ಜಗತ್ತಿನಾದ್ಯಂತ 1.11 ಕೋಟಿ ದಾಟಿದ ಸೋಂಕಿತರ ಸಂಖ್ಯೆ: 5.29 ಲಕ್ಷ ಮಂದಿ ಬಲಿ
Team Udayavani, Jul 4, 2020, 8:11 AM IST
ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್ -19 ಸೊಂಕಿತರ ಸಂಖ್ಯೆ 11 ಮಿಲಿಯನ್ ಗಡಿದಾಟಿದೆ ಎಂದು ಜಾನ್ ಹಾಫ್ ಕಿನ್ಸ್ ವರದಿ ತಿಳಿಸಿದೆ. ವೈರಾಣು ಆರ್ಭಟಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದ್ದು, ಏಳು ತಿಂಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ.
ಕೋವಿಡ್ 19 ವೈರಾಣು ಮೊದಲಿಗೆ ಪತ್ತೆಯಾದ ಚೀನಾದಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು ಹೊಸದಾಗಿ 3 ಪ್ರಕರಣಗಳು ಕಾಣಿಸಿಕೊಂಡಿದೆ.
ಜಗತ್ತಿನಲ್ಲಿ 1,11,90,678 ಜನರಿಗೆ ಸೋಂಕು ತಗುಲಿದ್ದು, ಸುಮಾರು 5,29,113 ಜನರು ಮೃತಪಟ್ಟಿದ್ದಾರೆ. ಅಮೆರಿಕಾವಂತೂ ವೈರಸ್ ಆರ್ಭಟಕ್ಕೆ ನಲುಗಿ ಹೋಗಿದ್ದು, ಇಲ್ಲಿ ಮಾರ್ಚ್ 11 ರಂದು ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅಮೆರಿಕಾ ಕೋವಿಡ್ ನ ಮೊದಲ ಹಾಟ್ ಸ್ಪಾಟ್ ಎನಿಸಿಕೊಂಡಿದ್ದು, 27 ಲಕ್ಷ ಮಂದಿ ವೈರಸ್ ಗೆ ತುತ್ತಾಗಿ, 1,29.275 ಜನರು ಬಲಿಯಾಗಿದ್ದಾರೆ.
ಬ್ರೆಜಿಲ್ ವಿಶ್ವದ ಎರಡನೇ ಕೋವಿಡ್ ಹಾಟ್ ಸ್ಪಾಟ್ ಆಗಿದ್ದು 14 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸುಮಾರು 61 ಸಾವಿರ ಜನರು ಈ ಮಾರಾಣಾಂತಿಕ ವೈರಸ್ ಗೆ ಪ್ರಾಣತ್ಯೆಜಿಸಿದ್ದಾರೆ.
ರಷ್ಯಾ ಮತ್ತು ಭಾರತದಲ್ಲೂ ಕೂಡ ಈ ಸೋಂಕಿನ ಪ್ರಮಾಣ ದ್ವಿಗುಣಗೊಳ್ಳುತ್ತಲೇ ಬರುತ್ತಿದೆ. ರಷ್ಯಾದಲ್ಲಿ 6.67 ಲಕ್ಷ, ಭಾರತದಲ್ಲಿ 6.47 ಲಕ್ಷ, ಸ್ಪೇನ್ ನಲ್ಲಿ 2,97 ಲಕ್ಷ, ಪೆರುವಿನಲ್ಲಿ 2.95 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.