ಜಪಾನ್ : ಥೀಮ್ ಪಾರ್ಕಿನಲ್ಲಿ ಕಿರುಚಾಟ ನಿಷೇಧ
ಆರೋಗ್ಯದ ಸುರಕ್ಷೆಗಾಗಿ ಕೆಲವು ಕಟ್ಟುನಿಟ್ಟನ ನಿಯಮಗಳನ್ನು ರೂಪಿಸಲಾಗಿದೆ.
Team Udayavani, Jun 1, 2020, 2:43 PM IST
ಸಾಂದರ್ಭಿಕ ಚಿತ್ರ
ಟೋಕಿಯೊ: ಸುಮಾರು ಒಂದೂವರೆ ತಿಂಗಳ ತುರ್ತು ಪರಿಸ್ಥಿತಿಯಿಂದ ಬಸವಳಿದಿದ್ದ ಜನರು ಈಗ ಮನೆಯಿಂದ ಹೊರಬಂದು ಥೀಮ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಎಂದೆಲ್ಲ ಸುತ್ತಾಡುತ್ತಿದ್ದಾರೆ. ಆದರೆ ಇಲ್ಲಿ ಮನರಂಜನೆಯ ಚಿತ್ರಣ ಮಾತ್ರ ತುಸು ಬದಲಾಗಿದೆ. ಸಾಮಾಜಿಕ ಅಂತರ ಪಾಲನೆ ಒಂದೆಡೆಯಾದರೆ ಥೀಮ್ ಪಾರ್ಕ್‌ಗಳಲ್ಲಿ ಸಾಮಾನ್ಯವಾಗಿ ಮಾಡುವ ಮೋಜು ಮಸ್ತಿಗಳಿಗೆ ಕತ್ತರಿ ಬಿದ್ದಿದೆ. ರೋಲರ್ ಕೋಸ್ಟರ್, ಜಯಂಟ್ ವೀಲ್‌ಗಳಲ್ಲಿ ಕುಳಿತಾಗ ಥ್ರಿಲ್‌ನಿಂದ ಕಿರುಚುವುದು, ಅರಚುವುದು ಇಂಥದ್ದಕ್ಕೆಲ್ಲ ಅವಕಾಶವಿಲ್ಲ. ಈ ವಾರ ತುರ್ತು ಪರಿಸ್ಥಿತಿ ತೆರವಾದ ಬಳಿಕ ಬಹುತೇಕ ಥೀಮ್ ಪಾರ್ಕ್‌ಗಳನ್ನು ತೆರೆಯಲಾಗಿದೆ. ಆದರೆ ಇಲ್ಲಿಗೆ ಬರುವವರ ಮತ್ತು ಇಲ್ಲಿನ ಸಿಬಂದಿಗಳ ಆರೋಗ್ಯದ ಸುರಕ್ಷೆಗಾಗಿ ಕೆಲವು ಕಟ್ಟುನಿಟ್ಟನ ನಿಯಮಗಳನ್ನು ರೂಪಿಸಲಾಗಿದೆ.
ರೋಲರ್ ಕೋಸ್ಟರ್, ಜಯಂಟ್ ವೀಲ್ ಸೇರಿದಂತೆ ಎಲ್ಲ ಥ್ರಿಲ್ಲಿಂಗ್ ಮನರಂಜನೆಯ ಸಾಧನಗಳನ್ನು ಪ್ರತಿಯೊಂದು ಪಾಳಿ ಮುಗಿದ ಸ್ಯಾನಿಟೈಸ್ ಮಾಡಲಾಗುತ್ತದೆ. ಪಾರ್ಕ್ ಒಳಗೆ ಪ್ರವೇಶಿಸುವಾಗಲೇ ಟೆಂಪರೇಚರ್ ಚೆಕ್ಕಿಂಗ್, ಮಾಸ್ಕ್, ಗ್ಲೌಸ್ ಇತ್ಯಾದಿ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಅಂತರ ಪಾಲಿಸಬೇಕಾಗಿರುವುದರಿಂದ ಒಂದು ಸೀಟಿನಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುವುದರಿಂದ ಸಹಜವಾಗಿಯೇ ದರಗಳೆಲ್ಲ ಏರಿಕೆಯಾಗಿವೆ. ಇದೇ ವೇಳೆ ಗುಂಪುಗೂಡದೆ ಆಡುವ ಕೆಲವು ಥ್ರಿಲ್ಲಿಂಗ್ ಆಟಗಳನ್ನು ಹೊಸದಾಗಿ ಸೇರಿಸಿಕೊಂಡು ಆಕರ್ಷಣೆ ಹೆಚ್ಚಿಸಲಾಗಿದೆ. ಜನರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವುದರಿಂದ ಇಂಥ ಆಟಗಳನ್ನು ಇಷ್ಟಪಡುತ್ತಿದ್ದಾರೆ.
1 ಮೀಟರ್ ಅಂತರ
ಮಾತಿನಲ್ಲಿ ಮನರಂಜನೆ ನೀಡುವವರು, ಹಾಂಟೆಡ್ ಹೌಸ್ ಸಿಬಂದಿ ಇಂಥವರಿಗೆಲ್ಲ ಮಾಸ್ಕ್ ಧರಿಸಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿ ಕನಿಷ್ಠ 1 ಮೀಟರ್ ಅಂತರದ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದೆ.
ಕಸ್ಟಮರ್ ಸರ್ವಿಸ್ ಬದಲಾವಣೆ
ಥೀಮ್ ಪಾರ್ಕ್‌ಗಳ ಗ್ರಾಹಕ ಸೇವೆಯಲ್ಲೂ ಭಾರೀ ಬದಲಾವಣೆಗಳಾಗಿವೆ. ಕಸ್ಟಮರ್ ಕೇರ್ ಕೇಂದ್ರದಲ್ಲಿರುವವರು ಮಾಸ್ಕ್ ಧರಿಸಿರುವುದರಿಂದ ಮಾಮೂಲು ಸುಂದರವಾದ ನಗೆಯೊಂದಿಗೆ ಗ್ರಾಹಕರಿಗೆ ಸ್ವಾಗತ ಕೋರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಕಣ್ಣಿನಲ್ಲೇ ಸ್ವಾಗತಕೋರುವ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಹಕರ ಜತೆಗೆ ಸಂವಹನ ನಡೆಸುವ ಹೊಸ ವಿಧಾನವನ್ನು ಕಲಿಸಿಕೊಡಲಾಗಿದೆ. ಇವೆಲ್ಲ ಸರಕಾರಿ ಮಾರ್ಗದರ್ಶನದಲ್ಲಿ ರೂಪಿಸಲಾದ ನಿಯಮಗಳು.
ಇವುಗಳಲ್ಲದೆ ಕೆಲವು ಥೀಮ್‌ಪಾರ್ಕ್‌ಗಳು ತಮ್ಮದೇ ಆದ ಕೆಲವು ನಿಯಮಗಳನ್ನು ಸೇರಿಸಿಕೊಂಡಿವೆ. ಕೆಲವು ಥೀಮ್‌ಪಾರ್ಕ್‌ಗಳಲ್ಲಿ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಸ್ಯಾನಿಟೈಸರ್ ಬಾಟಲಿ, ಮಾಸ್ಕ್, ಗ್ಲೌಸ್ ಮಾರುವ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಹೊರಾಂಗಣ ಗೇಮ್‌ಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ.
ನಿಯಮಗಳ ಪಾಲನೆ
ತುರ್ತ ಪರಿಸ್ಥಿತಿಯಿಂದ ಜನರು ಬಿಡುಗಡೆಗೊಂಡರೂ ಕೂಡ ಲಾಕ್‌ಡೌನ್‌ನ ನಿಯಮಗಳನ್ನು ಮರೆಯುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಿಂದಿನಷ್ಟೇ ಈಗಲೂ ಅಗತ್ಯ. ಮನೋರಂಜನೆಗೆ ತೆರಳುವೆಲ್ಲೆಡೆಗಳಲ್ಲಿ ಆರೋಗ್ಯ ತಪಾಸಣೆಗಳನ್ನು ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.