ಡಿಜಿಟಲ್ ಪಾವತಿ ಉತ್ತೇಜಿಸಿದ ಕೋವಿಡ್
Team Udayavani, Jun 5, 2020, 2:30 PM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಪ್ರಮುಖ ರೆಸ್ಟೋರೆಂಟ್‌ಗಳು ಇದೀಗ ಸಂಪೂರ್ಣ ಡಿಜಿಟಲ್ ಪಾವತಿಯತ್ತ ಹೊರಳಿದ್ದು, ಅದನ್ನೇ ಪ್ರಚುರಪಡಿಸುತ್ತಿವೆ. ಕೋವಿಡ್ ವೈರಸ್ ಹರಡುವ ಮೊದಲೇ ಡಿಜಿಟಲ್ ಪಾವತಿ ಸಾಕಷ್ಟು ಟ್ರೆಂಡ್ ಆಗಿತ್ತಾದರೂ, ಇತ್ತೀಚಿನ ದಿನಗಳಲ್ಲಿ ವೈರಸ್ ಹರಡುವಿಕೆ ಕಾರಣದಿಂದ ಜನರು ನಗದು ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಹಜವಾಗಿ ಡಿಜಿಟಲ್ ಪಾವತಿಗೆ ಉತ್ತೇಜನ ಸಿಕ್ಕಿದೆ.
ಇದಕ್ಕೆ ಪೂರಕವಾಗಿ ಡಿಜಿಟಲ್ ಪಾವತಿಯ ಎಲ್ಲ ಮಾದರಿಗಳನ್ನು ಹೊಟೇಲುಗಳೂ ಅಳವಡಿಸಿಕೊಂಡಿದ್ದು, ಆ್ಯಪ್ ಮೂಲಕ ಆರ್ಡರ್ ಪಡೆದುಕೊಳ್ಳುವುದು, ವಾಯ್ಸ ಮೆಸೇಜ್‌ಗಳಿಂದಲೂ ಆರ್ಡರ್ ಪಡೆಯುವುದು, ಡಿಜಿಟಲ್ ಪಾವತಿ, ಡೆಲಿವರಿ ವ್ಯವಸ್ಥೆಗಳನ್ನು ಮಾಡುತ್ತಿವೆ. ಗ್ರಾಹಕರು ವೈರಸ್‌ನ ಭೀತಿಯಿಂದಾಗಿ ಏನನ್ನೂ ಮುಟ್ಟದಿದ್ದರೂ ಮೊಬೈಲ್ ಒಂದನ್ನು ಮುಟ್ಟಿದರೆ ಸಾಕು. ಎಲ್ಲ ರೀತಿಯ ಸೇವೆಗಳು ಅವರಿಗೆ ದೊರಕುತ್ತವೆ. ಹೊಸ ಸಂದರ್ಭದಲ್ಲಿ ಆ್ಯಪ್‌ನಲ್ಲಿ ಆರ್ಡರ್ ವ್ಯವಸ್ಥೆಯೊಂದಿಗೆ ವಾಯ್ಸ ಆರ್ಡರ್ ವ್ಯವಸ್ಥೆಯನ್ನೂ ಶುರುಮಾಡಲಾಗಿದೆ. ಅಲ್ಲದೆ ಗ್ರಾಹಕರು ಹೊಟೇಲ್‌ಗೆ ಭೇಟಿ ನೀಡುತ್ತಿದ್ದರೆ ಅದಕ್ಕೆ ಪೂರಕ ವ್ಯವಸ್ಥೆ, ಆಹಾರಗಳನ್ನು ತಯಾರು ಮಾಡಲೂ ಅವಕಾಶವಿದೆ, ಇದು ಅಂಗಡಿಗಳಲ್ಲೂ ಬಳಕೆ ಮಾಡುವಂತೆ ಇದೆ.
ಇದೇ ವೇಳೆ ಹೊಟೇಲ್‌ಗಳು ಮೊಬೈಲ್ ಆರ್ಡರ್‌ಗಳನ್ನು ಪಡೆಯುವ ಮತ್ತು ಆರ್ಡರ್ ಡೆಲಿವರಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಾಗಿ ಹೇಳಿವೆ. ರೆಸ್ಟೋರೆಂಟ್‌ಗಳು, ಇತರ ಆ್ಯಪ್‌ಗ್ಳ ಮೂಲಕ ಗ್ರಾಹಕರು ಆರ್ಡರ್ ಮಾಡುವಾಗ, ಆದಷ್ಟು ಎಚ್ಚರಿಕೆಯಿಂದ ಇರಬೇಕು. ವಿಳಾಸಗಳನ್ನು ನೀಡುವುದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.