ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ಪೊಲೀಸ್ ಗಸ್ತು
ಆಸ್ಟ್ರೇಲಿಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 8 ಸಾವಿರ ದಾಟಿದೆ
Team Udayavani, Jul 3, 2020, 11:50 AM IST
ಮೆಲ್ಬರ್ನ್: ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪೊಲೀಸರು ಪ್ರಯಾಣಿಕರ ವಿಚಾರಣೆ ನಡೆಸುತ್ತಿದ್ದಾರೆ.
ಸಿಡ್ನಿ: ಮೆಲ್ಬರ್ನ್ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್ ಆಗಿರುವಂತೆ ಮತ್ತು ವಿವಿಧೆಡೆಗಳಲ್ಲಿ ಅಂತಾರಾಜ್ಯ ಗಡಿಗಳನ್ನು ತೆರೆದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್ ಪೊಲೀಸರು ಗಸ್ತನ್ನು ಇನ್ನಷ್ಟು ಹೆಚ್ಚಳಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾದ ಗಡಿ ಹೊರತಾಗಿ ಬೇರೆಲ್ಲ ರಾಜ್ಯಗಳ ಅಂತಾರಾಜ್ಯ ಗಡಿಗಳನ್ನು ತೆರೆಯಲಾಗಿದೆ.
ಮೆಲ್ಬರ್ನ್ ಸೇರಿದಂತೆ ವಿವಿಧ ನಗರಗಳ ಉಪನಗರಗಳಲ್ಲಿ ಪೊಲೀಸ್ ಗಸ್ತು ಹೆಚ್ಚಲಿದೆ. ಇದರೊಂದಿಗೆ ಸೀಲ್‌ಡೌನ್ ಘೋಷಿಸಲಾದ ಪ್ರದೇಶದಲ್ಲಿ ಪೊಲೀಸರು ಮನೆಗಳ ಮೇಲೆ ಡ್ರೋನ್ ಮೂಲಕ ಕಣ್ಗಾವಲು ಇಡಲಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ರಾಜ್ಯ ಸರಕಾರಗಳು ಹೊಟೇಲ್ ಕ್ವಾರಂಟೈನ್‌ನಲ್ಲಿರುವವರ ತೀವ್ರ ನಿಗಾಕ್ಕೆ ಮುಂದಾಗಿದೆ. ವಿದೇಶದಿಂದ ಬಂದವರು ಹೊಟೇಲ್ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಎರಡು ವಾರಗಳ ಅವಧಿ ಮುಗಿಯುವ ಮೊದಲೇ ಅವರು ಅಲ್ಲಿಂದ ತೆರಳಿದ್ದಾಗಿ ಹೇಳಲಾಗಿದೆ. ಆಸ್ಟ್ರೇಲಿಯಾದಲ್ಲಿ ಒಟ್ಟು 8 ಸಾವಿರ ಪ್ರಕರಣಗಳಿದ್ದು, 104 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ. 7090 ಮಂದಿ ಚೇತರಿಸಿಕೊಂಡಿದ್ದಾರೆ.
ವಿಕ್ಟೋರಿಯಾದಲ್ಲಿ ಹೆಚ್ಚಾಗಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಗುರುವಾರ 77 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದು ವಾರಗಳಿಂದ ಇಲ್ಲಿ ನಿತ್ಯ ಎರಡಂಕಿಯ ಪ್ರಕರಣಗಳು ಕಂಡುಬರುತ್ತಿವೆ. ಇಲ್ಲಿನ ಕ್ವಾರಂಟೈನ್ ವ್ಯವಸ್ಥೆ ಸಮರ್ಪಕವಾಗಿಲ್ಲವೇ ಎಂಬ ಸಂಶಯಗಳೂ ಮೂಡಿವೆ. ಜತೆಗೆ ವಿಕ್ಟೋರಿಯಾದಲ್ಲಿ ಇತ್ತಿಚೆಗೆ ಕಂಡು ಬಂದ ಪ್ರಕರಣಗಳು ಕೋವಿಡ್ ಮತ್ತೆ ಎರಡನೇ ಬಾರಿಗೆ ದಾಳಿ ಮಾಡಿದ ಸಂಶಯ ಮೂಡಿಸಿದೆ. ಇದೇ ವೇಳೆ ಉತ್ತರ ಆಸ್ಟ್ರೇಲಿಯಾದಲ್ಲಿ ಪ್ರವಾಸಿಗರೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರು ಮೆಲ್ಬರ್ನ್ನಿಂದ ಬಂದಿದ್ದರು ಎಂದು ಹೇಳಲಾಗಿದೆ. ಉತ್ತರ ಆಸ್ಟ್ರೇಲಿಯಾ ಹೆಚ್ಚು ಮಾನವರಿಲ್ಲದ ಪ್ರದೇಶವಾಗಿದ್ದು, ಇಲ್ಲಿಯೂ ಕೋವಿಡ್ ವೈರಸ್ ಪತ್ತೆಯಾಗಿರುವುದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಸೋಂಕಿತ ವ್ಯಕ್ತಿಯನ್ನು ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.