ಕೋವಿಡ್ ವೈಫಲ್ಯ: ಟ್ರಂಪ್ ಭವಿಷ್ಯಕ್ಕೆ ಆತಂಕ
Team Udayavani, Jun 10, 2020, 12:58 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಐದು ತಿಂಗಳಿದ್ದರೂ ಮತದಾರರು ಡೊನಾಲ್ಡ್ ಟ್ರಂಪ್ ಅವರ ಹಣೆಬರಹವನ್ನು ಈಗಾಗಲೇ ನಿರ್ಧರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್ ಊಹಿಸಿಕೊಂಡಿರುವುದಕ್ಕಿಂತ ಭಿನ್ನ ಫಲಿತಾಂಶ ಬರಲಿದ್ದು, ಅವರಿಗೆ ಸೋಲು ಖಚಿತ ಎನ್ನಲಾಗುತ್ತಿದೆ.
ಟ್ರಂಪ್ ಭವಿಷ್ಯಕ್ಕೆ ಮುಳ್ಳುವಾದ ಕೋವಿಡ್ ಬಿಕ್ಕಟ್ಟು
ಟ್ರಂಪ್ ಹಣೆಬರಹ ಬದಲಾಗಲು ಇರುವ ಕಾರಣಗಳು ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿವೆ. ಅತಿ ಹೆಚ್ಚು ಕೋವಿಡ್ ವೈರಸ್ ಪ್ರಕರಣಗಳನ್ನು ಹೊಂದುವ ಮೂಲಕ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ವೈರಸ್ ಕಾಣಿಸಿಕೊಂಡಂದಿನಿಂದ ಈವರೆಗೂ ಅದನ್ನು ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂಬ ಮಾತುಗಳು ಟ್ರಂಪ್ ವಿರುದ್ಧ ಕೇಳಿ ಬರುತ್ತಿದೆ. ಈಗ ಆ ಮಾತುಗಳು ದೇಶವ್ಯಾಪಿ ಹಬ್ಬಿವೆ. ಕೊರೊನಾ ವಿಷಯದಲ್ಲಿ ಎರಡು ಆಲೋಚನೆಗಳನ್ನು ಹೊಂದಿದ್ದ ಮತದಾರರು, ಮೇ 25ರಂದು ಜಾರ್ಜ್ ಫ್ಲಾಯ್ಡ್ ಅವರ ಹತ್ಯೆಯ ಬಳಿಕ ಟ್ರಂಪ್‌ರನ್ನು ಸೋಲಿಸುವ ಒಂದೇ ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಮರುಚುನಾವಣೆಗೆ ಒತ್ತಾಯ
ಸಾಲದೆಂಬಂತೆ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅನೇಕ ರಾಷ್ಟ್ರಗಳು ಅಮೆರಿಕ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಘಟನೆ ಬಳಿಕ ಟ್ರಂಪ್ ರಾಜಕೀಯ ಭವಿಷ್ಯ ಕಠಿನವಾಗಿದೆ. ಅಮೆರಿಕಾದ್ಯಂತ ಬೃಹತ್ ಜನಾಂಗೀಯ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಕೋವಿಡ್ ವೈರಸ್ ನಿಯಂತ್ರಿಸುವಲ್ಲಿ ಟ್ರಂಪ್ ವಿಫಲವಾಗಿದ್ದು, ಅಧ್ಯಕ್ಷೀಯ ಅಭ್ಯರ್ಥಿಗಾಗಿ ಮರುಚುನಾವಣೆ ನಡೆಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಕೊರೊನಾ ಸೋಂಕಿತರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿವೆ. ಜತೆಗೆ ಹೊಸದಾಗಿ ಜಾರಿಗೆ ತಂದಿರುವ ಸುಂಕಗಳು ಮತ್ತು ಅಧ್ಯಕ್ಷರ ವಿರುದ್ಧ ಜನರು ಧಿಕ್ಕಾರ ಕೂಗುತ್ತಿದ್ದಾರೆ. ಇವೆಲ್ಲದರ ನಡುವೆ ನವೆಂಬರ್‌ನಲ್ಲಿ ಗೆಲುವಿನ ನಗೆ ಬೀರಲೇಬೇಕೆಂದು ಟ್ರಂಪ್ ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಬೆಂಬಲ ಕಳೆದುಕೊಂಡ ಅಧ್ಯಕ್ಷ
ಇತ್ತ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಟ್ರಂಪ್‌ಗೆ ಕೋವಿಡ್ ಮುಳ್ಳುತಂತಿಯಂತೆ ಅಡ್ಡವಾಗಿದೆ. ಆಂತರಿಕ ಪ್ರಚಾರ ಸಮೀಕ್ಷೆಗಳಲ್ಲಿ, ಸಾರ್ವಜನಿಕ ಮತದಾನ ಮತ್ತು ರಾಜ್ಯಗಳಲ್ಲಿ ಟ್ರಂಪ್‌ಗೆ ಬೆಂಬಲ ಕುಸಿದಿದೆ ಎಂಬ ಫಲಿತಾಂಶವೇ ಬರುತ್ತಿದೆ. ಟ್ರಂಪ್ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ಮುಂದಾಗಿದ್ದಾರೆ. ಆದರೆ, ಟ್ರಂಪ್‌ನ ಆಡಳಿತದಿಂದ ಬೇಸತ್ತಿರುವ ಸ್ವಪಕ್ಷದವರೇ ಪಕ್ಷ ಬಲಗೊಳಿಸಲು ಮುಂದೆ ಬರುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪಕ್ಷಕ್ಕೆ ಬರುತ್ತಿದ್ದ ಫಂಡ್ ಕೂಡ ಕೋವಿಡ್ ವೈರಸ್‌ನಿಂದ ಸ್ಥಗಿತಗೊಂಡಿದೆ.
ರ್ಯಾಲಿಗೂ ವಿರೋಧ
ಬೇಸಗೆಯಲ್ಲಿ ರ್ಯಾಲಿಗಳನ್ನು ನಿಗದಿಪಡಿಸಲು ಅಭಿಯಾನ ಸಿದ್ಧವಾಗಬೇಕೆಂದು ಟ್ರಂಪ್ ಒತ್ತಾಯಿಸಿದ್ದು, ಆದರೆ ಇದು ಅಪಾಯಕಾರಿ ಎಂದು ಸಹಾಯಕರು ಎಚ್ಚರಿಸಿದ್ದಾರೆ. ಪ್ರಚಾರ ಕಾರ್ಯಕ್ರಮವೊಂದರಲ್ಲಿ ವೈರಸ್ ಹರಡಿದರೆ ನಮ್ಮ ವಿರುದ್ಧ ನಕಾರಾತ್ಮಕ ಸುದ್ದಿ ಹಬ್ಬುತ್ತದೆ ಎಂದು ಸಲಹೆಗಾರರು ಸಲಹೆ ನೀಡಿದ್ದು, ಈಗಾಗಲೇ ನಡೆಸುತ್ತಿದ್ದ ಸಹಿ ಸಂಗ್ರಹ ಅಭಿಯಾನವನ್ನೂ ನಿಲ್ಲಿಸಿದ್ದಾರೆ. ಇತ್ತ ವಿಪಕ್ಷವು ಕೋವಿಡ್ ವೈರಸ್ ನಿಯಂತ್ರಿಸಲು ವಿಫಲವಾದ ಮತ್ತು ಜನಾಂಗೀಯ ತಾರತಮ್ಯವನ್ನೇ ತನ್ನ ಅಸ್ತ್ರವಾಗಿಸಿಕೊಂಡು ಟ್ರಂಪ್ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ.
ಆಗಸ್ಟ್ ಹೊತ್ತಿಗೆ ಅಮೆರಿಕದಲ್ಲಿ 1,45,000 ಮಂದಿ ಸಾವು?
ವಾಷಿಂಗ್ಟನ್: ಈಗಿನ ಪ್ರಮಾಣದಲ್ಲೇ ಕೊರೊನಾ ಸೋಂಕು ಏರಿಕೆಯಾದರೆ ಮುಂದಿನ ಆಗಸ್ಟ್ ಹೊತ್ತಿಗೆ ಅಮೆರಿಕದಲ್ಲಿ ಸುಮಾರು 1,45,000 ಮಂದಿ ಈ ಮಾರಿಗೆ ಬಲಿಯಾಗಲಿದ್ದಾರೆ ಎಂದು ಯೂನಿವರ್ಸಿಟಿ ಆಫ್ ವಾಷಿಂಗ್ಟನ್‌ನ ಸಂಶೋಧಕರು ಸೋಮವಾರ ಅಂದಾಜಿಸಿದ್ದಾರೆ. ಜತೆಗೆ ಮುಂದಿನ ಕೆಲವೇ ದಿನಗಳಲ್ಲಿ ಸುಮಾರು 5 ಸಾವಿರ ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ಕಳೆದ ಶುಕ್ರವಾರವಷ್ಟೇ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ವಿಶ್ವವಿದ್ಯಾಲಯವು ಆಗಸ್c ಹೊತ್ತಿಗೆ ಕೊರೊನಾ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಸುಮಾರು 1,40, 496 ಮಂದಿ ಸಾವಿಗೀಡಾಗಬಹುದು ಎಂದು ಅಂದಾಜಿಸಿತ್ತು. ಸೋಮವಾರ ಅದನ್ನು ಪರಿಷ್ಕರಿಸಿ ಹೊಸ ಅಂಕಿಅಂಶವನ್ನು ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಸ್ಪಷ್ಟ ಕಾರಣವನ್ನು ತಿಳಿಸಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.