ENT ತಜ್ಞರು, ರೆಸಿಡೆಂಟ್ ಡಾಕ್ಟರ್‌ಗಳ ಸೇವೆ ಪಡೆಯಿರಿ ; ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ
ತರಬೇತಿ ಪಡೆಯ ಸಿಬ್ಬಂದಿ ನಿಯೋಜನೆಗೆ ಸೂಚನೆ
Team Udayavani, Apr 13, 2020, 6:33 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕು ವ್ಯಾಪಿಸಿರುವ ಕಾರಣ ಕೋವಿಡ್ ಪರೀಕ್ಷೆಯ ಸ್ಯಾಂಪಲ್ ಸಂಗ್ರಹಕ್ಕೆ ವಿದ್ಯಾವಂತ ಸಿಬ್ಬಂದಿಯ ಅಗತ್ಯತೆಯಿದ್ದು, ಕೂಡಲೇ ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರನ್ನು ಹಾಗೂ ರೆಸಿಡೆಂಟ್ ವೈದ್ಯರನ್ನು ಈ ಕೆಲಸಕ್ಕೆ ಬಳಸಿಕೊಳ್ಳಿ ಎಂದು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
‘ದೇಶವು ಈಗ ಹಿಂದೆಂದೂ ಕಾಣದಂಥ ಸ್ಥಿತಿಯನ್ನು ಎದುರಿಸುತ್ತಿದೆ. ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಲು ಸರ್ಕಾರವು ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಆ ಪೈಕಿ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರಾವಣವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವುದು ಪ್ರಮುಖವಾಗಿದೆ.
ಈ ಮಾದರಿಗಳನ್ನು ಸಂಗ್ರಹಿಸಲು ನಮಗೆ ತುರ್ತಾಗಿ ತರಬೇತಿ ಪಡೆದ ಸಮರ್ಪಕ ಸಿಬ್ಬಂದಿಯ ಅಗತ್ಯವಿದೆ. ಹಾಗಾಗಿ, ಕೂಡಲೇ ಅಂಥವರನ್ನು ಈ ಸೇವೆಗೆ ಬಳಸಿಕೊಳ್ಳಿ’ ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ (ಆರೋಗ್ಯ) ಬರೆದ ಪತ್ರದಲ್ಲಿ ಆರೋಗ್ಯ ಸಚಿವಾಲಯ ನಿರ್ದೇಶಿಸಿದೆ.
“ಎಲ್ಲಾ ವೈದ್ಯಕೀಯ ಸಂಸ್ಥೆಗಳಿಗೂ ಈ ಕುರಿತು ಸೂಚನೆಯನ್ನು ರವಾನಿಸಿ. ಎಲ್ಲ ವೈದ್ಯಕೀಯ ಕಾಲೇಜುಗಳು ಕೂಡ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿ. ಸ್ಯಾಂಪಲ್ ಗಳನ್ನು ವೃತ್ತಿಪರವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾದಾಗ, ಸೇವೆಗೆ ಸಿದ್ಧವಿರುವಂತೆ ಅವರಿಗೆ ಸೂಚಿಸಿ’ ಎಂದೂ ಪತ್ರದಲ್ಲಿ ನಿರ್ದೇಶಿಸಲಾಗಿದೆ.
ಮತ್ತೂಂದೆಡೆ, ಈಗಾಗಲೇ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ವೈದ್ಯರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ವೈದ್ಯರು ಸ್ವಯಂಪ್ರೇರಿತರಾಗಿ ಕೊವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿದ್ದಾರೆ.
ವೈದ್ಯಕೀಯ ತಂಡದ ಮೇಲೆ ದಾಳಿ
ಕೋವಿಡ್ ಸೋಂಕು ಪರೀಕ್ಷೆಗೆ ತೆರಳಿದ್ದ ವೈದ್ಯಕೀಯ ತಂಡವನ್ನು ಬೆದರಿಸಿ, ಒತ್ತೆಯಿರಿಸಿದ್ದ ಪ್ರಕರಣ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ವಥೂರ ಗ್ರಾಮದಲ್ಲಿ ನಡೆದಿದೆ. ಶನಿವಾರ, ವೈದ್ಯಕೀಯ ತಂಡ ವೈರಸ್ ಸೋಂಕು ಪರೀಕ್ಷೆ ನಡೆಸಲು ಗ್ರಾಮಕ್ಕೆ ತೆರಳಿತ್ತು. ಶಂಕಿತ ಸೋಂಕಿತ ರೋಗಿಯನ್ನು ಅವರು ಪರೀಕ್ಷೆಗೊಳಪಡಿಸಬೇಕಿತ್ತು. ಆದರೆ ಅದನ್ನು ಅವರ ಕುಟುಂಬ ತಡೆಯಿತು. ಅಲ್ಲದೇ ವೈದ್ಯಕೀಯ ತಂಡದವರ ಮೇಲೆ ಕಲ್ಲು ತೂರಾಟ ನಡೆಸಿ, ಅವರನ್ನು ತಮ್ಮ ಮನೆಯಲ್ಲಿ ಕೂಡಿಹಾಕಿದ್ದರು.
ಇನ್ನೊಂದು ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆ ಮೇಲೆ ಕುಟುಂಬವೊಂದು ಹಲ್ಲೆ ನಡೆಸಿದೆ. ಆರೋಗ್ಯ ಕಾರ್ಯಕರ್ತೆ ಇಲ್ಲಿಯ ಕುಟುಂಬವೊಂದರ ಸದಸ್ಯರಿಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಲು ಗಂಟಲು ದ್ರವದ ಮಾದರಿಯನ್ನು ಸಂಗ್ರಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.