ನಾಲ್ಕು ದಿನಗಳಲ್ಲಿ ಸೋಂಕಿತರ ಜಿಗಿತ ; ಈಶಾನ್ಯದಲ್ಲಿ ಸೋಂಕಿತರ ಸಂಖ್ಯೆ 100ರಿಂದ 212ಕ್ಕೇರಿಕೆ

ಬಿಎಸ್‌ಎಫ್ ಬೆಟಾಲಿಯನ್‌ನಲ್ಲೇ ಹೆಚ್ಚು ಪ್ರಕರಣ ; ಪ್ರತಿ 10 ಹೊಸ ಪ್ರಕರಣಗಳ ಪೈಕಿ 9 ಪ್ರಕರಣ ದೃಢಪಟ್ಟಿರುವುದು 10 ರಾಜ್ಯಗಳಲ್ಲಿ

Team Udayavani, May 11, 2020, 7:02 AM IST

ನಾಲ್ಕು ದಿನಗಳಲ್ಲಿ ಸೋಂಕಿತರ ಜಿಗಿತ ; ಈಶಾನ್ಯದಲ್ಲಿ ಸೋಂಕಿತರ ಸಂಖ್ಯೆ 100ರಿಂದ 212ಕ್ಕೇರಿಕೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಗರ್ತಲಾ/ಹೊಸದಿಲ್ಲಿ: ತ್ರಿಪುರ ಹಾಗೂ ಅಸ್ಸಾಂನಲ್ಲಿ ಕೋವಿಡ್ ಸೋಂಕು ವ್ಯಾಪಿಸುವಿಕೆಯು ವೇಗ ಪಡೆದಿದೆ.

ಈಶಾನ್ಯ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಕೇವಲ 4 ದಿನಗಳಲ್ಲಿ ದುಪ್ಪಟ್ಟಾಗಿದೆ. 4 ದಿನಗಳ ಹಿಂದೆ 100 ಆಗಿದ್ದ ಸಂಖ್ಯೆ ಈಗ 212ಕ್ಕೇರಿಕೆಯಾಗಿರುವುದು, ಈಶಾನ್ಯದ ಜನರಲ್ಲಿ ಆತಂಕ ಮನೆ ಮಾಡಿದೆ.

ಅಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಮಾ.24ರಂದು ಮಣಿಪುರದಲ್ಲಿ. ಈ ಸಂಖ್ಯೆಯು 50ಕ್ಕೇರಿಕೆಯಾಗಲು 24 ದಿನಗಳು ಬೇಕಾದವು, ಅನಂತರ ಸೋಂಕಿತರ ಸಂಖ್ಯೆ 100ಕ್ಕೇರಲು 18 ದಿನಗಳು ಬೇಕಾದವು. ಆದರೆ ಈಗ ಕೇವಲ 4 ದಿನಗಳಲ್ಲಿ ಇದು 212ಕ್ಕೇರಿಕೆಯಾಗಿದೆ.

ಈ ಪ್ರದೇಶದ 7 ರಾಜ್ಯಗಳಿಗೆ ಸೋಂಕು ವ್ಯಾಪಿಸಿದ್ದು, ತ್ರಿಪುರದಲ್ಲಿ ಅತಿ ಹೆಚ್ಚು ಅಂದರೆ 132 ಪ್ರಕರಣಗಳಿದ್ದರೆ, ಅಸ್ಸಾಂನಲ್ಲಿ 63, ಮೇಘಾಲಯದಲ್ಲಿ 13 ಮಂದಿಗೆ ಸೋಂಕು ದೃಢಪಟ್ಟಿದೆ.

ಮಣಿಪುರದಲ್ಲಿ 2 ಪ್ರಕರಣಗಳಿದ್ದರೆ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು, ಈ ಮೂರೂ ರಾಜ್ಯಗಳಲ್ಲಿ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸೋಂಕು ಮುಕ್ತ ಎಂದು ಘೋಷಿಸಿದ್ದರು: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಅವರು ಇತ್ತೀಚೆಗಷ್ಟೇ ರಾಜ್ಯವನ್ನು ಕೋವಿಡ್ ಮುಕ್ತವೆಂದು ಘೋಷಿಸಿದ್ದರು. ಆದರೆ, ಈ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಒಂದೇ ವಾರದ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿದೆ. ವಿಶೇಷವೆಂದರೆ, ಎಲ್ಲ ಹೊಸ ಪ್ರಕರಣಗಳು ಕೂಡ ಧಲಾಯಿ ಜಿಲ್ಲೆಯಲ್ಲಿನ ಎರಡು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಬೆಟಾಲಿಯನ್‌ ನಿಂದಲೇ ವರದಿಯಾಗಿವೆ.

ಮೇ 2ರಂದು ತ್ರಿಪುರದ ಇಬ್ಬರು ಬಿಎಸ್‌ಎಫ್ ಯೋಧರಿಗೆ ಸೋಂಕು ಕಾಣಿಸಿಕೊಂಡಿತ್ತು. ಮಾರನೇ ದಿನವೇ ಅದೇ ಬೆಟಾಲಿಯನ್‌ ನ 12 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಅನಂತರ ಅವರ ಕುಟುಂಬ ಸದಸ್ಯರಿಗೂ ವ್ಯಾಪಿಸಿದ ಪರಿಣಾಮ ಸೋಂಕಿನ ಸಂಖ್ಯೆ ಹೆಚ್ಚುತ್ತಾ ಸಾಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ರಿಪುರದಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದು ಗೋಮತಿ ಜಿಲ್ಲೆಯ ಒಬ್ಬ ಮಹಿಳೆ ಮತ್ತು ಉತ್ತರ ತ್ರಿಪುರದ ಯೋಧನಿಗೆ. ಅವರಿಬ್ಬರೂ ಎಪ್ರಿಲ್‌ನಲ್ಲೇ ಗುಣಮುಖರಾಗಿದ್ದರು. ಈಗ ಮತ್ತೆ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಧಲಾಯಿ ಜಿಲ್ಲೆಯನ್ನು ಕೆಂಪು ವಲಯ ಎಂದು ಇಲ್ಲಿನ ಸರಕಾರ ಘೋಷಿಸಿದೆ.

ಇಲ್ಲಿನ ಐದು ಬೆಟಾಲಿಯನ್‌ಗಳು, ಎರಡು ಬೆಟಾಲಿಯನ್‌ ಪ್ರಧಾನ ಕಚೇರಿಗಳು, ಗಂಡಛೆರಾದಲ್ಲಿನ ಒಂದು ಬೇಸ್‌ ಕ್ಯಾಂಪ್‌, ಕರೀನಾ ಮತ್ತೆ ಕಮಲ್‌ಪುರ ನಗರದಲ್ಲಿನ ಗಡಿ ಠಾಣೆಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿದೆ.

ಸ್ಥಳೀಯಾಡಳಿತವು ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸುತ್ತಿದ್ದೇವೆ ಮತ್ತು ಜಿಲ್ಲೆಯಾದ್ಯಂತ ಸೋಂಕು ನಿವಾರಕಗಳ ಸಿಂಪಡಣೆಯನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದೇವೆ ಎಂದು ಧಲಾಯಿ ಜಿಲ್ಲಾಧಿಕಾರಿ ಬ್ರಹ್ಮೀತ್‌ ಕೌರ್‌ ಹೇಳಿದ್ದಾರೆ.

10 ಹಾಟ್‌ಸ್ಪಾಟ್‌ ರಾಜ್ಯಗಳು-ನಗರಗಳು
ದೇಶದಲ್ಲಿ ಮೇ 2ರಿಂದ 8ರ ವರೆಗೆ ಅಂದರೆ ಕೇವಲ 7 ದಿನಗಳ ಅವಧಿಯಲ್ಲಿ ದೃಢಪಟ್ಟ ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಪೈಕಿ ಶೇ.95ರಷ್ಟು ಪ್ರಕರಣಗಳು ಪತ್ತೆಯಾಗಿರುವುದು 10 ರಾಜ್ಯಗಳಲ್ಲಿ.

ಇನ್ನು ನಗರಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ, ಅರ್ಧಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು 4 ನಗರಗಳಲ್ಲಿ. ಅವೆಂದರೆ ಮುಂಬಯಿ, ದಿಲ್ಲಿ, ಅಹ್ಮದಾಬಾದ್‌ ಮತ್ತು ಚೆನ್ನೈ.

ದೇಶದ ಇತರ ಭಾಗಗಳ ಕಥೆ
ಮೇ 2ರಂದು ಕೆಳಗೆ ಉಲ್ಲೇಖಿಸಿದ 10 ನಗರಗಳಲ್ಲಿ 1575 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ದೇಶದ ಉಳಿದ ಭಾಗಗಳಲ್ಲಿ 992 ಪ್ರಕರಣಗಳಷ್ಟೇ ದೃಢಪಟ್ಟಿದ್ದವು.

ಇದಾದ ಒಂದು ವಾರದ ಬಳಿಕ, ಈ 10 ನಗರಗಳು ಹಾಗೂ ದೇಶದ ಇತರೆ ಭಾಗಗಳ ಸೋಂಕಿತರ ಸಂಖ್ಯೆಯ ನಡುವಿನ ಅಂತರ 1,163 ಆಯಿತು.

ಅಂದರೆ, ಈ 10 ನಗರಗಳನ್ನು ಹೊರತುಪಡಿಸಿದರೆ, ಉಳಿದ ಭಾಗಗಳಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಹಾಟ್‌ ಸ್ಪಾಟ್‌ ನಗರಗಳಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

ಟಾಪ್‌ 10 ನಗರಗಳು
ಮುಂಬೈ (12,142), ದೆಹಲಿ (6,318), ಅಹಮದಾಬಾದ್‌ (5,260), ಚೆನ್ನೈ (3,046), ಪುಣೆ (1,938), ಇಂದೋರ್‌ (1,727), ಜೈಪುರ (1,145), ಜೋಧ್‌ ಪುರ (851), ಕೋಲ್ಕತ್ತಾ (846), ಥಾಣೆ (724)

ಗುಣಮುಖರ ಪ್ರಮಾಣ ಶೇ.30
ಹತ್ತು ರಾಜ್ಯಗಳಲ್ಲಿ ಶನಿವಾರದಿಂದ ರವಿವಾರದ ಅವಧಿಯಲ್ಲಿ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ ಎಂದಿದ್ದಾರೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌. 1,511 ಮಂದಿ ಒಂದು ದಿನದ ಅವಧಿಯಲ್ಲಿ ಗುಣಮುಖರಾಗಿದ್ದಾರೆ.

ಹೀಗಾಗಿ ಗುಣಮುಖರಾಗುವವರ ಪ್ರಮಾಣ ಶೇ.30.75ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 128 ಸಾವಿನ ಪ್ರಕರಣಗಳು, 3, 277 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲ ಗಳಿಗೆ ಕೇಂದ್ರ ತಂಡಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ ಎಂದರು.

ಮೇ 2ರಿಂದ 8ರವರೆಗೆ ದೇಶಾದ್ಯಂತ ಒಟ್ಟು 22,199 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ, 21,002 ಪ್ರಕರಣಗಳು (ಶೇ.95) ಕೇವಲ 10 ರಾಜ್ಯಗಳಿಂದ ವರದಿಯಾಗಿವೆ. ಅದರಲ್ಲೂ ಶೇ.58ರಷ್ಟು ಸೋಂಕಿತರು ಪತ್ತೆಯಾಗಿರುವುದು ಮಹಾರಾಷ್ಟ್ರ, ಗುಜರಾತ್‌ ಮತ್ತು ದಿಲ್ಲಿಯಲ್ಲಿ.

14 ಸಾವಿರ ಸೂಪರ್‌ ಸ್ಪ್ರೆಡರ್ಸ್‌?
ಅಹಮದಾಬಾದ್‌ ಒಂದರಲ್ಲೇ ಸುಮಾರು 14 ಸಾವಿರ ಸೂಪರ್‌ ಸ್ಪ್ರೆಡರ್ಸ್‌ ಇರುವ ಬಗ್ಗೆ ಅಲ್ಲಿನ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಈವರೆಗೆ 334 ಮಂದಿ ಸೂಪರ್‌ ಸ್ಪ್ರೆಡರ್ಸ್‌ (ಸೋಂಕನ್ನು ವ್ಯಾಪಕವಾಗಿ ಹರಡುವವರು) ಪತ್ತೆಯಾಗಿದ್ದಾರೆ. ಸದ್ಯ ಅಲ್ಲಿ 15ರವರೆಗೆ ಸಂಪೂರ್ಣ ಶಟ್‌ಡೌನ್‌ಗೆ ಆದೇಶ ನೀಡಲಾಗಿದೆ.

– 10 ರಾಜ್ಯಗಳ ಪಾಲು: ಶೇ.94.6

– ಮಹಾರಾಷ್ಟ್ರ, ಗುಜರಾತ್‌ ಮತ್ತು ದೆಹಲಿಯ ಪ್ರಮಾಣ : ಶೇ.57.8

– ದೇಶಾದ್ಯಂತದ ಒಟ್ಟು ಸಾವಿನಲ್ಲಿ 10 ರಾಜ್ಯಗಳ ಪಾಲು: ಶೇ.94.9

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.