ದುಬಾೖ: ಕೋವಿಡ್-19 ಪರಿಣಾಮದಿಂದ 2 ತಿಂಗಳಲ್ಲಿ ಜೀರೋ ಕ್ರೈಮ್
ದ. ಕ.ಜಿಲ್ಲೆ, ಉಡುಪಿಯಲ್ಲೂ ಪ್ರಕರಣಗಳ ಸಂಖ್ಯೆ ಇಳಿಮುಖ
Team Udayavani, Apr 6, 2020, 2:45 PM IST
ದುಬಾೖ: ಕೋವಿಡ್-19 ಬಂದ ಬಳಿಕ ವಾಹನಗಳು ಓಡಾಡುವುದು ನಿಂತಿತು. ಪರಿಣಾಮವಾಗಿ ವಾಯು ಮಾಲಿನ್ಯವೂ ಕಡಿಮೆಯಾಯಿತು. ಇಂಧನ ಬಳಕೆ ಕಡಿಮೆಯಾಗಿ ದರಗಳೂ ಕಡಿಮೆಯಾಗುವ ಸಾಧ್ಯತೆ ಇದೆ. ಇದೀಗ ಜನ ಸಂಚಾರ ಸ್ತಬ್ಧವಾದ ಪರಿಣಾಮ ಚಟುವಟಿಕೆಗಳು ಇಲ್ಲ. ಒಟ್ಟಿನಲ್ಲಿ ದುಬಾೖಯಲ್ಲಿ 2 ತಿಂಗಳಿನಿಂದ ಒಂದೇ ಒಂದು ಅಪರಾಧ ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಕೊಲೆಗಳು ಸೇರಿದಂತೆ ಯಾವುದೇ ಕಳ್ಳತನಗಳು, ದರೋಡೆಗಳು ಅಥವಾ ಹಿಂಸಾಚಾರಗಳು ನಡೆದಿಲ್ಲ. ಕೋವಿಡ್ 19ರ ಬಿಕ್ಕಟ್ಟನ್ನು ಎದುರಿಸುವಾಗ ಜನರು ತಮ್ಮ ಸುರಕ್ಷತೆ ಮತ್ತು ಅವರ ಪ್ರೀತಿಪಾತ್ರರು ಮತ್ತು ಕುಟುಂಬದವರಿಗೆ ಆದ್ಯತೆ ನೀಡುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಕಿಕ್ಕಿರಿದ ಪ್ರದೇಶಗಳಲ್ಲಿ ಹಣವನ್ನು ಕದಿಯುವುದು ಅಥವಾ ಬ್ಯಾಂಕ್ ಅಥವಾ ಅಂಗಡಿಯನ್ನು ದೋಚು ವಂತಹ ಅನೇಕ ಅಪರಾಧಗಳು ಅಥವಾ ದರೋಡೆಗಳು ಸಾಮಾನ್ಯವಾಗಿ ನಡೆಯುತ್ತವೆ. ಈ ಎರಡು ತಿಂಗಳಲ್ಲಿ ಅಂಥ ಪ್ರಕರಣಗಳು ನಡೆದಿಲ್ಲ.
ಸಾಮಾಜಿಕ ಅಂತರವೂ ವಂಚಕರಿಗೆ ಸಮಸ್ಯೆಯಾಗಿದೆ. ಮನೆಗಳು ಖಾಲಿಯಾಗಿರುವಾಗ ಕಳವು ಸಂಬಂಧಿ ಅಪರಾಧಗಳು ನಡೆಯುವುದು ಸಾಮಾನ್ಯ. ಆದರೆ ಈಗ ಜನರು ತಮ್ಮ ಮನೆಗಳಲ್ಲಿ ಉಳಿದುಕೊಂಡಿರುವುದರಿಂದ ಕಳ್ಳರೂ ಲಾಕ್‌ಡೌನ್ ಬಿಸಿ ಅನುಭವಿಸುವಂತಾಗಿದೆ.
99% ಅಕ್ರಮ ಡ್ರಗ್ ಮಾರುಕಟ್ಟೆ ಮತ್ತು ಕಳ್ಳಸಾಗಣೆ ಅಪರಾಧಗಳು ಕಣ್ಮರೆಯಾಗಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಿರ್ಬಂಧಿತ ಚಲನೆ ಮತ್ತು ಕಣ್ಗಾವಲು ಅಪರಾಧಿಗಳಿಗೆ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಅಡ್ಡಿ ಯಾಗಿದೆ. ಈ ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಸರಕಾರ ಕೈಗೊಂಡ ಕಾರ್ಯಕ್ರಮಗಳಿಗೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುತ್ತಿದೆ.
ನಮ್ಮಲ್ಲೂ ಅಷ್ಟೇ
ದ.ಕ. ಜಿಲ್ಲೆ, ಉಡುಪಿಯಲ್ಲೂ ಅಪರಾಧ ಪ್ರಕರಣ ಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಿಂದೆ ಪೊಲೀ ಸರನ್ನು ಬೀಟ್ ಮತ್ತಿತರ ಉದ್ದೇಶಕ್ಕಾಗಿ ಬಳ ಸಲಾ ಗುತ್ತಿತ್ತು. ಪ್ರಸ್ತುತ ಜನರು ಮನೆಯಲ್ಲೇ ಇರು ವುದರಿಂದ ಬೀಟ್ ಸಮಸ್ಯೆ ಇಲ್ಲ. ಅದರೊಂದಿಗೆ ಎಲ್ಲ ಚೆಕ್ ಪೋಸ್ಟ್‌ಗಳಲ್ಲೂ ಬಂದೋಬಸ್ತ್ ಬಿಗಿಗೊಳಿಸಿರುವುದರಿಂದ ಪೊಲೀಸರ ಕಣ್ಗಾವಲು ಹೆಚ್ಚಿದೆ. ಇದೂ ಅಪರಾಧ ಸಂಖ್ಯೆ ಇಳಿಮುಖವಾಗಲು ಕಾರಣ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
San Francisco; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ
‘Miss Netherlands’ ಇನ್ನು ಮುಂದೆ ನಡೆಯುವುದಿಲ್ಲ…: ಸೌಂದರ್ಯಕ್ಕೆ ಮಹತ್ವ ಬೇಡ!
South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!
Football ಮಾಜಿ ತಾರೆ ಮಿಖಾಯಿಲ್ ಈಗ ಜಾರ್ಜಿಯಾ ಅಧ್ಯಕ್ಷ
MUST WATCH
ಹೊಸ ಸೇರ್ಪಡೆ
3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ
Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಆದೇಶ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.