ಕೋವಿಡ್ ವೈರಸ್ ಜಾಗೃತಿ ವಿಡಿಯೋ ಸಂದೇಶ ನೀಡಿದ್ದ ಬಸ್ ಚಾಲಕನೇ ಸೋಂಕಿಗೆ ಬಲಿ!
Team Udayavani, Apr 6, 2020, 6:07 AM IST
ವಾಷಿಂಗ್ಟನ್: ಕೋವಿಡ್ 19 ವೈರಸ್ ಬೆಂಬಿಡದಂತೆ ಕಾಡುತ್ತಿದ್ದರೂ ಅಮೆರಿಕದಲ್ಲಿ ಇತ್ತೀಚೆಗೆ ಬಸ್‌ನಲ್ಲಿ ಮಹಿಳೆಯೊಬ್ಬಳು ಜಾಗೃತಿ ವಹಿಸದೆ ಹಲವಾರು ಬಾರಿ ಕೆಮ್ಮಿದ್ದಳು. ಇದರಿಂದ ಸಾಕಷ್ಟು ಇರುಸು ಮುರುಸುಗೊಂಡ ಬಸ್ ಚಾಲಕ ಜೋಸನ್ ಹರ್ಗ್ರೋವ್ (50) ಮಾರ್ಚ್ 24ರಂದು ಮಹಿಳೆಯು ಬಹಿರಂಗವಾಗಿ ಕೆಮ್ಮಿದ್ದನ್ನು ಉಲ್ಲೇಖೀಸಿ, ಕೋವಿಡ್ ಹಿನ್ನೆಲೆ ಬಸ್‌ನಲ್ಲಿ ಸಂಚರಿಸುವಾಗ ಪ್ರಯಾಣಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವೀಡಿಯೋ ಮಾಡಿ ಬಿಡುಗಡೆ ಮಾಡಿದ್ದರು.
ಇದಾದ ನಾಲ್ಕೇ ದಿನದಲ್ಲಿ ಜೋಸನ್‌ಗೆ ಸೋಂಕು ತಗಲಿತು. ಈಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಈ ಹಿಂದೆ ಬಿಡುಗಡೆ ಮಾಡಿದ್ದ ವೀಡಿಯೋ ಇದೀಗ ವೈರಲ್ ಆಗಿದ್ದು, ಇದರಲ್ಲಿರುವ ಕೋವಿಡ್ 19 ವೈರಸ್ ಸೋಂಕು ತಡೆ ಸಂದೇಶ ಎಲ್ಲರ ಮನಕುಲುಕುತ್ತಿದೆ. ಅವರು ನೀಡಿದ ಸಂದೇಶ ಹಲವಾರು ಜೀವಗಳನ್ನು ಉಳಿಸಲು ನೆರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.