ದೇಶದಲ್ಲಿ ಕೋವಿಡ್-19 ರುದ್ರನರ್ತನ: ಒಂದೇ ದಿನ 613 ಬಲಿ, 24,850 ಜನರಿಗೆ ಸೋಂಕು
Team Udayavani, Jul 5, 2020, 12:34 PM IST
ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೋವಿಡ್ -19 ಆರ್ಭಟಿಸಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 24,850 ಜನರಿಗೆ ಸೋಂಕು ತಗುಲಿದೆ.ಮಾತ್ರವಲ್ಲದೆ ಒಂದೇ ದಿನ 613 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 6,73,165 ಕ್ಕೆ ತಲುಪಿದೆ.
ದೇಶದಲ್ಲಿ ಕೋವಿಡ್ ಕಾರಣದಿಂದ ಸಾವನ್ನಪ್ಪಿದ್ದವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ 2,44,481 ಸಕ್ರೀಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟಾರೆ ಸೊಂಕು ಪೀಡಿತರಲ್ಲಿ 4,09,082 ಜನರು ಗುಣಮುಖರಾಗಿದ್ದು, ಕಳೆದ ಒಂದು ದಿನದಲ್ಲಿ 14,856 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಕಳೆದ 3 ದಿನದಲ್ಲಿ ಸತತವಾಗಿ ದೇಶದಲ್ಲಿ 20 ಸಾವಿರಕ್ಕಿಂತ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕಿನಿಂದ ಮುಕ್ತರಾಗುವವರ ಪ್ರಮಾಣ ಶೇ 60.80 ರಷ್ಟಿದೆ.
ಭಾರತದ ಒಟ್ಟು 14 ರಾಜ್ಯಗಳಲ್ಲಿ 10,000 ಕ್ಕಿಂತ ಅಧಿಕ ಮಂದಿಗೆ ವೈರಾಣು ಭಾಧಿಸಿದ್ದು, ವೈರಸ್ ಆರ್ಭಟಕ್ಕೆ ಮಹಾರಾಷ್ಟ್ರ ನಲುಗಿಹೋಗಿದೆ. ಇಲ್ಲಿ ಸುಮಾರು 2 ಲಕ್ಷ ಕ್ಕಿಂತ ಹೆಚ್ಚು ಸೋಂಕಿತರಿದ್ದು 8,671 ಜನರು ಮೃತಪಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೇ ಈ ರಾಜ್ಯದಲ್ಲಿ ಮೊದಲ 1 ಲಕ್ಷ ಪ್ರಕರಣಗಳು 96 ದಿನಗಳಲ್ಲಿ ದಾಖಲಾಗಿದ್ದವು. ಆದರೇ 1 ರಿಂದ 2 ಲಕ್ಷ ತಲುಪಲು ಕೇವಲ 22 ದಿನಗಳು ಬೇಕಾದವು.
ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ರಾಜ್ಯದ ಆರೋಗ್ಯಇಲಾಖೆ ಸಿದ್ಧವಾಗಿದೆ. ಮಾತ್ರವಲ್ಲದೆ ಜುಲೈ ಮತ್ತು ಆಗಸ್ಟ್ ತಿಂಗಳು ನಮಗೆ ನಿರ್ಣಾಯಕ ಎಂದು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶ್ ಮುಖ್ ತಿಳಿಸಿದ್ದಾರೆ.
ಮತ್ತೊಂದೆಡೆ ಚೆನ್ನೈ ನಲ್ಲೂ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ದೆಹಲಿಯಲ್ಲೂ 97 ಸಾವಿರಕ್ಕಿಂತ ಹೆಚ್ಚು ಜನರಿಗೆ ವೈರಾಣು ಇರುವುದು ಖಚಿತವಾಗಿದೆ. ಜಗತ್ತಿನಲ್ಲಿ ಭಾರತ ಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ 4ನೇ ರಾಷ್ಟ್ರ ಎನಿಸಿಕೊಂಡಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕಾ,ಬ್ರೆಜಿಲ್, ರಷ್ಯಾಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.