ಸಿಂಗಾಪುರದಲ್ಲಿ ಕೋವಿಡ್ ಜತೆಗೆ ಡೆಂಗ್ಯೂಕಾಟ
Team Udayavani, Jul 4, 2020, 10:30 AM IST
ಮನಿಲಾ: ಬಸ್‌ವೊಂದರಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಕವರ್‌ಗಳ ಸುರಕ್ಷತೆಯೊಂದಿಗೆ ಪ್ರಯಾಣಿಸಿದರು.
ಸಿಂಗಾಪುರ: ಏರುತ್ತಿರುವ ಕೋವಿಡ್ ಸೋಂಕು ಪ್ರಮಾಣದಿಂದಾಗಿ ಸಿಂಗಾಪುರ ಏದುಸಿರು ಬಿಡುತ್ತಿರುವಂತೆಯೇ ಈಗ ಅಲ್ಲಿ ಡೆಂಗ್ಯೂ ಜ್ವರದ ಸಮಸ್ಯೆ ಉಲ್ಬಣಗೊಂಡಿದೆ. ಈ ಬಾರಿ ಸುಮಾರು 14 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದ್ದು, ಕೋವಿಡ್ ಸೋಂಕಿತರ ಜತೆಗೆ ಅವರಿಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಸಮಸ್ಯೆ ಸೃಷ್ಟಿಸಿದೆ. 2013ರಲ್ಲಿ ಇಲ್ಲಿ ಅತ್ಯಧಿಕ 22170 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದವು. ಇದು ಸಿಂಗಾಪುರ ಇತಿಹಾಸದಲ್ಲೇ ಅತ್ಯಧಿಕ ಪ್ರಕರಣಗಳಾಗಿತ್ತು.
ಸಿಂಗಾಪುರದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಲು ಅಲ್ಲಿ ಲಾಕ್‌ಡೌನ್ ವಿಧಿಸಿದ್ದೂ ಒಂದು ಕಾರಣವಾಗಿರಬಹುದು ಎಂಬ ಅಭಿಪ್ರಾಯ ತಜ್ಞರದ್ದು. ಹೆಚ್ಚಿನವರು ಮನೆಯಲ್ಲೇ ಇರುವುದರಿಂದಾಗಿ ಸೊಳ್ಳೆ ಕಚ್ಚಿ ಸಮಸ್ಯೆಯಾಗಿರಬಹುದು ಎನ್ನಲಾಗಿದೆ. ಎಪ್ರಿಲ್ ತಿಂಗಳಲ್ಲಿ ವಿದೇಶಿ ಕಾರ್ಮಿಕರಿರುವ ವಸತಿ ನಿಲಯಗಳಲ್ಲಿ ಕೋವಿಡ್ ಸೋಂಕು ಹರಡಿದ್ದು, ಇನ್ನೂ ಹರಡುತ್ತಿದೆ. ಇದರಿಂದ ನೂರರ ಒಳಗಿದ್ದ ದೇಶದ ಪ್ರಕರಣಗಳು ಸಾವಿರಕ್ಕೂ ಹೆಚ್ಚಾಗಿವೆ. ಇದೀಗ ಒಟ್ಟು 44,479 ಕೋವಿಡ್ ಪ್ರಕರಣಗಳು ಅಲ್ಲಿ ವರದಿಯಾಗಿವೆ. ಶುಕ್ರವಾರ ಒಟ್ಟು 169 ಕೇಸುಗಳು ಪತ್ತೆಯಾಗಿವೆ. ಹೊಸದಾಗಿ ಸೋಂಕು ಬಾಧೆಗೊಳಗಾದವರು ವಿದೇಶಿ ಕಾರ್ಮಿಕರಾಗಿದ್ದಾರೆ. 11 ಪ್ರಕರಣಗಳು ಸಮುದಾಯದಲ್ಲಿ ಹಬ್ಬಿದ ಪ್ರಕರಣಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.