ಅಮೆರಿಕದಲ್ಲಿ ಕೋವಿಡ್ 19 ಅಟ್ಟಹಾಸ: 11 ಸಾವಿರ ದಾಟಿದ ಸಾವಿನ ಸಂಖ್ಯೆ
Team Udayavani, Apr 8, 2020, 6:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಿಶ್ವದಲ್ಲೇ ಅಮೆರಿಕ ಅತಿ ಹೆಚ್ಚು ಕೋವಿಡ್ 19 ವೈರಸ್ ಬಾಧಿತ ದೇಶವಾಗಿದ್ದು, 3.68 ಲಕ್ಷ ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಸಾವಿನ ಸಂಖ್ಯೆ 11 ಸಾವಿರ ದಾಟಿದೆ. ನ್ಯೂಯಾರ್ಕ್ ರಾಜ್ಯದಲ್ಲಿ 1.30 ಲಕ್ಷ ಮಂದಿ ಸೋಂಕಿತರಾಗಿದ್ದು, 5,750 ಜನ ಮೃತಪಟ್ಟಿದ್ದಾರೆ. ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿ 1ರಿಂದ 2.4 ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. ಲಕ್ಷಾಂತರ ಮಂದಿ ಭೀಕರ ಆರ್ಥಿಕ ಸಮಸ್ಯೆ ಎದುರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮಾತ್ರ ಸೋಂಕನ್ನು ನಿಯಂತ್ರಿಸುತ್ತಿದ್ದು, ಸದ್ಯಕ್ಕೆ ಅಪಾಯ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗವಾಗಿದೆ. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದ್ದು, ಬೇರೆ ರಾಜ್ಯಗಳಿಂದ ವೆಂಟಿಲೇಟರ್, ಔಷಧ ತರಿಸಿಕೊಳ್ಳಲಾಗಿದೆ. ಅಮೆರಿಕದಲ್ಲಿ ನ್ಯೂಯಾರ್ಕ್, ಮಿಚಿಗಾನ್, ಲೌಸಿಯಾನ್ ಹಾಟ್‌ಸ್ಪಾಟ್ ಪ್ರದೇಶಗಳಾಗಿವೆ. ಇದೇ ವೇಳೆ ನ್ಯೂಯಾರ್ಕ್‌ನಲ್ಲಿ ಒಂದೇ ದಿನ 760 ಮಂದಿ ಅಸುನೀಗಿದ್ದಾರೆ.
5 ಸಾವಿರ ಭಾರತೀಯ ಮೂಲದವರಿಗೆ ಸೋಂಕು
ಅಮೆರಿಕದಲ್ಲಿರುವ ಭಾರತೀಯ ಮೂಲ ನಿವಾಸಿಗಳ ಬದುಕನ್ನೂ ಕೋವಿಡ್ ವೈರಸ್ ಆತಂಕಕ್ಕೆ ತಳ್ಳಿದೆ. ಪರೀಕ್ಷೆಗೊಳಪಟ್ಟ ಬಹುತೇಕರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅನೇಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸರಕಾರ ನೀಡದೇ ಇದ್ದರೂ, ಇಂಡಿಯನ್ – ಅಮೆರಿಕನ್ ಸಮುದಾಯದ ಸಂಸ್ಥೆಗಳ ಹೇಳಿಕೆ ಆಧರಿಸಿ, ಅಂದಾಜಿಸಲಾಗಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಇದುವರೆಗೆ 1,70,000 ಪಾಸಿಟಿವ್ ಪ್ರಕರಣಗಳಲ್ಲಿ, 5,700 ಮಂದಿ ಭಾರತೀಯ ಮೂಲದವರೇ ಇದ್ದಾರೆ. ಕೊರೊನಾ ಸೋಂಕು ತೀವ್ರಗೊಂಡಿದ್ದು, ಯುಎನ್‌ಐ ಸುದ್ದಿ ಸಂಸ್ಥೆಯ ವರದಿಗಾರ ಬ್ರಹ್ಮ ಕುಚಿಬೋಟ್ಲಾ ಸೋಮವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ಓಹಿಯೋದ ವೈದ್ಯ ಡಾ. ಮುಕುಲ್ ಚಂದ್ರ ಅವರು, ಜೀವನ್ಮರಣ ದೊಂದಿಗೆ ಹೋರಾಡುತ್ತಿದ್ದಾರೆ. ಭಾರತೀಯ ಮೂಲದ ಸಂಘಸಂಸ್ಥೆಗಳು ನಿತ್ಯವೂ ಸದಸ್ಯರ, ಸಂಬಂಧಿಕರ ಕ್ಷೇಮದ ಕುರಿತು ಮಾಹಿತಿ ದಾಖಲಿಸುತ್ತಿವೆ. ಅಲ್ಲದೆ, ಭಾರತೀಯ ಮೂಲದ ಸಂತ್ರಸ್ತರಿಗಾಗಿ ದೇಣಿಗೆಯನ್ನು ಸಂಗ್ರಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.