ಅರಬ್ ದೇಶಗಳಲ್ಲಿ ಸೋಂಕು ಏರಿಕೆ
ಆರ್ಥಿಕಸ್ಥಿತಿ ಸುದಾರಿಸಲು ಲಾಕ್ಡೌನ್ ತೆರವು
Team Udayavani, Jun 24, 2020, 1:13 PM IST
ಮೆಕ್ಕಾ: ಅರಬ್ ದೇಶಗಳಲ್ಲಿ ಹೆಚ್ಚಿನವುಗಳು ಈಗಾಗಲೇ ತಮ್ಮ ದೇಶದಲ್ಲಿ ಲಾಕ್ಡೌನ್ನ್ನು ಸಡಿಲಿಕೆ ಮಾಡಿದ್ದರೂ ಕೂಡ ಇಲ್ಲಿನ ಸೋಂಕು ಹರಡುವುದು ಮಾತ್ರ ಕಡಿಮೆಯಾಗಿಲ್ಲ. ಆರ್ಥಿಕ ಪರಿಸ್ಥಿತಿಯನ್ನು ಸಮದೂಗಿಸಲು ಮತ್ತೆ ಎಲ್ಲ ವ್ಯಾಪಾರ ವ್ಯವಹಾರಗಳನ್ನು ದೇಶಗಳು ಆರಂಭಿಸಿವವೆ. ಸದ್ಯ ಕೆಲವು ದೇಶಗಳ ಸೋಂಕಿತರ ಸಂಖ್ಯೆ ಈ ರೀತಿ ಇದೆ.
ಸೌದಿ ಅರೇಬಿಯಾ
ಇಲ್ಲಿ ಈಗಾಗಲೇ 164144 ಮಂದಿ ಸೋಂಕಿತರಿದ್ದಾರೆ. ಮಂಗಳವಾರ ಒಂದೇ ದಿನ ಇಲ್ಲಿ 3 ಸಾವಿರಕ್ಕಿಂತಲೂ ಅಧಿಕ ಮಂದಿ ಸೋಂಕಿತರು ಪತ್ತೆ¤ಯಾಗಿದ್ದಾರೆ. ಗುಣಮುಖರಾಗುವವರ ಸಂಖ್ಯೆಯೂ ಅಧಿಕವಾಗಿದೆ. ಮಂಗಳವಾರದಂದು 4 ಸಾವಿರ ಮಂದಿ ಗುಣಮುಖರಾಗಿದ್ದಾರೆ. 1346 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕುವೈಟ್
ಕುವೈಟ್ನ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ ಇಲ್ಲಿ ಮಂಗಳವಾರ ಕಂಡುಬಂದು ಸೋಂಕಿತರ ಸಂಖ್ಯೆ 742. ಇಂದು ಯಾವುದೇ ಸಾವು ಉಂಟಾಗಿಲ್ಲ ಎಂಬುದು ಆಶಾದಾಯಕ ವಿಚಾರ. ದೇಶದಲ್ಲಿ ಒಟ್ಟು 41033 ಮಂದಿ ಸೋಂಕಿತರಿದ್ದಾರೆ. 334 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಮಾನ್
ಒಮಾನ್ನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಮಂಗಳವಾರದಂದು 1318 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ಒಟ್ಟು 32394 ಸೋಂಕಿತರಿದ್ದು, ಹಲವಾರು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಇಂದು 3 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 14 ಆಗಿದೆ. ಈ ಎಲ್ಲ ದೇಶಗಳು ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.