ತಪ್ಪು ಫಲಿತಾಂಶ! 2 ದಿನ ರಾಪಿಡ್ ಟೆಸ್ಟ್ ಕಿಟ್ಸ್ ಬಳಸಬೇಡಿ: ಎಲ್ಲಾ ರಾಜ್ಯಗಳಿಗೆ ICMR ಮನವಿ
ಕೋವಿಡ್ 19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದರು. ಆದರೆ ವೈದ್ಯರಿಗೆ ಫಲಿತಾಂಶ ನೋಡಿ ಆಘಾತ ಆಗಿತ್ತು.
Team Udayavani, Apr 21, 2020, 6:00 PM IST
Representative Image T
ನವದೆಹಲಿ: ದೇಶದಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕು ಹರಡುವಿಕೆ ಕೆಲವೆಡೆ ಹೆಚ್ಚಳವಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮುಂದುವರಿಸಲಾಗಿದೆ. ಏತನ್ಮಧ್ಯೆ 2 ದಿನಗಳ ಕಾಲ ಎಲ್ಲಾ ರಾಜ್ಯಗಳು ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ (RTK)ಅನ್ನು ಬಳಸದಿರುವಂತೆ ಸೂಚನೆ ರವಾನಿಸಲಾಗಿದೆ. ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಈ ಆದೇಶವನ್ನು ಹೊರಡಿಸಿದೆ ಎಂದು ವರದಿ ತಿಳಿಸಿದೆ.
ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಇರುವ ಪ್ರತಿಯೊಬ್ಬ ನಿವಾಸಿಯನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಐದು ಲಕ್ಷ ರಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ವಿತರಿಸಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಸಮಪರ್ಕವಾದ ಪರೀಕ್ಷಾ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ರಾಪಿಡ್ ಟೆಸ್ಟ್ ಕಿಟ್ಸ್ ಹಂಚಲಾಗಿತ್ತು.
ನಿಖರ ಫಲಿತಾಂಶ ನೀಡದ ರಾಪಿಡ್ ಟೆಸ್ಟ್ ಕಿಟ್ಟ್!
ರಾಜಸ್ಥಾನ ಸರ್ಕಾರ ರಾಪಿಡ್ ಟೆಸ್ಟ್ ಕಿಸ್ಟ್ ಬಳಕೆ ನಿಲ್ಲಿಸಿದೆ. ಕಾರಣ ರಾಪಿಡ್ ಟೆಸ್ಟ್ ಕಿಟ್ಸ್ ಫಲಿತಾಂಶದ ನಿಖರತೆ ಕೇವಲ ಶೇ.5ರಷ್ಟು ಎಂದು ತಿಳಿಸಿದೆ. ರಾಪಿಡ್ ಟೆಸ್ಟ್ ಕಿಟ್ಸ್ ಬಳಸಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ(ಎಸ್ ಎಂಎಸ್) ವೈದ್ಯರು ಕೋವಿಡ್ 19 ರೋಗಿಗಳನ್ನು ಪರೀಕ್ಷಿಸಿದಾಗ ಶೇ.95ರಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ನೀಡಿತ್ತು!
ಜೈಪುರದ ಎಸ್ ಎಂಎಸ್ ಆಸ್ಪತ್ರೆಯ ಮೈಕ್ರೊ ಬಯೋಲಜಿ ಮತ್ತು ಮೆಡಿಸಿನ್ ವಿಭಾಗ ಈ ಕಿಟ್ಸ್ ಬಳಸಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದರು. ಆದರೆ ವೈದ್ಯರಿಗೆ ಫಲಿತಾಂಶ ನೋಡಿ ಆಘಾತ ಆಗಿತ್ತು. ಅದಕ್ಕೆ ಕಾರಣ ಕೇವಲ ಐದು ಮಂದಿಗೆ ಮಾತ್ರ ಕೋವಿಡ್ 19 ಸೋಂಕು ಪಾಸಿಟಿವ್ ಎಂದು ಫಲಿತಾಂಶ ನೀಡಿ, ಉಳಿದ 95 ಜನರಿಗೆ ನೆಗೆಟಿವ್ ಎಂದು ಫಲಿತಾಂಶ ನೀಡಿತ್ತು!
ಹೀಗಾಗಿ ರಾಪಿಡ್ ಟೆಸ್ಟ್ ಕಿಟ್ಸ್ ನೀಡುವ ಫಲಿತಾಂಶ ನೈಜತೆಯಿಂದ ಕೂಡಿಲ್ಲ, ಅದರ ನಿಖರತೆಯೂ ಸಮರ್ಪಕವಾಗಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ. ನಾವು ಈ ಫಲಿತಾಂಶದ ವರದಿಯನ್ನು ಐಸಿಎಂಆರ್ ಗೆ ಕಳುಹಿಸಿಕೊಟ್ಟಿದ್ದೇವೆ. ಆದರೆ ಐಸಿಎಂಆರ್ ಯಾವುದೇ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ನಾವು ಎಲ್ಲಾ ಕಿಟ್ಸ್ ಗಳನ್ನು ವಾಪಸ್ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಎಲ್ಲಾ ರಾಜ್ಯಗಳು ರಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ಬಳಸಬೇಡಿ. ಈ ಬಗ್ಗೆ ನಾವು ವಿಸ್ತೃತವಾದ ವರದಿ ನೀಡುತ್ತೇವೆ. ಒಂದು ವೇಳೆ ರಾಪಿಡ್ ಟೆಸ್ಟ್ ಕಿಟ್ಸ್ ಗಳಲ್ಲಿ ದೋಷ ಇದೆ ಎಂದು ಪತ್ತೆಯಾದರೆ, ನಾವು ಕಂಪನಿ ಬಳಿ ಎಲ್ಲಾ ಕಿಟ್ಸ್ ಗಳನ್ನು ಬದಲಿಸಿ ನೀಡಲು ಕೇಳಿಕೊಳ್ಳುತ್ತೇವೆ ಎಂದು ಐಸಿಎಂಆರ್ ಎಪಿಡೋಮಿಯೋಲಜಿ ಮುಖ್ಯಸ್ಥ ಡಾ.ಗಂಗಾಖೆಡ್ಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.