ಆಸ್ಕರ್ ಪ್ರಶಸ್ತಿ ವಿತರಣೆಗೂ ಕೋವಿಡ್ ಗ್ರಹಣ
Team Udayavani, Jun 17, 2020, 3:02 PM IST
ಲಾಸ್‌ಏಂಜಲೀಸ್: ಕೋವಿಡ್ ಸೋಂಕಿನಿಂದಾಗಿ ವಿಶ್ವದ ಪ್ರಮುಖ ಕಾರ್ಯಕ್ರಮಗಳೆಲ್ಲ ಮುಂದೂಡಲಾಗಿದ್ದರೆ, ಅದಕ್ಕೀಗ ಆಸ್ಕರ್ ಪ್ರಶಸ್ತಿ ವಿತರಣೆಯೂ ಸೇರಿದೆ. ಇತ್ತೀಚೆಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಘೋಷಣೆ, ವಿತರಣೆ ಮುಂದೂಡಿದ ಬೆನ್ನಲ್ಲೇ ಆಸ್ಕರ್ ಪ್ರಶಸ್ತಿ ವಿತರಣೆಯೂ ಮುಂದೂಡಿಕೆಯಾದ ಸುದ್ದಿ ಬಂದಿದೆ. 2021ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿತರಣೆ ಫೆಬ್ರವರಿಯಲ್ಲಿ ನಡೆಯಬೇಕಿದ್ದು, ಅದನ್ನು ಎಪ್ರಿಲ್ ತಿಂಗಳಿಗೆ ಮುಂದೂಡಲಾಗಿದೆ. ಫೆ.28ರಂದು ನಡೆಯಬೇಕಿದ್ದ ಕಾರ್ಯಕ್ರಮ ಎ.25ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಆಸ್ಕರ್ ಅಕಾಡೆಮಿ ಹೇಳಿದೆ.
ವಿಶ್ವಾದ್ಯಂತ ಕೋವಿಡ್‌ನಿಂದಾಗಿ ಸಿನೆಮಾ ಪ್ರದರ್ಶನ, ಶೂಟಿಂಗ್‌ಗಳೂ ನಡೆಯುತ್ತಿಲ್ಲ. ಇದನ್ನು ಮನಗಂಡು ಆಸ್ಕರ್‌ಗೆ ಚಿತ್ರಗಳ ನಾಮ ನಿರ್ದೇಶನದಿನಾಂಕವನ್ನೂ ಮುಂದೂಡಲಾಗಿದೆ. ಈ ಮೊದಲು 2020 ಡಿ.31ರಂದು ನಾಮನಿರ್ದೇಶನಕ್ಕೆ ಕೊನೆಯ ದಿನವೆಂದು ಹೇಳಲಾಗಿತ್ತು. ಈಗ 2021 ಫೆ.28ರಂದು ಕೊನೆಯ ದಿನವೆಂದು ಪರಿಷ್ಕರಿಸಲಾಗಿದೆ. ಹಲವಾರು ಸಿನೆಮಾಗಳು 2021ರಂದು ಬಿಡುಗಡೆಗೆ ದಿನಾಂಕ ನಿಗದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಸ್ಕರ್ ಕೂಡ ದಿನಾಂಕವನ್ನು ಪರಿಷ್ಕರಿಸಿದೆ ಎಂದು ಹೇಳಲಾಗಿದೆ.
ಇನ್ನು ಆಸ್ಕರ್ ಪ್ರಶಸ್ತಿ ವಿತರಣೆಯ ದಿನಾಂಕವನ್ನು ಮುಂದೂಡಿದ್ದು ಇತಿಹಾಸದಲ್ಲೇ ಇದು ನಾಲ್ಕನೇ ಬಾರಿಯಾಗಿದೆ. 1938ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಪ್ರವಾಹ, 1968ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅವರ ಹತ್ಯೆ, 1981ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಹತ್ಯೆ ಯತ್ನದಿಂದಾಗಿ ಆಸ್ಕರ್ ಪ್ರಶಸ್ತಿ ವಿತರಣೆ ಮುಂದೂಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.