ಆರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್ ಹೆಚ್ಚು ಅಪಾಯಕಾರಿ
Team Udayavani, Jun 20, 2020, 1:25 PM IST
ಬೀಜಿಂಗ್: ಇಲ್ಲಿನ ರೈಲು ನಿಲ್ದಾಣದ ಕೇಂದ್ರ ಸಭಾಂಗಣದಲ್ಲಿ ಕಾರ್ಮಿಕರು ಸೋಂಕು ನಿವಾರಕವನ್ನು ಸಿಂಪಡಿಸುತ್ತಿರುವುದು.
ಜಿನೇವಾ: ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿರುವವರು, ಹೃದಯ, ಯಕೃತ್ತಿನ ಕಾಯಿಲೆಗಳು ಮತ್ತು ಧೂಮಪಾನಿಗಳು ಕೋವಿಡ್ -19ಗೆ ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಂತಹವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಅವರಿಗೆ ಕೊರೊನಾ ವೈರಸ್ ತಗಲಿದರೆ ಅದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದ್ದಾರೆ.
ಧೂಮಪಾನಿಗಳಲ್ಲಿ ಎಸಿಇ 2 (ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ 2) ಹೆಚ್ಚಿರುತ್ತವೆ. ಅದರಿಂದ ಉರಿಯೂತ ಉಂಟಾಗುವ ಸಾಧ್ಯತೆಯಿದೆ ಮತ್ತು ಅದು ಹೆಚ್ಚು ಸ್ರವಿಸುವುದರಿಂದ ಕೋಶಗಳು ಸೋಂಕುಗಳಿಗೆ ತುತ್ತಾಗುವ ಅಪಾಯ ಅಧಿಕ. ಶ್ವಾಸಕೋಶಗಳು, ಅಪಧಮನಿಗಳು, ಹೃದಯ, ಮೂತ್ರಪಿಂಡ ಮತ್ತು ಕರುಳಿನಲ್ಲಿನ ಕೋಶಗಳ ಹೊರ ಮೇಲ್ಮೆ„ಯಲ್ಲಿ ಕಾಣಿಸುವ ಎಸಿಇ 2 ಕೊರೊನಾ ವೈರಸ್ ಪ್ರವೇಶ ಬಿಂದುವಾಗಿಯೂ ಕಾರ್ಯನಿರ್ವಹಿಸು ಸಾಧ್ಯತೆಯಿದೆ ಎನ್ನಲಾಗಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್ ಅಧ್ಯಯನದ ಪ್ರಕಾರ, ಧೂಮಪಾನಿಗಳು ಧೂಮಪಾನಿಗಳಲ್ಲದವರಿಗೆ ಮತ್ತು ಧೂಮಪಾನವನ್ನು ತ್ಯಜಿಸುವವರಿಗೆ ಹೋಲಿಸಿದರೆ 1.45 ಪಟ್ಟು ಹೆಚ್ಚು ತೀವ್ರವಾದ ತೊಂದರೆಗಳನ್ನು ಹೊಂದಿರುತ್ತಾರೆ. ಧೂಮಪಾನವು ಶ್ವಾಸಕೋಶದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರಿಂದ ಸೋಂಕುಗಳ ವಿರುದ್ಧ ಹೊರಾಡುವ ದೇಹದ ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸಲ್ಪಡುತ್ತದೆ. ಧೂಮಪಾನವು ಶ್ವಾಸಕೋಶ ಮತ್ತು ಗಂಟಲಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಕೋವಿಡ್ -19 ಸೋಂಕಿಗೆ ತುತ್ತಾದರೆ ಮರಣ ಹೊಂದುವ ಅಪಾಯ ಶೇ. 63ರಷ್ಟಿದೆ.
60 ವರ್ಷ ವಯಸಿಗಿಂತ ಮೇಲಿನ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಹೊಂದಿರುವವರನ್ನು ಕೊಮೊರ್ಬಿಡಿಟಿಗಳೆಂದು ಪರಿಗಣಿಸಲಾಗುತ್ತದೆ. ಡಬ್ಲ್ಯುಎಚ್‌ಒ ಪ್ರಕಟಿಸಿದ ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ವಿಮರ್ಶೆಯಲ್ಲಿ, ಧೂಮಪಾನಿಗಳ ಮೇಲೆ ಕೋವಿಡ್ -19 ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಕೊಮೊರ್ಬಿಡಿಟಿಗಳ ಮೇಲೂ ಹೆಚ್ಚು ತೀವ್ರತರವಾದ ಅಪಾಯ ಉಂಟು ಮಾಡಬಹುದು ಎಂದು ಕಾಂಟಿನೆಂಟಲ್ ಆಸ್ಪತ್ರೆ ಗಳ ಹಿರಿಯ ಸಲಹೆಗಾರ ಪಲ್ಮನೊಲೊಜಿಸ್ಟ್ ಡಾ| ನಿಶಾಂತ್ ಸಿನ್ಹಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.