ಅಂತರ


Team Udayavani, Apr 16, 2020, 2:58 PM IST

ಕೋವಿಡ್‌ ಸಂಕಷ್ಟ: 2022ರ ವರೆಗೂ ಸಾಮಾಜಿಕ ಅಂತರ

ಹೊಸದಿಲ್ಲಿ: ನಗರ ಪಾಲಿಕೆ ಸಿಬಂದಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.

ನ್ಯೂಯಾರ್ಕ್‌: ಲಾಕ್‌ಡೌನ್‌ ತೆರವುಗೊಂಡ ಕೂಡಲೇ ಬಂಧುಬಳಗದವರನ್ನು ಕಂಡು ಅಪ್ಪಿ ನಲಿದಾಡಬಹುದು ಎಂದು ಭಾವಿಸಿದ್ದೀರಾ? ಅಮೆರಿಕದ ವಿಜ್ಞಾನಿಗಳು ನಡೆಸಿದ ಹೊಸದೊಂದು ಅಧ್ಯಯನ ನಿಮ್ಮ ಈ ಕನಸಿಗೆ ತಣ್ಣೀರು ಎರಚುವಂತಿದೆ. ಸರಕಾರ ಲಾಕ್‌ಡೌನ್‌ನಂಥ ನಿರ್ಬಂಧಗಳನ್ನು ತೆರವುಗೊಳಿಸಿದರೂ ಜನರು ಸ್ವ ಪ್ರೇರಣೆಯಿಂದ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಇಲ್ಲದಿದ್ದರೆ ಕೋವಿಡ್‌ ಯಾವುದೇ ಸಮಯದಲ್ಲಿ ಮರಳಿ ವಕ್ಕರಿಸುವ ಅಪಾಯವಿದೆ ಎಂದು ಎಚ್ಚರಿಸಿದೆ ಈ ಅಧ್ಯಯನ.

ಬೇಸಗೆಯಲ್ಲಿ ಕೋವಿಡ್‌-19 ವೈರಸ್‌ ಸಾಯುತ್ತದೆ ಎನ್ನುವುದಕ್ಕೆ ಇಷ್ಟರ ತನಕ ಯಾವ ಪುರಾವೆಯೂ ಸಿಕ್ಕಿಲ್ಲ. ಹೀಗಾಗಿ ಕೋವಿಡ್‌-19 ಪ್ರಕರಣಗಳು ಮರುಕಳಿಸದಿರಲು ಇನ್ನೂ ಎರಡು ವರ್ಷವಾದರೂ ಕೆಲವು ನಿರ್ಬಂಧಗಳನ್ನು ಜನರು ಸ್ವಪ್ರೇರಣೆಯಿಂದ ಪಾಲಿಸುವುದು ಒಳಿತು ಎಂದು ಈ ಅಧ್ಯಯನ ಸಲಹೆ ಮಾಡಿದೆ. ಪರಸ್ಪರರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಅಪ್ಪುಗೆ, ಚುಂಬನ, ಹಸ್ತಲಾಘವದಂಥ ಪದ್ಧತಿಗಳನ್ನು ತ್ಯಜಿಸುವ ಅನಿವಾರ್ಯತೆ ತಲೆದೋರಬಹುದು ಎಂದು ಅಧ್ಯಯನ ಹೇಳಿದೆ. ಒಂದು ಸಲ ಲಾಕ್‌ಡೌನ್‌ ಹೇರಿದ ಕೂಡಲೇ ಕೋವಿಡ್‌-19 ಹಾವಳಿ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ಖಾತರಿಯಿಲ್ಲ. ಒಂದೇ ಒಂದು ಪಾಸಿಟಿವ್‌ ಪ್ರಕರಣ ಉಳಿದಿದ್ದರೂ ಮರಳಿ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ.

“ಸಯನ್ಸ್‌’ ವೈಜ್ಞಾನಿಕ ನಿಯತಕಾಲಿಕದಲ್ಲಿ ಈ ಕುರಿತಾದ ವಿಸ್ತೃತವಾದ ಲೇಖನವೊಂದು ಪ್ರಕಟವಾಗಿದೆ. ಇದರಲ್ಲಿ ಕೋವಿಡ್‌-19 ಪಿಡುಗಿನ ಬಳಿಕದ ದಿನಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಒಂದು ಲಾಕ್‌ಡೌನ್‌ನಿಂದ ಕೋವಿಡ್‌ ಹಾವಳಿ ಮುಗಿಯಿತು ಎಂದು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಎರಡನೇ ಸಲ ಮರುಕಳಿಸಿದರೆ ಅದು ಮೊದಲ ಸಲಕ್ಕಿಂತ ಹೆಚ್ಚು ತೀವ್ರವಾಗಿರುವ ಸಾಧ್ಯತೆ ಇದೆ ಎನ್ನುವುದು ಈ ಲೇಖನದ ಒಟ್ಟು ತಾತ್ಪರ್ಯ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಮುಂದಿನ ಕೆಲವು ವರ್ಷದ ಮಟ್ಟಿಗೆ ಜನರು ಸ್ವ ನಿಯಂತ್ರಣ ಹೇರಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದಾರೆ.

2025ರ ತನಕವಿದೆ ಕೋವಿಡ್‌ ಹಾವಳಿ
ಓರ್ವ ತಜ್ಞ ಹೇಳುವ ಪ್ರಕಾರ ಮನುಕುಲ 2025ರ ತನಕವೂ ಕೋವಿಡ್‌-19 ಪೀಡೆ ಯನ್ನು ಅನುಭವಿಸುತ್ತಿರಬೇಕಾ ಗುತ್ತದೆ. ಪರಿಣಾಮಕಾರಿ ಯಾದ ಚಿಕಿತ್ಸೆ ಅಥವಾ ಲಸಿಕೆ ಸಂಶೋಧನೆಯಾಗುವ ತನಕ ಕೋವಿಡ್‌-19 ಪದೇ ಪದೇ ಕಾಟ ಕೊಡುವ ಸಾಧ್ಯತೆಯಿದೆ. ಇದಕ್ಕೆ ಚೀನದಲ್ಲಿ ಎರಡನೇ ಸುತ್ತಿನ ಕೋವಿಡ್‌ ಹಾವಳಿ ಶುರುವಾಗಿರುವುದನ್ನೇ ಉದಾಹರಣೆಯಾಗಿ ತೋರಿಸುತ್ತಿದ್ದಾರೆ ತಜ್ಞರು. ಹಾರ್ವರ್ಡ್‌ ವಿವಿಯ ವೈರಾಣು ಸಂಶೋಧಕ ಮಾರ್ಕ್‌ ಲಿಪ್‌ಸ್ಟಿಚ್‌ ಹೇಳುವಂತೆ , ಸೋಂಕುಗಳು ಎರಡು ರೀತಿಯಲ್ಲಿ ಹರಡುತ್ತವೆ. ಒಂದು ಸೋಂಕಿತ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಮತ್ತು ಅಜ್ಞಾತ ವ್ಯಕ್ತಿಯಿಂದ ಒಂದಿಡೀ ಸಮುದಾಯಕ್ಕೆ. ಸದ್ಯಕ್ಕೆ ಎರಡನೇ ಅಪಾಯವೇ ಹೆಚ್ಚು ಇದೆ.

ಯಾವ ದೇಶವೂ ಲಾಕ್‌ಡೌನ್‌ ಬಳಿಕದ ಯೋಜನೆಗಳನ್ನು ಹೊಂದಿಲ್ಲ. ಎಲ್ಲ ಸರಕಾರಗಳಿಗೂ ಸದ್ಯಕ್ಕೆ ಲಾಕ್‌ಡೌನ್‌ ಮುಗಿಯುವುದೇ ಮುಖ್ಯ. ಇದು ಇನ್ನೊಂದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಲಾಕ್‌ಡೌನ್‌ ಮುಗಿದ ಬಳಿಕ ಜನರು ಏನು ಮಾಡಬೇಕು ಎನ್ನುವ ಸಮಗ್ರ ಯೋಜನೆಯೊಂದನ್ನು ತಯಾರಿಸಿಟ್ಟುಕೊಳ್ಳುವು ಅಗತ್ಯ ಎಂದು ಅಭಿಪ್ರಾಯಪಡುತ್ತಾರೆ ಲಿಪ್‌ಸ್ಟಿಚ್‌.

ಕೋವಿಡ್‌-19 ಹಾವಳಿ ತೀವ್ರವಾಗಿರುವ ಅಮೆರಿಕ, ಇಟಲಿ, ಬ್ರಿಟನ್‌, ಸ್ಪೈನ್‌ ಮತ್ತಿತರ ಕೆಲವು ದೇಶಗಳು ಇನ್ನೂ ಕನಿಷ್ಠ ಎರಡು ವರ್ಷಗಳ ಮಟ್ಟಿಗೆ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ. 70 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮತ್ತು ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುವುದು, ಸಾಮುದಾಯಿಕ ನೆಲೆಯಲ್ಲಿ ನಿಯಮಿತವಾಗಿ ಕೋವಿಡ್‌ ಪರೀಕ್ಷೆ ನಡೆಸುವಂಥ ಕ್ರಮಗಳನ್ನು ಅನುಷ್ಠಾನಿಸುವುದು ಈ ದೇಶಗಳಿಗೆ ಅನಿವಾರ್ಯವಾಗಬಹುದು. ಬಜೆಟ್‌ನ ದೊಡ್ಡ ಮೊತ್ತವನ್ನು ಕೋವಿಡ್‌ಗಾಗಿ ಮೀಸಲಿರಿಸುವ ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾದೀತು ಎನ್ನುತ್ತಾರೆ ತಜ್ಞರು.

ಬದಲಾಗುತ್ತಾ ಜೀವನ ಶೈಲಿ?
ವಿಜ್ಞಾನಿಗಳು ಹೇಳುವ ಸಲಹೆಗಳನ್ನೆಲ್ಲ ಪಾಲಿಸಿದರೆ ಜನರ ಜೀವನ ಶೈಲಿಯೇ ಬದಲಾಗುವ ಸಾಧ್ಯತೆಯಿದೆ. ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರರಿಗೆ ಶುಭಕೋರುವ ಹಸ್ತಲಾಘವ, ಅಪ್ಪುಗೆ, ಚುಂಬನದಂಥ ಪದ್ಧತಿಗಳು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುವ ಸಾಧ್ಯತೆಯೂ ಇಲ್ಲದಿಲ್ಲ. ಈ ಮೂಲಕ ಒಂದು ಸಂಸ್ಕೃತಿಯೇ ಪಲ್ಲಟವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಟಾಪ್ ನ್ಯೂಸ್

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.