ಪ್ರವಾಸೋದ್ಯಮ ಚಿಗುರುವ ನಿರೀಕ್ಷೆ

Team Udayavani, Jun 17, 2020, 2:58 PM IST

ಪ್ರವಾಸೋದ್ಯಮ ಚಿಗುರುವ ನಿರೀಕ್ಷೆ

ಟರ್ಕಿಯಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು ಇಸ್ತಾಂಬುಲ್‌ ಮಾರುಕಟ್ಟೆಯೊಂದರ ದೃಶ್ಯ.

ಬರ್ಲಿನ್‌: ಮೂರು ತಿಂಗಳ ಬಳಿಕ ಐರೋಪ್ಯ ಒಕ್ಕೂಟದ ದೇಶಗಳ ಗಡಿಗಳು ತೆರೆದುಕೊಂಡರೂ ಅಲ್ಲಿನ ಪ್ರವಾಸೋದ್ಯಮ ಮತ್ತೆ ಹಾದಿಗೆ ಮರಳುವುದಕ್ಕೆ ಹಲವು ಸಮಯವೇ ಬೇಕಾಗಿದೆ. ಈ ವರ್ಷ ಯುರೋಪಿಯನ್ನರು ರಜೆ ಕಾಲದಲ್ಲಿ ಪ್ರವಾಸ ಮಾಡುತ್ತಾರಾ? ಅಮೆರಿಕನ್ನರು ಯುರೋಪ್‌ಗೆ ಬರುತ್ತಾರಾ? ಏಷ್ಯನ್ನರು ಬರಬಹುದಾ ಎಂಬ ವಿಚಾರ ಈಗ ಅಲ್ಲಿನ ಪ್ರವಾಸೋದ್ಯಮಿಗಳ ತಲೆಯಲ್ಲಿ ಕೊರೆಯುತ್ತಿದೆ.

ಕೋವಿಡ್‌ನಿಂದಾಗಿ ಗಡಿಯಲ್ಲಿ ಸಂಚಾರಕ್ಕೆ ನಿಯಂತ್ರಣ ಹೇರಲಾಗಿತ್ತು. ಈಗ ಅದನ್ನು ತೆರವುಗೊಳಿಸಲಾಗಿದ್ದು, ಯಾವುದೇ ದಾಖಲೆ ಪರೀಕ್ಷೆ ಇತ್ಯಾದಿಗಳನ್ನು ನಡೆಸುತ್ತಿಲ್ಲ.  ಕೋವಿಡ್‌ನಿಂದಾಗಿ ಐರೋಪ್ಯ ಒಕ್ಕೂಟದ ಎಲ್ಲ ದೇಶಗಳು ತೀವ್ರ ಆರ್ಥಿಕ ಹಾನಿಗೆ ಒಳಗಾಗಿದ್ದು, ತತ್‌ಕ್ಷಣ ಚೇತರಿಕೆಗೆ ಎದುರು ನೋಡುತ್ತಿವೆ. ಇದಕ್ಕಾಗಿ ಇನ್ನು ಶುರುವಾಗುವ ರಜಾ ಸಮಯ ಪ್ರಶಸ್ತವಾಗಿದ್ದು, ಪ್ರವಾಸೋದ್ಯಮದ ಮೂಲಕ ತುಸು ಚೇತರಿಕೆಯಾಗುವ ಆಶಾವಾದ ಹೊಂದಲಾಗಿದೆ.
ಇತ್ತ ಗ್ರೀಸ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಆಗಮನಕ್ಕೆ ಹಸಿರು ನಿಶಾನೆ ತೋರಲಾಗಿದೆ. ಪ್ರವಾಸಿಗರಿಗೆ ವೈರಸ್‌ ಟೆಸ್ಟ್‌ ಕಡ್ಡಾಯ ಎಂದು ಅದು ಹೇಳಿದೆ. ಸ್ಪೇನ್‌ ಕೂಡ ಜರ್ಮನ್‌ ಪ್ರವಾಸಿಗರನ್ನು ತನ್ನ ದ್ವೀಪಗಳಿಗೆ ಬರಮಾಡಿಕೊಂಡಿದೆ.

ಡೆನ್ಮಾರ್ಕ್‌ ಕೂಡ ಜರ್ಮನಿ ಪ್ರವಾಸಿಗರಿಗೆ ಮುಕ್ತವಾಗಿದ್ದು ತನ್ನ ಗಡಿಯನ್ನು ತೆರೆದಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಗಡಿಯಲ್ಲಿ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಕ್ಯೂ ನಿಂತಿದ್ದವು. ಆದರೆ ಡೆನ್ಮಾರ್ಕ್‌ ಗೆ ಹೋಗುವ ಪ್ರವಾಸಿಗರು ಕನಿಷ್ಠ 6 ದಿನ ಮುಂಗಡ ಹೊಟೇಲ್‌ ಬುಕ್ಕಿಂಗ್‌ ಮಾಡಿರುವುದು ಕಡ್ಡಾಯವಾಗಿದೆ. ಬ್ರಿಟನ್‌ ಐರೋಪ್ಯ ಒಕ್ಕೂಟದವರನ್ನು ದೇಶಕ್ಕೆ ಬರಲು ಅನುಮತಿಸಿದ್ದರೂ ಬಂದವರು 14 ದಿನ ಕ್ವಾರಂಟೈನ್‌ಗೆ ಒಳಪಡಬೇಕಾದ್ದು ಕಡ್ಡಾಯ ಎಂದು ಹೇಳಿದೆ. ಇತ್ತ ಫ್ರಾನ್ಸ್‌ ಕೂಡ ಗಡಿಯನ್ನು ತೆರೆದುಕೊಂಡಿದ್ದು, ಅಲ್ಲಿಗೆ ಹೋದವರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯವಾಗಿದೆ. ಡಚ್‌ ಸರಕಾರವೂ ತನ್ನ ಪ್ರಜೆಗಳು ಯುರೋಪಿನಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು ಎಂದು ಹೇಳಿದ್ದರೂ, ತೀವ್ರ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಆರ್ಥಿಕತೆಯನ್ನು ಮೇಲೆತ್ತುವ ದೃಷ್ಟಿಯಿಂದ ಈ ಮೊದಲು ಐರೋಪ್ಯ ಒಕ್ಕೂಟ, ದೇಶಗಳ ಮಧ್ಯೆ ಗಡಿಯನ್ನು ತೆರೆಯಲು ಪ್ರಯತ್ನಿಸುವುದಾಗಿ ಹೇಳಿತ್ತು. ಅದರಂತೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಭೆಯೂ ನಡೆದಿದ್ದು, ಗಡಿ ತೆರೆಯುವ ನಿರ್ಧಾರಕ್ಕೆ ಬರಲಾಗಿದೆ.

ಐರೋಪ್ಯ ಒಕ್ಕೂಟದಲ್ಲಿ ಈವರೆಗೆ 1.82 ಲಕ್ಷ ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, 20 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದಾರೆ. ಕೋವಿಡ್‌ ಸೋಂಕು ಇಟಲಿ, ಜರ್ಮನಿ, ಸ್ವೀಡನ್‌ಗಳಲ್ಲಿ ವ್ಯಾಪಕವಾಗಿದ್ದು ಇತರೆಡೆಗೆ ಹರಡುವ ಭೀತಿ ಇದ್ದರೂ ಸದ್ಯದ ಕ್ರಮದಲ್ಲಿ ಗಡಿಯನ್ನು ತೆರೆಯದೆ ಬೇರೆ ದಾರಿಯಿಲ್ಲ ಎಂದು ಐರೋಪ್ಯ ಒಕ್ಕೂಟ ತೆರೆಯಲು ತೀರ್ಮಾನಿಸಿದೆ. ಆದರೆ ವಿವಿಧ ದೇಶಗಳ ನಾಯಕರು ಜನರು ಎಚ್ಚರಿಕೆಯಿಂದ ಇರುವಂತೆಯೂ ಸೂಚನೆ ನೀಡಿದ್ದಾರೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.