ಅಫ್ಘಾನಿಸ್ಥಾನದಲ್ಲಿ ಕೋವಿಡ್‌ಗೆ ಬಲಿಯಾದವರೆಷ್ಟು?
Team Udayavani, May 22, 2020, 10:20 AM IST
ಕೋಲ್ಕತಾ: ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಪಾಲಿಸಲು ಮಾಡಿದ ವ್ಯವಸ್ಥೆ
ಕಾಬೂಲ್ : ಅಫ್ಘಾನಿಸ್ಥಾನದಲ್ಲಿ ನಿಜವಾಗಿಯೂ ಕೋವಿಡ್ ವೈರಸ್ ಹಾವಳಿ ತೀವ್ರವಾಗಿಲ್ಲವೆ? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಇಷ್ಟರ ತನಕ ಅಫ್ಘಾನಿಸ್ಥಾನದಲ್ಲಿ 7,600 ದೃಢೀಕೃತ ಸೋಂಕಿನ ಪ್ರಕರಣಗಳು ವರದಿಯಾಗಿವೆ ಮತ್ತು 200 ಮಂದಿ ಬಲಿಯಾಗಿದ್ದಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ ಎನ್ನುತ್ತಿದೆ ಒಂದು ವರದಿ.
ಈ ಗುಡ್ಡಗಾಡು ದೇಶದಲ್ಲಿ ಕೋವಿಡ್ ಪರೀಕ್ಷೆಯೇ ನಡೆಯುತ್ತಿಲ್ಲ. ಹೀಗಾಗಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿಲ್ಲ. ವೈದ್ಯಕೀಯ ಸೌಲಭ್ಯದಲ್ಲಿ ಈ ದೇಶ ಶತಮಾನದಷ್ಟು ಹಿಂದುಳಿದಿದ್ದು, ಈ ಪರಿಸ್ಥಿತಿಯಲ್ಲಿ ಕೋವಿಡ್‌ನಂಥ ವೈರಾಣುವಿನ ವಿರುದ್ಧ ಹೋರಾಡುವುದು ಕೈಲಾಗದ ಮಾತು ಎಂದು ಇಲ್ಲಿನ ಸರಕಾರವೇ ಒಪ್ಪಿಕೊಂಡಿದೆ.
ಅಫ್ಘಾನಿಸ್ಥಾನವೆಂದರೆ ಸಮಸ್ಯೆಗಳ ಗೂಡು. ಒಂದೆಡೆ ನಿರಂತರವಾದ ಉಗ್ರರ ಅಟ್ಟಹಾಸ, ಇನ್ನೊಂದೆಡೆ ಮುಗಿಯದ ಬಡತನ, ಮತ್ತೂಂದೆಡೆ ರಾಜಕೀಯ ಅನಿಶ್ಚಿತತೆ. ಹೀಗೆ ಸಮಸ್ಯೆಗಳನ್ನೇ ಹಾಸಿ ಹೊದ್ದು ಮಲಗಿರುವ ದೇಶದಲ್ಲಿ ಕೋವಿಡ್‌ನಂಥ ವೈರಾಣು ಬೆಳೆಯಲು ಉತ್ತಮ ಪರಿಸ್ಥಿತಿಯಿದೆ. ಬಲಿಷ್ಠ ದೇಶಗಳೇ ಕೋವಿಡ್ ಎದುರು ಸೋಲೊಪ್ಪಿ ಮಂಡಿಯೂರಿರುವಾಗ ಅಫ್ಘಾನಿಸ್ಥಾನದಲ್ಲಿ ಇಷ್ಟು ಕಡಿಮೆ ಪ್ರಕರಣಗಳು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಬಹುಕಾಲದಿಂದ ತಲೆ ತಿನ್ನುತ್ತಿತ್ತು.ಅದಕ್ಕೆ ಅಲ್ಲಿನ ಪರಿಸ್ಥಿತಿಯೇ ಉತ್ತರ ನೀಡುತ್ತಿದೆ.
ಕೊನೆಯಿಲ್ಲದ ಯುದ್ಧ ಈ ದೇಶವನ್ನು ಈಗಾಗಲೇ ಕಂಗಾಲು ಮಾಡಿದೆ. ಪ್ರತಿ ವಾರ ಉಗ್ರರಿಗೆ ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಈ ನಡುವೆ ಕೋವಿಡ್ ಸದ್ದಿಲ್ಲದೆ ಪ್ರಾಣ ಕಬಳಿಸುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ. ಜನಸಾಮಾನ್ಯರ ಮಾತು ಬಿಡಿ ವೈದ್ಯರೇ ಕೋವಿಡ್‌ಗೆ ಬಲಿಯಾಗಿದ್ದಾರೆ. ಡಾ| ಯೂಸುಫ್ ಖಾನ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಕೋವಿಡ್ ಕೆಲ ದಿನಗಳ ಹಿಂದೆ ಬಲಿತೆಗೆದುಕೊಂಡಿದೆ. ಇಂಥ ವರದಿಯಾಗದ ನೂರಾರು ಪ್ರಕರಣಗಳು ಅಪಾ^ನಿಸ್ಥಾನದಲ್ಲಿವೆ ಎನ್ನುತ್ತಿದೆ ಈ ವರದಿ.
ಡಾ| ಯೂಸುಫ್ ಅಸ್ವಸ್ಥರಾದಾಗ ಅವರ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಾಬೂಲ್‌ನಲ್ಲಿರುವ ಅಫ್ಘಾನ್- ಜಪಾನ್ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಫ್ಘಾನಿಸ್ಥಾನದಲ್ಲಿ ಕೋವಿಡ್ ಚಿಕಿತ್ಸೆಗೆ ಇರುವುದು ಇದೊಂದೇ ಆಸ್ಪತ್ರೆ. ಆದರೆ 10 ದಿನಗಳಾದರೂ ಇಲ್ಲಿಂದ ಪರೀಕ್ಷಾ ವರದಿ ಬರಲಿಲ್ಲ. ಈ ನಡುವೆ ಡಾ| ಯೂಸುಫ್ ಕೊನೆಯುಸಿರೆಳೆದರು ಹಾಗೂ ಅದರ ಬೆನ್ನಿಗೆ ಅವರ ಕುಟುಂಬದ ಸದಸ್ಯರು ಅಸುನೀಗಿದರು.
ಡಾ|ಯೂಸುಫ್ ಸಂಪರ್ಕದಲ್ಲಿದ್ದವರ ಹಾಗೂ ಕುಟುಂಬದ ಇತರ ಸದಸ್ಯರ ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದರೂ ಅದರ ವರದಿಯಿನ್ನೂ ಕೈಸೇರಿಲ್ಲ. ಟೆಸ್ಟಿಂಗ್ ಕಿಟ್ ಇಲ್ಲದೆಯೇ ಅಪಾ^ನಿಸ್ಥಾನದಲ್ಲಿ ಜನರು ಸಾಯುತ್ತಿದ್ದಾರೆ. ಕನಿಷ್ಠ ಯಾವ ಕಾರಣದಿಂದ ಸತ್ತಿದ್ದಾರೆ ಎಂದು ತಿಳಿಯಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ ದೇಶದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ.
ಬಡರಾಷ್ಟ್ರಗಳಿಗೆ ಟೆಸ್ಟಿಂಗ್ ಕಿಟ್‌ಗಳು ಸುಲಭವಾಗಿ ಸಿಗುತ್ತಿಲ್ಲ. ನಾವು ಹಣ ಕೊಟ್ಟರೂ ಕಿಟ್‌ಗಳ ಪೂರೈಕೆಯಾಗುತ್ತಿಲ್ಲ. ಎಲ್ಲ ಕಂಪೆನಿಗಳು ಬಲಾಡ್ಯ ದೇಶಗಳಿಗೆ ಆದ್ಯತೆ ನೀಡುತ್ತವೆ. ನಮ್ಮ ಆರೋಗ್ಯ ವಲಯ ಕೋವಿಡ್‌ನ ವಿರುದ್ಧ ಹೋರಾಡುವಷ್ಟು ಸಶಕ್ತವಾಗಿಲ್ಲ ಎನ್ನುತ್ತಾರೆ ಸಲೇಹ.
ಟೆಸ್ಟಿಂಗ್ ರದ್ದು
ಎರಡು ವಾರದ ಹಿಂದೆ ಅಪಾ^ನಿಸ್ಥಾನದ ಎಲ್ಲ ಪ್ರಯೋಗಾಲಯಗಳು ಮುಚ್ಚಿದ್ದವು. ಇದಕ್ಕೆ ಕಾರಣ ಕೋವಿಡ್ ವೈರಸ್ ಪರೀಕ್ಷೆ ಮಾಡಲು ಅಗತ್ಯವಿರುವ ರೀಏಜೆಂಟ್ ಮುಗಿದದ್ದು. ಕೊನೆಗೆ ಒಂದೆರಡು ದಿನ ಒದ್ದಾಡಿದ ಬಳಿಕ ಒಂದಷ್ಟು ರಿಏಜೆಂಟ್‌ಗಳನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಅನಂತರ ಪರೀಕ್ಷೆಗಳು ಪ್ರಾರಂಭವಾಯಿತು ಎಂದು ದಯನೀಯ ಪರಿಸ್ಥಿತಿಯನ್ನು ವಿವರಿಸುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಈ ಭಾಗದ ಮುಖ್ಯಸ್ಥ ಡಾ| ರಿಕ್ ಪೀಪೆರಾRನ್.
ಅಂತರ ಪಾಲನೆಯಿಲ್ಲ
ಪಾಕಿಸ್ಥಾನದಂತೆ ಅಫ್ಘಾನಿಸ್ಥಾನದಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಲಾಕ್‌ಡೌನ್ ಘೋಷಿಸಿದರೆ ಕೋವಿಡ್‌ಗಿಂತ ಹೆಚ್ಚು ಜನರನ್ನು ಹಸಿವು ಬಲಿತೆಗೆದುಕೊಳ್ಳುವ ಭಯ. ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‌ಗಳೆಲ್ಲ ಇಲ್ಲಿನ ಜನರಿಗೆ ಭಾರೀ ದುಬಾರಿ ವಸ್ತುಗಳು. ಹಬ್ಬದ ದಿನಗಳೂ ಆಗಿರುವುದರಿಂದ ಸಾಮೂಹಿಕ ಪ್ರಾರ್ಥನೆ, ಗುಂಪುಗೂಡಿ ಖರೀದಿಯೆಲ್ಲ ಎಗ್ಗಿಲ್ಲದೆ ನಡೆಯುತ್ತಿದೆ. ಹೆಸರಿಗೆ ಲಾಕ್‌ಡೌನ್ ಘೋಷಣೆಯಾಗಿದ್ದರೂ ಅದರ ಲಕ್ಷಣ ಎಲ್ಲೂ ಕಂಡು ಬರುತ್ತಿಲ್ಲ. ನಮ್ಮ ಸಂಸ್ಕೃತಿಗೆ ಇದೆಲ್ಲ ಒಪ್ಪುವುದಿಲ್ಲ ಎಂದು ಇಲ್ಲಿನ ನಾಯಕರೇ ಹೇಳುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸತತ ಪ್ರಯತ್ನದ ಫಲವಾಗಿ ಒಂದಿದ್ದ ಪ್ರಯೋಗಾಲಯದ ಸಂಖ್ಯೆ ಈಗ ಒಂಭತ್ತಕ್ಕೇರಿದೆ. ನೆರೆಯ ಇರಾನ್‌ನಲ್ಲಿ 1,22,000 ಸೋಂಕಿನ ಪ್ರಕರಣಗಳಿದ್ದವು ಮತ್ತು 7000ಕ್ಕೂಎ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಹೀಗಿರುವಾಗ ಅಫ್ಘಾನ್ ಹೇಗೆ ಸುರಕ್ಷಿತವಾಗಿ ಉಳಿಯಿತು ಎಂಬ ಪ್ರಶ್ನೆ ಕಾಡುತ್ತಿತ್ತು. ಅಲ್ಲಿನ ಪರಿಸ್ಥಿತಿ ಈ ಪ್ರಶ್ನೆಗೆ ಉತ್ತರ ಕೊಡುತ್ತದೆ. ಅಂದ ಹಾಗೇ ಅಫ್ಘಾನಿಸ್ಥಾನದಲ್ಲಿ ಕೋವಿಡ್ ಸೋಂಕಿತರೆಷ್ಟು ಮತ್ತು ಬಲಿಯಾದವರೆಷ್ಟು ಎಂಬ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಇಂಥ ಅಂಕಿಅಂಶ ಸರಕಾರದ ಬಳಿಯೂ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.