![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 14, 2020, 12:02 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಜಗತ್ತನ್ನೇ ಕಂಗೆಡಿಸಿರುವ ಅಗೋಚರ ವೈರಾಣು ಕೋವಿಡ್ 19ಗೆ ಸದ್ಯಕ್ಕಂತೂ ಯಾವುದೇ ಸಿದ್ಧ ಔಷಧವಿಲ್ಲ. ಮನುಷ್ಯನಲ್ಲಿರುವ ಪ್ರತಿರೋಧಕ ಶಕ್ತಿ ಮತ್ತು ಸ್ವಲ್ಪ ಮಟ್ಟಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರವೇ ಕೋವಿಡ್ ವೈರಸ್ ಗೆ ಪ್ರತಿರೋಧ ಒಡ್ಡಲು ಸಾಧ್ಯ ಎನ್ನುವುದು ಗೊತ್ತಾಗಿದೆ.
ಆದರೆ ಈ ಸಾರ್ಸ್ ಮಾದರಿಯ ಭೀಕರ ಸೋಂಕಿಗೆ ಸದ್ಯಕ್ಕೆ ವಿಶ್ವಾದ್ಯಂತ ಔಷಧ ಕಂಡುಹಿಡಿಯಲು ಸುಮಾರು 30 ಪ್ರಾಜೆಕ್ಟ್ ಗಳು ಜಾರಿಯಲ್ಲಿವೆ. ಮುಂಬರುವ ಸೆಪ್ಟಂಬರ್ ವೇಳೆಗೆ ಈ ಮಹಾಮಾರಿ ವೈರಸ್ ಅನ್ನು ಮಣಿಸುವ ಔಷಧಿ ಖಂಡಿತ ಸಿದ್ಧವಾಗಲಿದೆ ಎನ್ನುತ್ತಿದ್ದಾರೆ ಆಕ್ಸ್ ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಕ್ಸಿನಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸಾರಾ ಗಿಲ್ಬರ್ಟ್ ಅವರು.
ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಕೆಲವೊಂದು ಔಷಧಿಗಳ ಕ್ಲಿನಿಕಲ್ ಟ್ರಯಲ್ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಸಾರಾ ಅವರು ಹೇಳಿದ್ದಾರೆ. ಮತ್ತು ಇದನ್ನು ಆದ್ಯತೆಯ ಮೇರೆಗೆ ಮುಗಿಸುವ ಇಚ್ಛೆಯನ್ನೂ ಸಹ ಇವರು ವ್ಯಕ್ತಪಡಿಸಿದ್ದು ಈ ಮೂಲಕ ಮಾರಕ ಮಹಾಮಾರಿಯನ್ನು ಮಣಿಸುವ ಔಷಧಿ ಶೀಘ್ರವೇ ವಿಶ್ವಾದ್ಯಂತ ಕೋವಿಡ್ ಸೋಂಕಿತ ರೋಗಿಗಳಿಗೆ ಸಿಗುವಂತಾಗಬೇಕೆಂಬುದು ಇವರೆಲ್ಲರ ಉದ್ದೇಶವಾಗಿದೆ.
ಯುಕೆ ಔಷಧ ನಿಯಂತ್ರಕ ಮತ್ತು ನೈತಿಕ ಪರಿಶೀಲಕರಿಂದ ಈಗಾಗಲೇ ಸಮ್ಮತಿಯನ್ನು ಪಡೆದುಕೊಂಡಿರುವ ChAdOxl nCOV-19 ಎಂಬ ಔಷಧಿಯನ್ನು ತಮ್ಮ ಮೇಲೆ ಪರೀಕ್ಷಿಸಿಕೊಳ್ಳಲು ಈಗಾಗಲೇ 18 ರಿಂದ 55 ವರ್ಷ ಪ್ರಾಯದ 510 ಸ್ವಯಂಸೇವಕರು ಸಿದ್ಧಗೊಂಡಿದ್ದು ಇವರ ಮೇಲೆ ಈ ಔಷಧಿಯ ಪರೀಕ್ಷೆ ಶೀಘ್ರವೇ ನಡೆಯಲಿದೆ ಎಂದು ತಿಳಿದುಬಂದಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.