20 ನಿಮಿಷದಲ್ಲಿ ಕೋವಿಡ್ ಪತ್ತೆ ; ಹೈದ್ರಾಬಾದ್ ಸಂಶೋಧಕರ ತಂಡದ ಸಾಧನೆ
Team Udayavani, Jun 9, 2020, 12:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸೋಂಕು ಪತ್ತೆ ಹಚ್ಚಲು ಬಳಸುವ ಪರೀಕ್ಷಾ ಕಿಟ್‌ಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸಲು ನಿರ್ಧರಿಸಿದ ಬಳಿಕ ವಿವಿಧ ಸಂಸ್ಥೆಗಳು ಹತ್ತು ಹಲವು ಬಗೆಯ ಕಿಟ್‌ಗಳನ್ನು ಸಿದ್ಧಪಡಿಸಿವೆ.
ಕಡಿಮೆ ಉತ್ಪಾದನೆ ವೆಚ್ಚ, ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡುವುದು ಸೇರಿ ಹಲವು ವಿಶೇಷತೆಗಳನ್ನು ಈ ಕಿಟ್‌ಗಳು ಒಳಗೊಂಡಿರುತ್ತವೆ.
ಅದೇ ರೀತಿ ದೇಶದಲ್ಲಿ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಶರವೇಗದಲ್ಲಿ ಹೆಚ್ಚುತ್ತಿರುವಾಗಲೇ ಹೈದರಾಬಾದ್‌ನಲ್ಲಿರುವ ಐಐಟಿ ಸಂಶೋಧಕರ ತಂಡ ಕಡಿಮೆ ಬೆಲೆಯ ಮತ್ತು ಸೋಂಕು ಇದೆಯೋ, ಇಲ್ಲವೋ ಎಂದು ಕೇವಲ 20 ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ನೀಡುವ ಟೆಸ್ಟ್ ಕಿಟ್ ಒಂದನ್ನು ಅಭಿವೃದ್ಧಿಪಡಿಸಿದೆ.
ಅನುಮತಿಯೊಂದೇ ಬಾಕಿ
ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ ತಂಡ, ಹೈದರಾಬಾದ್‌ನ ಇಎಸ್‌ಐಸಿ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಪ್ರಸ್ತುತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮತಿಗಾಗಿ ಕಾಯುತ್ತಿದೆ.
ಕಿಟ್‌ನ ವಿಶೇಷತೆ ಏನು?
– ಪರೀಕ್ಷಾ ವಿಧಾನವು ಹಾಲಿ ಜಾರಿಯಲ್ಲಿರುವ ಆರ್‌ಟಿ – ಪಿಸಿಆರ್ ಅನ್ನು ಆಧರಿಸಿಲ್ಲ.
– ಲಕ್ಷಣ ಸಹಿತ ಮತ್ತು ಲಕ್ಷಣ ರಹಿತ ಸೋಂಕು ಪತ್ತೆ ಹಚ್ಚಲು ಸಮರ್ಥ.
– ನಮೂನೆ ಸಂಗ್ರಹಿಸಿದ ಕೇವಲ 20 ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ.
– ಕಿಟ್ ಅನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು, ಸೋಂಕಿತರು ಇರುವ ಸ್ಥಳದಲ್ಲೇ ಪರೀಕ್ಷೆ ನಡೆಸಬಹುದು.
– ಒಂದು ಪರೀಕ್ಷಾ ಕಿಟ್‌ನ ಬೆಲೆ.: 550 ರೂ.
– ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಿದಾಗ ಕಿಟ್ ದರ: 350 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.