ಜಗತ್ತಿನ ಆಶಾಕಿರಣವಾದ ಎಝಡ್‌ಡಿ 1222 ಲಸಿಕೆ
Team Udayavani, Jul 22, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ನಿಗ್ರಹಕ್ಕೆ ಆಕ್ಸ್‌ಫರ್ಡ್‌ನ ಸಂಶೋಧಕರು ‘ಎಝಡ್‌ಡಿ 1222′ ಎಂಬ ಲಸಿಕೆಯನ್ನು ಸಿದ್ಧಪಡಿಸಿದ್ದಾರೆ.
ಅದು ಈವರೆಗೆ ನಡೆಸಲಾಗಿರುವ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ಮನುಷ್ಯರ ಮೇಲೆ ಉತ್ತಮ ಪರಿಣಾಮ ಬೀರಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕೋವಿಡ್ 19ನಿಂದ ತತ್ತರಿಸಿರುವ ವಿಶ್ವಕ್ಕೆ ಸಂಶೋಧಕರ ಈ ಮಾತುಗಳು ಆಶಾಕಿರಣವಾಗಿ ಗೋಚರಿಸಿವೆ.
ಲಸಿಕೆ ತಯಾರಿಕೆ ಹೇಗೆ?
ಸಾಮಾನ್ಯ ನೆಗಡಿಯನ್ನು ಉಂಟು ಮಾಡುವಂಥ ವೈರಾಣುಗಳನ್ನು ಜಿಂಪಾಜಿಗಳ ದೇಹಕ್ಕೆ ಸೇರಿಸಿ, ಅಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ಹಾಗೂ ಪ್ರೊಟೀನುಗಳನ್ನು ಪಡೆದು ಅದರಿಂದ ಈ ಲಸಿಕೆ ತಯಾರಿಸಲಾಗಿದೆ. ಹಾಗಾಗಿ ಇದಕ್ಕೆ ಚಿಂಪಾಝೀಸ್ ಅಡೆನೊವೈರಸ್ ವೈರಲ್ ವೆಕ್ಟರ್ (ಸಿಎಚ್‌ಎಡಿಒಎಕ್ಸ್‌ಎಲ್) ಎಂಬ ಹೆಸರಿಡಲಾಗಿದೆ.
ಪರೀಕ್ಷಾ ಹಂತ
ಪ್ರಾಥಮಿಕ ಪರೀಕ್ಷೆಗಳನ್ನು ದಾಟಿರುವ ಈ ಲಸಿಕೆಯನ್ನು ಈಗ ಅಂತಿಮ ಚರಣದ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. 18ರಿಂದ 55 ವರ್ಷದೊಳಗಿನ 1,077 ಆರೋಗ್ಯವಂತ ಯುವಕರನ್ನು ಆಯ್ದು ಅವರಿಗೆ ಈ ಲಸಿಕೆ ನೀಡಲಾಗಿತ್ತು.
ಎಪ್ರಿಲ್, ಮೇ ತಿಂಗಳಲ್ಲಿ ಯು.ಕೆ.ಯ ಐದು ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಒಮ್ಮೆ ಲಸಿಕೆ ನೀಡಿದರೆ ಅದರ ಪರಿಣಾಮವಾಗಿ 56 ದಿನ ಕಾಲ ಆ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಬಲಿಷ್ಟವಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಲಸಿಕೆ ದರ ಎಷ್ಟು?
ಈ ಲಸಿಕೆಯ ಒಂದು ಡೋಸ್‌ನ ಬೆಲೆ ಯೂರೋಪ್‌ನಲ್ಲಿ 2.5 ಯೂರೋ (ಅಂದಾಜು 213 ರೂ.) ಆಗಿರಲಿದೆ. ಇಟಲಿಯ ಆರೋಗ್ಯ ಇಲಾಖೆಯೇ ಇದನ್ನು ದೃಢಪಡಿಸಿದೆ. ಇದನ್ನು ತಯಾರಿಸಲು ಪರವಾನಿಗೆ ಪಡೆದಿರುವ ಆ್ಯಸ್ಟ್ರಾಜೆನಿಕಾ ಕಂಪನಿ ಕೂಡ, ವಿಶ್ವ ಎದುರಿಸುತ್ತಿರುವ ಇಂಥ ತುರ್ತು ಪರಿಸ್ಥಿತಿಯಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಬ್ರಿಟನ್‌ನಲ್ಲಿ ತಯಾರಾಗುವ ಈ ಲಸಿಕೆ ವಿಶ್ವದ ಇತರೆಡೆ ತಲುಪಿದಾಗ ಸಾಗಾಣಿಕೆ ವೆಚ್ಚವೂ ಸೇರಿ ಇದರ ಒಟ್ಟಾರೆ ವೆಚ್ಚ ಹೆಚ್ಚಾಗಲೂಬಹುದು.
ಪ್ರಯೋಗ ಎಲ್ಲೆಲ್ಲಿ ನಡೆಯುತ್ತಿದೆ?
ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲೂ ಅಲ್ಲಿನ ಸ್ಥಳೀಯರ ಮೇಲೆ ಈ ಪರೀಕ್ಷೆಗಳು ನಡೆಯುತ್ತಿವೆ. ಸದ್ಯದಲ್ಲೇ ಅಮೆರಿಕದಲ್ಲೂ ಪರೀಕ್ಷೆಗಳು ಆರಂಭವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.