![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 22, 2020, 6:17 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮೈಸೂರು/ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದ ಕೋವಿಡ್ ವಾರಿಯರ್ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಮೈಸೂರಿನಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿದೆ.
ಮಾಸ್ಕ್ ಧರಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ ಆಶಾ ಕಾರ್ಯಕರ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಮೂವರು ಪುಂಡರು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ಮೂವರನ್ನೂ ಬಂಧಿಸಲಾಗಿದೆ.
ಮೈಸೂರಿನ ಆಲೀಂ ನಗರದಲ್ಲಿ ಈ ಪ್ರಕರಣ ನಡೆದಿದೆ. ಗುಜರಿ ಬಳಿ ಕುಳಿತಿದ್ದ ಮೆಹಬೂಬ್, ಕಲೀಮ್ ಮತ್ತು ಜೀಶಾನ್ ಅವರಿಗೆ ಆಶಾ ಕಾರ್ಯಕರ್ತೆ ಸುಮಯ್ಯಾ ಫಿರ್ದೋಸ್ ಅವರು ಮಾಸ್ಕ್ ಧರಿಸಿ, ಅಕ್ಕಪಕ್ಕ ಕುಳಿತಿರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದರು.
ಇದರಿಂದ ಕೆರಳಿ ಅವರನ್ನು ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆನ್ನೂ ಹಾಕಿದ ಈ ಮೂವರೂ ಪುಂಡರನ್ನು ಎನ್.ಆರ್. ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಭೇಟಿಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಆಶಾ ಕಾರ್ಯಕರ್ತೆಯನ್ನು ಭೇಟಿಯಾಗಿದ್ದಾರೆ.
ಪೊಲೀಸರಿಗೆ ಹೆಚ್ಚು ಬಲ
ಕೋವಿಡ್ ವಾರಿಯರ್ಸ್‌ಗೆ ರಕ್ಷಣೆ ನೀಡಲು ರೂಪಿಸಲಾಗುತ್ತಿರುವ ಅಧ್ಯಾದೇಶದಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಇರುವ ‘ಕರ್ನಾಟಕ ಸಾಂಕ್ರಾಮಿಕ ರೋಗ ಗಳ ಕಾಯಿದೆ’ ಹಿಂಪಡೆದು ಹೊಸ ಕಾಯಿದೆ ರೂಪಿಸಲಾಗುತ್ತದೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯಿದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆಯ ಕೆಲವು ಅಂಶಗಳನ್ನೂ ಇದಕ್ಕೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಅಧಿಕಾರವೇನು?
– ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ನಿಂದನೆ ಶಿಕ್ಷಾರ್ಹ ಅಪರಾಧ
– ಗೂಂಡಾ ಕಾಯಿದೆಯಡಿ ನೀಡುವ ಶಿಕ್ಷೆ ಪ್ರಮಾಣ ಹೆಚ್ಚಳ
– ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ
– ಅಗತ್ಯ ವಸ್ತು ಒದಗಣೆ ಸೇವೆಗೆ ಸಮಯ ನಿಗದಿ
– ಗಲಭೆ ಉಂಟಾದರೆ ಪೊಲೀಸರಿಗೆ ಸ್ವಯಂ ಕ್ರಮ ಕೈಗೊಳ್ಳುವ ಅಧಿಕಾರ
– ಆಸ್ತಿ ಹಾನಿ ಮಾಡಿದರೆ ಆರೋಪಿಗಳ ಆಸ್ತಿ ಮುಟ್ಟುಗೋಲು
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.