ಕೋವಿಡ್: ಜರ್ಮನಿಯಲ್ಲಿ ಪ್ರಸರಣ ಪ್ರಮಾಣ ಏರಿಕೆ
ಹೊಸ ನಿರ್ಬಂಧಗಳ ಹೇರುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ
Team Udayavani, Jun 23, 2020, 11:43 AM IST
ಬರ್ಲಿನ್‌ನ ಪಾರ್ಕ್‌ವೊಂದರಲ್ಲಿ ಸಂಜೆಯ ವೇಳೆಗೆ ಜನರು ಸಾಮಾಜಿಕ ಅಂತರವನ್ನು ಮರೆತು ವಿಹರಿಸುತ್ತಿರುವುದು.
ಫ್ರಾಂಕ್‌ಫರ್ಟ್: ಜರ್ಮನಿಯ ಕೋವಿಡ್ ವೈರಸ್ ಪ್ರಸರಣ ಪ್ರಮಾಣವು ರವಿವಾರ 2.88ಕ್ಕೆ ಏರಿದೆ. ಶನಿವಾರ 1.79ಕ್ಕೆ ಏರಿಕೆಯಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ವೈರಸ್ ಪ್ರಸರಣ ಪ್ರಮಾಣ ಏರಿರುವುದು ಯುರೋಪಿನ ಅತಿ ದೊಡ್ಡ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿರುವ ಜರ್ಮನಿಯಲ್ಲಿ ಹೊಸ ನಿರ್ಬಂಧಗಳನ್ನು ಹೇರುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ.
ಇದುವರೆಗೆ ಕೋವಿಡ್ ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಮತ್ತು ಸಾವಿನ ಸಂಖ್ಯೆಯನ್ನು ತುಲನಾತ್ಮಕವಾಗಿ ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದ ಜರ್ಮನಿಗೆ ಇದೊಂದು ಬಲುದೊಡ್ಡ ಹೊಡೆತವಾಗಿದೆ. ಸಾಂಕ್ರಾಮಿಕವನ್ನು ನಿಯಂತ್ರಣದಲ್ಲಿಡಲು, ಜರ್ಮನಿಗೆ ವೈರಸ್ ಪ್ರಸರಣ ಪ್ರಮಾಣವು ಒಂದಕ್ಕಿಂತ ಕಡಿಮೆಯಿರಬೇಕು. ಸಾರ್ವಜನಿಕ ಆರೋಗ್ಯಕ್ಕಾಗಿ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಅಧ್ಯಯನ ವರದಿಯಂತೆ ವೈರಸ್ ಪ್ರಸರಣ ಪ್ರಮಾಣವು 2.88ರಷ್ಟಿದ್ದು, ಹೇಗೆಂದರೆ ವೈರಸ್ ಸೋಂಕಿಗೆ ಒಳಗಾದ 100 ಜನರಿಂದ ಇನ್ನೂ 288 ಜನರಿಗೆ ಸೋಂಕು ತಗಲಿದೆ. 7 ದಿನಗಳ ಸೋಂಕಿತರ ಪಟ್ಟಿಯ ಸರಾಸರಿಯನ್ನು ಆಧರಿಸಿ ಸೋಂಕಿನ ಪ್ರಮಾಣವು 2.03ಕ್ಕೆ ಏರಿದೆ ಎಂದು ಆರ್‌ಕೆಐ ಹೇಳಿದೆ.
ಆರ್ಥಿಕತೆಗೆ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ ರಾಜಕಾರಣಿಗಳು ಒತ್ತಡ ಹೇರಿದ ಕಾರಣ ದೇಶದಲ್ಲಿ ಇತ್ತೀಚೆಗೆ ಲಾಕ್‌ಡೌನ್ ಸಡಿಲಿಸಲಾಗಿತ್ತು. ಆದರೆ ಇದೀಗ ವೈರಸ್ ಪ್ರಸರಣ ಪ್ರಮಾಣವು ಏರಿಕೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.