ಕೋವಿಡ್ 19; ದುಬಾರಿ ಬೆಲೆಗೆ ಚೀನಾದ ಟೆಸ್ಟ್ ಕಿಟ್ ಖರೀದಿ: ಕಾನೂನು ಸಮರದಲ್ಲಿ ಸತ್ಯ ಬಯಲು!

ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಮತ್ತು ಆರ್ ಎನ್ ಎ ಎಕ್ಸ್ ಟ್ರಾಕ್ಷನ್ ಕಿಟ್ಸ್ ಸೇರಿದಂತೆ ಒಟ್ಟು 6,50,000 ಕಿಟ್ಸ್ ಗಳನ್ನು ಭಾರತಕ್ಕೆ ರವಾನಿಸಲಾಗಿತ್ತು

Team Udayavani, Apr 27, 2020, 6:35 PM IST

ದುಬಾರಿ ಬೆಲೆಗೆ ಕೋವಿಡ್ 19 ಟೆಸ್ಟ್ ಕಿಟ್ ಖರೀದಿ: ಕಾನೂನು ಸಮರದಲ್ಲಿ ಸತ್ಯ ಬಯಲು!

ನವದೆಹಲಿ/ಬೀಜಿಂಗ್: ಕೋವಿಡ್ 19 ಮಹಾಮಾರಿ ವೈರಸ್ ಪರೀಕ್ಷಿಸಲು ಕಳಪೆ ರಾಪಿಡ್ ಆ್ಯಂಟಿಬಾಡಿ ಕಿಟ್ಸ್ ಅನ್ನು ಭಾರತಕ್ಕೆ ಕಳುಹಿಸಿರುವ ಚೀನಾದ ವಿರುದ್ಧ ಈಗಾಗಲೇ ವಾಕ್ಸಮರ, ಜಟಾಪಟಿ ಮುಂದುವರಿದಿದೆ. ಆದರೆ ಈ ಆರ್ ಎಟಿ (ರಾಪಿಡ್ ಆ್ಯಂಟಿಬಾಡಿ ಪರೀಕ್ಷಾ ಕಿಟ್) ಕಿಟ್ಸ್ ಗಳನ್ನು ಅತೀ ದುಬಾರಿ ಬೆಲೆಗೆ ಖರೀದಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

ಭಾರತೀಯ ಡಿಸ್ಟ್ರಿಬ್ಯೂಟರ್ ಗೆ ಚೀನಾ ಕೋವಿಡ್ 19 ಟೆಸ್ಟ್ ಕಿಟ್ಸ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿತ್ತು. ಇದೀಗ ಕಿಟ್ಸ್ ಕಳಪೆ ಎಂದು ಹಲವು ರಾಜ್ಯಗಳು ಆಕ್ಷೇಪ ಎತ್ತುವ ಮೂಲಕ ರಾಪಿಡ್ ಟೆಸ್ಟ್ ಕಿಟ್ಸ್ ಬಳಸುವುದನ್ನು ನಿಲ್ಲಿಸಿವೆ. ಇದೀಗ ಡಿಸ್ಟ್ರಿಬ್ಯೂಟರ್ ಮತ್ತು ಆಮದುದಾರರ ನಡುವೆ ವ್ಯಾಜ್ಯ ಆರಂಭಗೊಂಡು ದಿಲ್ಲಿ ಕೋರ್ಟ್ ಕಟಕಟೆಯೇರಿದ ಘಟನೆ ನಡೆದಿದೆ.

ಭಾರತ ಸರ್ಕಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮೂಲಕ ಐದು ಲಕ್ಷ ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ಸ್ ಗೆ ಆರ್ಡರ್ ನೀಡಿತ್ತು. ಮೇ 27ರಂದು ಚೀನಾದ ವೋಂಡ್ ಫೋ ಕಂಪನಿ ಜತೆ ಐಸಿಎಂಆರ್ ಒಪ್ಪಂದ ಮಾಡಿಕೊಂಡಿತ್ತು ಎಂದು ಎನ್ ಡಿಟಿವಿ ವರದಿ ಮಾಡಿದೆ.

ಏಪ್ರಿಲ್ 16ರಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಟ್ವೀಟ್ ಮಾಡಿದ್ದು, ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಮತ್ತು ಆರ್ ಎನ್ ಎ ಎಕ್ಸ್ ಟ್ರಾಕ್ಷನ್ ಕಿಟ್ಸ್ ಸೇರಿದಂತೆ ಒಟ್ಟು 6,50,000 ಕಿಟ್ಸ್ ಗಳನ್ನು ಭಾರತಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದರು.

ಈ ಟೆಸ್ಟ್ ಕಿಟ್ಸ್ ಅನ್ನು ಆಮದುದಾರ ಮ್ಯಾಟ್ರಿಕ್ಸ್ ಸಂಸ್ಥೆ ತಲಾ 245 ರೂಪಾಯಿಯಂತೆ ಖರೀದಿಸಿತ್ತು. ಈಗ ಡಿಸ್ಟ್ರಿಬ್ಯೂಟರ್ಸ್ (ವಿತರಕರು) ರಿಯಲ್ ಮೆಟಾಬಾಲಿಕ್ಸ್ ಮತ್ತು ಆರ್ಕ್ ಫಾರ್ಮಾಸ್ಯೂಟಿಕಲ್ಸ್ ಭಾರತ ಸರ್ಕಾರಕ್ಕೆ ತಲಾ ಕಿಟ್ಸ್ ಗೆ 600 ರೂಪಾಯಿಗೆ ಮಾರಾಟ ಮಾಡಿದೆ ಎಂಬುದು ಕಾನೂನು ಹೋರಾಟದಲ್ಲಿ ಬಯಲಾಗಿದೆ ಎಂದು ವರದಿ ವಿವರಿಸಿದೆ.

ದುಬಾರಿ ಬೆಲೆಯ ಅಸಲಿ ಕಥೆ ಬಯಲಾಗಿದ್ದು ಹೇಗೆ ಗೊತ್ತಾ?
ತಮಿಳುನಾಡು ಸರ್ಕಾರ ಕೂಡಾ ಚೀನಾ ಕಿಟ್ಸ್ ಅನ್ನು 600 ರೂಪಾಯಿಗೆ ಆಮದುದಾರ ಮ್ಯಾಟ್ರಿಕ್ಸ್ ಸಂಸ್ಥೆಯ ಮೂಲಕ ಮತ್ತೊಂದು ಡಿಸ್ಟ್ರಿಬ್ಯೂಟರ್ ಶಾನ್ ಬಯೋಟೆಕ್ ನಿಂದ ಖರೀದಿಸಿತ್ತು. ಆದರೆ ರಿಯಲ್ ಮೆಟಾಬಾಲಿಕ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮ್ಯಾಟ್ರಿಕ್ಸ್ ಸಂಸ್ಥೆ ಮೂಲಕ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ಜತೆ ವ್ಯವಹಾರ ನಡೆಸಿರುವುದು ತಮಿಳುನಾಡು ಸರ್ಕಾರ ಒಪ್ಪಂದವನ್ನು ಉಲ್ಲಂಘಿಸಿದಂತಾಗಿದೆ ಎಂದು ಆರೋಪಿಸಿತ್ತು. ಈ ಜಟಾಪಟಿಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ದುಬಾರಿ ಬೆಲೆಗೆ ಕಿಟ್ಸ್ ಅನ್ನು ಮಾರಾಟ ಮಾಡುತ್ತಿರುವುದು ಪತ್ತೆ ಹಚ್ಚಿದ್ದು, ಇನ್ಮುಂದೆ ಪ್ರತಿ ಕಿಟ್ಸ್ ಗೆ 400 ರೂಪಾಯಿ ಪಡೆಯುವಂತೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.