ಸಾರ್ವಜನಿಕ ಶೌಚಾಲಯ ಬಳಕೆಯಿಂದಲೂ ಹರಡುತ್ತೆ ಕೋವಿಡ್
Team Udayavani, Aug 23, 2020, 3:40 PM IST
ವುಹಾನ್: ಕೋವಿಡ್ ವೈರಾಣುವಿನ ಮೂಲದ ಕುರಿತು ಇಂದಿಗೂ ಸಾಕಷ್ಟು ಚರ್ಚೆಗಳು ನಡೆಯುತ್ತಲ್ಲೇ ಇದೆ. ಇದರೊಂದಿಗೆ ಸೋಂಕು ಹೇಗೆಲ್ಲಾ ಹರಡುತ್ತದೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದ್ದು, ದಿನ ಕಳೆದಂತೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ವಿಷಯಗಳು ಹೊರ ಬರುತ್ತಲೇ ಇದೆ.
ಇದೀಗ ಚೀನದ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೋಂಕು ಹರಡುವಿಕೆ ಕುರಿತು ಮತ್ತೂಂದು ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಸಾರ್ವಜನಿಕ ಶೌಚಾಲಯ ಬಳಸುವುದರಿಂದಲೂ ಕೋವಿಡ್ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ..
ಸಾರ್ವಜನಿಕ ಶೌಚಾಲಯಲ್ಲಿ ಮೂತ್ರ ವಿಸರ್ಜನೆ ಮಾಡಿದರೂ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಇದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಉತ್ತಮ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ, ಲಿಕ್ವಿಡ್ ನಿಂದ ಒಳಗೊಂಡಿರುವ ಮೂತ್ರದಿಂದ ಬಿಡುಗಡೆಯಾಗುವ ಕಣಗಳು ಕೊರೊನಾಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ. ಸಂಶೋಧಕ ಡಾ. ಕ್ಸಿಯಾಂಗ್ಡಾಂಗ್ ಲಿಯು ಅವರು, ಸಾರ್ವಜನಿಕ ಶೌಚಾಲಯಗಳು ಕೋವಿಡ್ ಸೂಪರ್ ಸ್ಪ್ರೆಡರ್ ತಾಣಗಳಾಗಿ ಪರಿಣಮಿಸಬಹುದು. ಮೂತ್ರ ವಿಸರ್ಜನೆ ಮಾಡುವುದು ಅನಿಲ ಮತ್ತು ದ್ರವ ಸಂಪರ್ಕಸಾಧನಗಳ ನಡುವಿನ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುತ್ತದೆ. ಕೆಲವೇ ಸೆಕೆಂಡ್ ಗಳಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ.
ಜರ್ಮನ್ 4 ತಿಂಗಳ ಬಳಿಕ ಸೋಂಕು ಹೆಚ್ಚಳ : ಬರ್ಲಿನ್ : ಏಪ್ರಿಲ್ ಬಳಿಕ ಜರ್ಮನಿಯಲ್ಲಿ ಅತೀ ಹೆಚ್ಚು ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ಗುರುವಾರ ಒಂದೇ 1,707 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರುವರೆ ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ ಎಂದು ವರದಿ ತಿಳಿಸಿದೆ. ಕೋವಿಡ್ ಪಿಡುಗು ನಿರ್ವಹಣ ಕೇಂದ್ರ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ (ಆರ್‌ಕೆಐ) ಇತ್ತೀಚಿಗೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೂದೇಶದಲ್ಲಿ 2.28 ಲಕ್ಷಕ್ಕೂ ಹೆಚ್ಚುಸೋಂಕು ಪ್ರಕರಣಗಳು ದಾಖಲಾಗಿದ್ದು, ಗುರುವಾರ ಸೋಂಕಿಗೆ 10 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಒಟ್ಟು ಸಾವಿನ ಪ್ರಮಾಣ 9,253 ಕ್ಕೆ ಏರಿದೆ.
4 ತಿಂಗಳಿನಿಂದ ಹೊಸ ಸಾವು ಇಲ್ಲ : ಚೀನ : ಬೀಜಿಂಗ್: ಕಳೆದ ನಾಲ್ಕು ತಿಂಗಳಲ್ಲಿ ದೇಶದ ಆಸ್ಪತ್ರೆಗಳಲ್ಲಿ ಒಬ್ಬ ಸೋಂಕಿತರೂ ಸಹ ಸಾವನ್ನಪ್ಪಿಲ್ಲ ಎಂದು ಚೀನ ಹೇಳಿಕೊಂಡಿದೆ. ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿ ಗುವೊ ಯಾನ್ಹೋಂಗ್ ಬುಧವಾರ ಈ ಮಾಹಿತಿ ನೀಡಿದ್ದಾರೆ. ಇದಕ್ಕೆ ರೋಗಿಗಳನ್ನು ಚೀನ ನೋಡಿಕೊಂಡ ಕ್ರಮ ಕಾರಣ ಎಂದು ಹೇಳಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಚೀನ ಅನುಸರಿಸಿದ ಮಾರ್ಗ ಮತ್ತು ಸೋಂಕನ್ನು ನಿಯಂತ್ರಣಕ್ಕೆ
ತರುವಲ್ಲಿ ತನ್ನ ಈ ಹಿಂದಿನ ಅನುಭವಗಳು ಕೆಲಸ ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಯಾನ್ಹೋಂಗ್ ಹೇಳಿದ್ದಾರೆ. ಸತತ ನಾಲ್ಕನೇ ದಿನವೂ ಹೊಸಚೀನದ ಪ್ರಜೆಗಳಲ್ಲಿ ಸೋಂಕಿನ ಪ್ರಕರಣ ವರದಿಯಾಗಿಲ್ಲ. ಆದರೆ ವಿದೇಶದಿಂದ ಬಂದ 7 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.