![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 11, 2020, 5:57 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಯಾವ ವಸ್ತುವಿನಲ್ಲಿ ಕೋವಿಡ್ ಸೋಂಕು ಇದೆಯೋ ಯಾರಿಗೆ ಗೊತ್ತು? ಈ ತಲೆಬಿಸಿಯಿಂದ ಜನರನ್ನು ಮುಕ್ತಮಾಡಲು ಪಂಜಾಬ್‌ನ ರೋಪರ್‌ನ ಐಐಟಿ ವಸ್ತುಗಳನ್ನು ಸ್ಯಾನಿಟೈಸ್ ಮಾಡುವ ಸಾಧನವನ್ನು ಕಂಡು ಹಿಡಿದಿದೆ. ಇದರಲ್ಲಿ ದಿನಸಿ ಪದಾರ್ಥ, ಕರೆನ್ಸಿ ನೋಟು ಇತ್ಯಾದಿಗಳನ್ನು ಸ್ವಚ್ಛಗೊಳಿಸಬಹುದು.
ಸೊಂಡಿಲಿನಾಕಾರದ ಈ ಯಂತ್ರದಲ್ಲಿ ಅಲ್ಟ್ರಾ ವೈಲೆಟ್ ಕಿರಣಗಳು, ವಸ್ತುವಿನಲ್ಲಿನ ವೈರಾಣು, ಸೂಕ್ಷ್ಮಾಣುಗಳನ್ನು ನಿರ್ಮೂಲನೆಗೊಳಿಸುವ ಕೆಲಸ ಮಾಡುತ್ತದೆ. ಪ್ರತಿ ವಸ್ತು ಸ್ಯಾನಿಟೈಸ್‌ಗೊಳ್ಳಲು 30 ನಿಮಿಷ ತೆಗೆದುಕೊಳ್ಳುತ್ತದೆ. ಅನಂತರ ಆ ವಸ್ತು ತಣ್ಣಗಾಗಲು 10 ನಿಮಿಷ ಅವಶ್ಯ. ಕೇವಲ 500 ರೂ.ಗಳ ಕೈಗೆಟಕುವ ಬೆಲೆಯಲ್ಲಿ ಈ ಡಿವೈಸ್ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.
‘ಹೊರಗಿನಿಂದ ತರಕಾರಿಗಳನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸಬಹುದು. ಆದರೆ, ಕರೆನ್ಸಿ ನೋಟು, ಪರ್ಸು, ಕೆಲವು ದಿನಸಿ ಪದಾರ್ಥ, ಮೊಬೈಲ್ ಇತ್ಯಾದಿಗಳನ್ನು ನೀರಿನಿಂದ ತೊಳೆಯಲು ಸಾಧ್ಯವಿಲ್ಲ. ಈ ಸಾಧನದ ಮೂಲಕ ಅವೆಲ್ಲವನ್ನೂ ಸಾಧ್ಯವಾಗಿಸಬಹುದು’ ಎಂದು ಐಐಟಿ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.