ನಿರೀಕ್ಷೆ ಹುಸಿಮಾಡಿದ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ
ಪ್ರಯೋಗ ಕಣಕ್ಕೆ ಜಿಗಿದ ಥಾಯ್ಲೆಂಡ್ ; ಗುಡ್‌ನ್ಯೂಸ್ ಕೊಟ್ಟ ಮಾಡರ್ನ್ ಇಂಕ್
Team Udayavani, May 22, 2020, 1:44 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಆಕ್ಸ್ ಫರ್ಡ್ ಮುಗ್ಗರಿಸಿದೆ.
ಕೋತಿಗಳ ಮೇಲೆ ಲಸಿಕೆ ಪ್ರಯೋಗಿಸಿದ್ದ ಆಕ್ಸ್‌ಫರ್ಡ್‌ನ ತಜ್ಞರು, ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಶೆ ಅನುಭವಿಸಿದ್ದಾರೆ.
‘ಭಾರತ ಮೂಲದ 6 ರೀಸಸ್ ಮಕಾಕ್‌ಗಳ ಮೇಲೆ ಪ್ರಯೋಗಿಸಿದ್ದ ಲಸಿಕೆ ಯಾವುದೇ ಪರಿಣಾಮ ಬೀರುತ್ತಿಲ್ಲ. ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪಷ್ಟಪಡಿಸಿದ್ದಾರೆ.
‘ಮಾಡರ್ನ್’ ಯಶಸ್ಸು: ಇನ್ನೊಂದೆಡೆ, ಅಮೆರಿಕದ ಬಯೋಟೆಕ್ನಾಲಜಿ ಸಂಸ್ಥೆ ಮಾಡರ್ನ್ ಇಂಕ್‌ನ ಲಸಿಕೆ ಸಫಲತೆ ಕಾಣುತ್ತಿದೆ. 8 ಸೋಂಕಿತರ ಮೇಲೆ ಪ್ರಯೋಗ ನಡೆದಿದ್ದು, ದೈಹಿಕ ಪರಿಣಾಮಗಳ ಬಗ್ಗೆ ಅಧ್ಯಯನ ಸಾಗಿದೆ. ಕೆಲವರಲ್ಲಿ ನೋವು, ಇಂಜೆಕ್ಷನ್ ಚುಚ್ಚಿದ ಜಾಗ ಕೆಂಪಾಗಿರುವುದು, ಜ್ವರ ಇತ್ಯಾದಿ ಅಡ್ಡ ಪರಿಣಾಮಗಳು ಕಂಡುಬಂದಿದ್ದು, ಇದು ಲಸಿಕೆಯ ಸಫಲತೆಯನ್ನು ಸೂಚಿಸುತ್ತವೆ ಎನ್ನಲಾಗುತ್ತಿದೆ.
ಥಾಯ್ ಪ್ರವೇಶ: ಇನ್ನೊಂದೆಡೆ ಥಾಯ್ಲೆಂಡ್ ಕೂಡ ಲಸಿಕೆ ಓಟಕ್ಕೆ ಜಿಗಿದಿದ್ದು, ಇಲಿಗಳ ಮೇಲಿನ ಪ್ರಯೋಗಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಥಾಯ್ ರಾಷ್ಟ್ರೀಯ ಲಸಿಕಾ ಸಂಸ್ಥೆ ಶೀಘ್ರವೇ ಕೋತಿಗಳ ಮೇಲೆ ಪ್ರಯೋಗ ಮುಂದುವರಿಸಲಿದೆ.
ಅಮೆರಿಕ- ಜರ್ಮನಿ ಜಂಟಿ: ಅಮೆರಿಕ ಮೂಲದ ಫಿಫೈಜರ್, ಜರ್ಮನಿಯ ಬಿಎನ್‌ಟೆಕ್ ಸಂಸ್ಥೆಯ ಜತೆಗೂಡಿ ನಡೆಸುತ್ತಿರುವ ಸಂಶೋಧನೆ, ಮಾನವ ಪ್ರಯೋಗಕ್ಕೆ ಸಜ್ಜಾಗಿದ್ದು, 160 ಮಂದಿ ಪರೀಕ್ಷೆಗೊಳಪಡಲಿದ್ದಾರೆ. ಈಗಾಗಲೇ ಪ್ರಪಂಚದಲ್ಲಿ 100ಕ್ಕೂ ಅಧಿಕ ಸಂಶೋಧನೆಗಳು ಚಾಲ್ತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.