ಇಂಡೋನೇಷ್ಯಾ: ಕೋವಿಡ್ ರೂಪಾಂತರ ವೈರಸ್ ಪತ್ತೆ
ಈ ವರೆಗೆ ಒಂದು ಲಕ್ಷ 72 ಸಾವಿರ 53 ಪ್ರಕರಣಗಳು ವರದಿಯಾಗಿದ್ದು, 7343 ಜನರು ಸಾವನ್ನಪ್ಪಿದ್ದಾರೆ.
Team Udayavani, Aug 31, 2020, 11:12 AM IST
ಮಣಿಪಾಲ: ಇಂಡೋನೇಷ್ಯಾ ದಲ್ಲಿ ಕೋವಿಡ್‌ನ ಮತ್ತೂಂದು ರೂಪಾಂತರ ಪತ್ತೆಯಾಗಿದೆ. ಇದನ್ನು ಜಕಾರ್ತಾದ ಅಜೆಕ್ಮನ್ ಇನ್ ಸ್ಟಿಟ್ಯೂಟ್ ಫಾರ್ ಮಾಲಿಕ್ಯುಲರ್ ಬಯಾಲಜಿ ವರದಿ ಮಾಡಿದೆ.
ವೈರಸ್‌ನ ಈ ಆವೃತ್ತಿಯು ತುಂಬಾ ಮಾರಕವಲ್ಲವಾಗಿದ್ದರೂ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ರೋಗಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ಕೋವಿಡ್‌ನ ಡಿ 614 ಜಿ ರೂಪಾಂತರ ಕಂಡುಬಂದಿದ್ದು, ದೇಶದಲ್ಲಿ ಇತ್ತೀಚೆಗೆ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಸಂಸ್ಥೆಯ ಉಪನಿರ್ದೇಶಕ ಹೆರಾವತಿ ಸುಡೋ ಹೇಳಿದ್ದಾರೆ.
ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ಅಧ್ಯಯನಗಳು ಅಗತ್ಯವಾಗಿವೆ. ರವಿವಾರ ಹೊಸದಾಗಿ 2858 ಸೋಂಕು ಪ್ರಕರಣಗಳು ವರದಿಯಾಗಿವೆ.
ಈ ವರೆಗೆ ಒಂದು ಲಕ್ಷ 72 ಸಾವಿರ 53 ಪ್ರಕರಣಗಳು ವರದಿಯಾಗಿದ್ದು, 7343 ಜನರು ಸಾವನ್ನಪ್ಪಿದ್ದಾರೆ.
ಬ್ರಿಟನ್ ಸರಕಾರದ ವರದಿ ಸೋರಿಕೆ
ಬ್ರಿಟನ್‌ನ ಕೋವಿಡ್ ಗೆ ಸಂಬಂಧಿಸಿದ ಸರಕಾರ ವರದಿಯನ್ನು ಬಹಿರಂಗಪಡಿಸಲಾಗಿದೆ. ಬಿಬಿಸಿನಲ್ಲಿನ ವರದಿಯ ಪ್ರಕಾರ, ಚಳಿಗಾಲದ ವೇಳೆಗೆ ದೇಶದಲ್ಲಿ
85,000 ಜನರು ಸಾಯಬಹುದು ಎಂಬುದು ಉಲ್ಲೇಖವಾಗಿದೆ.
ನವೆಂಬರ್‌ನಿಂದ ಮಾರ್ಚ್ ವರೆಗೆ ದೇಶದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದಾಗಿದೆ. ಲಂಡನ್‌ನಲ್ಲಿ ಎರಡನೇ ತರಂಗ ಕೋವಿಡ್ 19 ಗಂಭೀರಗೊಳ್ಳುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನಂತರ ಲಾಕ್‌ಡೌನ್ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪ್ರಕರಣಗಳು ತ್ವರಿತವಾಗಿ ಹೆಚ್ಚಾದರೆ ಮತ್ತೆ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಗೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.