ಎಲ್ಲ ದೇಶಗಳಲ್ಲೂ ಕೋವಿಡ್ : ಸೋಂಕು ಹೆಚ್ಚಳ: ಆತಂಕ
Team Udayavani, Jun 15, 2020, 12:00 PM IST
ಇಸ್ತಾಂಬುಲ್: ನಗರದ ಬೀದಿಯೊಂದರಲ್ಲಿ ಆಹಾರದ ಅಂಗಡಿ ಎದುರು ಸಾಮಾಜಿಕ ಅಂತರಕ್ಕೆ ಗುರುತು ಹಾಕಿ, ಗ್ರಾಹಕರ ನಿರೀಕ್ಷೆಯಲ್ಲಿರುವ ಅಂಗಡಿಯಾತ.
ವಾಷಿಂಗ್ಟನ್: ಎಲ್ಲ ದೇಶಗಳಲ್ಲೂ ಕೋವಿಡ್ ಸೋಂಕು ಹೆಚ್ಚುತ್ತಿದ್ದು ಅದರಲ್ಲೂ ವಿಶ್ವದ ದಕ್ಷಿಣ ಭಾಗದಲ್ಲಿ ಏರಿಕೆಯಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಜತೆಗೆ ಜಗತ್ತಿಗೇ ಬಾಧಿಸಿದ ಈ ಸಮಸ್ಯೆಯನ್ನು ಪರಿಹರಿಸುವತ್ತ ಮುಂದಿನ 100 ವರ್ಷಗಳವರೆಗೆ ಎಲ್ಲ ರಾಷ್ಟ್ರಗಳೂ ಕೈ ಜೋಡಿಸಿ ನಿಲ್ಲಬೇಕಿದೆ ಎಂದು ಹೇಳಿದೆ.
ಹೆಚ್ಚಿನ ಎಲ್ಲ ದೇಶಗಳು ಈಗ ಮೊದಲನೇ ಹಂತದ ಕೋವಿಡ್ ಹಾವಳಿಯನ್ನು ಎದುರಿಸಿವೆ. ಕೆಲವೊಂದು ದೇಶಗಳು ಅದರಲ್ಲೂ ಯುರೋಪ್, ಆಗ್ನೇಯ ಏಷ್ಯಾ, ಉತ್ತರ ಅಮೆರಿಕದಲ್ಲಿ ಕೋವಿಡ್ ಸೋಂಕು ವಿಪರೀತ ಪ್ರಮಾಣದಲ್ಲಿದೆ ಎಂದು ಡಬ್ಲ್ಯೂಎಚ್‌ಒದ ತುರ್ತು ಆರೋಗ್ಯ ಯೋಜನೆಗಳ ಕಾರ್ಯಕಾರಿ ನಿರ್ದೇಶಕರಾದ ಡಾ| ಮೈಖೇಲ್ ರ್ಯಾನ್ ಹೆಳಿದ್ದಾರೆ.
ಕೆಲವು ದೇಶಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಇದರೊಂದಿಗೆ ಶಂಕಿತರನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸುವುದು, ಶಂಕಿತರು ಮತ್ತು ಸೋಂಕಿತರನ್ನು ಪ್ರತ್ಯೇಕವಾಗಿರಿಸುವುದು, ಸಂಪರ್ಕ ಹೊಂದಿದವರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ನಲ್ಲಿಡುವುದು ಇತ್ಯಾದಿ ಕ್ರಮಗಳನ್ನು ಸರಿಯಾಗಿ ಮಾಡದೇ ಇದ್ದರೆ 2ನೇ ಬಾರಿಗೆ ದೇಶಗಳು ಕೋವಿಡ್ ಹಾವಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದಾಗಿ ಮತ್ತು ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳದೇ ಇರುವುದರಿಂದ ಸೋಂಕು ಪ್ರಮಾಣ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾ ನವೂ ಇಲ್ಲ ಎಂದು ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರುವಲ್ಲಿವರೆಗೆ ಪ್ರತಿಯೊಬ್ಬರೂ ಮನೆಯಲ್ಲೇ ಇರುವುದು ಮತ್ತು ಆದಷ್ಟೂ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಮುಖ್ಯ ಎಂದು ರ್ಯಾನ್ ಹೇಳಿದ್ದಾರೆ. ಅತಿ ಪ್ರಬಲವಾದ ವೈದ್ಯಕೀಯ ವ್ಯವಸ್ಥೆಯಿದ್ದರೂ ಕೋವಿಡ್ ಅನ್ನು ನಿಭಾಯಿಸಲು ಬೇಕಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ದೇಶಗಳು ಹಮ್ಮಿಕೊಳ್ಳಬೇಕಾ ಗುತ್ತದೆ. ಕ್ಲಸ್ಟರ್‌ಗಳನ್ನು ಮಾಡಿ ಇವುಗಳನ್ನು ನಿಭಾಯಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.