ಕರ್ನಾಟಕದಲ್ಲಿ17ಕ್ಕೆ ಏರಿದ ಸಾವಿನ ಸಂಖ್ಯೆ ; ದೇಶದಲ್ಲಿ 20 ಸಾವಿರ ಸೋಂಕುಪೀಡಿತರು
Team Udayavani, Apr 22, 2020, 6:26 AM IST
ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅವಶ‍್ಯ ಮಾಹಿತಿ ಸಂಗ್ರಹಿಸುತ್ತಿರುವುದು.
ಬೆಂಗಳೂರು: ಕೋವಿಡ್ 19 ವೈರಸ್ ಮಾರಿಯಿಂದಾಗಿ ರಾಜ್ಯದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿಯ 80 ವರ್ಷದ ವೃದ್ಧ ಮೃತಪಟ್ಟವರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆಯೂ 17ಕ್ಕೆ ಏರಿದೆ.
ಮಂಗಳವಾರ ರಾಜ್ಯದಲ್ಲಿ ಮತ್ತೆ 10 ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 418ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಸೋಂಕಿನಿಂದ ಮೃತಪಟ್ಟ ವೃದ್ಧ ನಾಲ್ಕು ವರ್ಷಗಳಿಂದ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಎ.19ರಂದು ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಪಾಸಿಟಿವ್ ವರದಿ ಬಂದಿತ್ತು. ಆದರೆ ಇದಕ್ಕೂ ಮುನ್ನ ವೃದ್ಧ ಸೋಮವಾರ (ಎ. 20) ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
17 ಮಂದಿ ಗುಣಮುಖ
ರಾಜ್ಯದ ಸೊಂಕುಪೀಡಿತರ ಪೈಕಿ ಮಂಗಳ ವಾರ 17 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 129ಕ್ಕೆ ಏರಿದೆ.
ದೇಶದಲ್ಲಿ 20 ಸಾವಿರ ಸೋಂಕುಪೀಡಿತರು
ಮಂಗಳವಾರ ರಾತ್ರಿ ವೇಳೆಗೆ ದೇಶದಲ್ಲಿ 20 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರ ಒಂದರಲ್ಲಿಯೇ ಮಂಗಳವಾರ ಮತ್ತೆ 552 ಮಂದಿಗೆ ಸೋಂಕು ತಗುಲಿದೆ. ಈ ರಾಜ್ಯದಲ್ಲಿ ಪೀಡಿತರ ಸಂಖ್ಯೆ 5,200ನ್ನೂ ದಾಟಿ ಮುಂದುವರಿಯುತ್ತಿದೆ. ಮಂಗಳವಾರ 19 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 259ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ರವಿವಾರ 552 ಮತ್ತು ಸೋಮವಾರ 446 ಪ್ರಕರಣಗಳು ವರದಿಯಾಗಿದ್ದವು.
ದಿಲ್ಲಿಯಲ್ಲಿ ಲೋಕಸಭಾ ಕಾರ್ಯಾಲಯದ ಸ್ಪಚ್ಛತಾ ಸಿಬಂದಿಯೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ಮಂಗಳವಾರ ದೃಢಪಟ್ಟಿದೆ. ಸದ್ಯ ಅವರ ಕುಟುಂಬದ 11 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
55 ವರ್ಷ ಮೇಲ್ಪಟ್ಟವರಿಗೆ ಪರೀಕ್ಷೆ
ರಾಜ್ಯದಲ್ಲಿ ಅಸ್ತಮಾ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ 55 ವರ್ಷ ಮೇಲ್ಪಟ್ಟವರಿಗೆ ಶಂಕಿತ ಕೋವಿಡ್ 19 ವೈರಸ್ ಸಣ್ಣ ಪ್ರಮಾಣದ ಲಕ್ಷಣ ಕಂಡುಬಂದರೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹೇಳಿದ್ದಾರೆ.
ಇದುವರೆಗೆ ಕೋವಿಡ್ 19 ವೈರಸ್ ಸೋಂಕು 55 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಪತ್ತೆಯಾಗಿವೆ. ಅಲ್ಲದೆ 55ರಿಂದ 80 ವರ್ಷ ವಯಸ್ಸಿನವರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 25,01,156
ಒಟ್ಟು ಸಾವು (ಜಗತ್ತು) : 1,76,810
ಭಾರತ (ಸೋಂಕು): 20,004
ಸಾವು (ಭಾರತ): 641
ಚೇತರಿಕೆ : 3,121
ಕರ್ನಾಟಕ (ಸೋಂಕು): 418
ಎಲ್ಲಿ ಹೆಚ್ಚು ಸೋಂಕು
ಬೆಂಗಳೂರು 89
ಮೈಸೂರು 86
ಬೆಳಗಾವಿ 43
ವಿಜಯಪುರ 35
ಅತಿ ಹೆಚ್ಚು
ಮಹಾರಾಷ್ಟ್ರ 5,218
ಗುಜರಾತ್ 2,178
ದಿಲ್ಲಿ 2,156
ರಾಜಸ್ಥಾನ 1,659
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.